ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ನರಮೇಧಕ್ಕೆ (Pahalgam Terror Attack ) ಭಾರತ ಪ್ರತೀಕಾರ ತೀರಿಸುವುದಾಗಿ ಹೇಳಿದ ಬೆನ್ನಲ್ಲೇ ಯಾವ ರೀತಿ ಪ್ರತೀಕಾರ ತೀರಿಸುತ್ತದೆ ಎಂಬ ಪ್ರಶ್ನೆ ಎದ್ದಿದೆ. ಈ ಹಿಂದೆ ಉರಿ ಮೇಲೆ ದಾಳಿ ಮಾಡಿದಾಗ ಪಾಕ್ ಆಕ್ರಮಿತ ಕಾಶ್ಮೀರಕ್ಕೆ (PoK) ನುಗ್ಗಿ ಉಗ್ರರ ನೆಲೆಗಳನ್ನು ಧ್ವಂಸ ಮಾಡಿತ್ತು. ಪುಲ್ವಾಮಾ (Pulwama) ಘಟನೆಯ ಬಳಿಕ ಪಾಕ್ ಆಕ್ರಮಿತ ಕಾಶ್ಮೀರ ದಾಟಿ ಬಾಲಾಕೋಟ್‌ನಲ್ಲಿದ್ದ ಉಗ್ರರ ಲಾಂಚ್ ಪ್ಯಾಡ್‌ಗೆ ಬಾಂಬ್ ಹಾಕಿತ್ತು. ಹೀಗಾಗಿ ಈಗ ಯಾವ ರೀತಿ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂಬ ಕುತೂಹಲ ಎದ್ದಿದೆ.
ಬಿಹಾರದ ಭಾಷಣದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಉಗ್ರರು ಮತ್ತು ಉಗ್ರರಿಗೆ ಸಹಕಾರ ನೀಡುವುವರನ್ನು ಹೊಡೆದು ಹಾಕುತ್ತೇವೆ ಎಂದು ಗುಡುಗಿದ್ದರು. ಹೀಗಾಗಿ ಈ ಬಾರಿ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಯುದ್ಧ ನಡೆಯುತ್ತಾ ಎಂಬ ಪ್ರಶ್ನೆ ಎದ್ದಿದೆ. ಪಾಕಿಸ್ತಾನ ಈಗಾಗಲೇ ಯುದ್ಧ ಸನ್ನದ್ಧವಾಗಿದ್ದು ಸರ್ಕಾರದ ಮಂತ್ರಿಗಳು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಹೀಗಾಗಿ ಒಂದು ವೇಳೆ ಯುದ್ಧ ಸಂಭವಿಸಿದರೆ ಭಾರತ (India) ಮತ್ತು ಪಾಕ್ ಮೂರು ದಳಗಳ ಸಾಮರ್ಥ್ಯದ ಬಗ್ಗೆ ಮಾಹಿತಿ ನೀಡಲಾಗಿದೆ.
ಭೂಸೇನೆ
ಟ್ಯಾಂಕ್
ಭಾರತ – 4,201
ಪಾಕ್ – 2,627
ಶಸ್ತ್ರಸಜ್ಜಿತ ವಾಹನ
ಭಾರತ – 148594
ಪಾಕ್ – 17516
ಸ್ವಯಂಚಾಲಿತ ಫಿರಂಗಿ
ಭಾರತ – 100
ಪಾಕ್ – 662
ಟೋವ್ಡ್ ಫಿರಂಗಿ (Towed Artillery)
ಭಾರತ – 3975
ಪಾಕ್ – 2629
ಮೊಬೈಲ್ ರಾಕೆಟ್ ಪ್ರಾಜೆಕ್ಟರ್ ಗಳು
ಭಾರತ – 264
ಪಾಕ್ – 600
ವೈಮಾನಿಕ ಸಾಮರ್ಥ್ಯ
ಒಟ್ಟು ವಿಮಾನ
ಭಾರತ – 2,229
ಪಾಕ್ – 1,399
ಯುದ್ಧ ವಿಮಾನ
ಭಾರತ – 513
ಪಾಕ್ – 328 ಇದನ್ನೂ ಓದಿ: ನಾವು ಭಯೋತ್ಪಾದನೆಯನ್ನು ಬೆಂಬಲಿಸಿದ್ದೇವೆ – ಒಪ್ಪಿಕೊಂಡ ಪಾಕಿಸ್ತಾನ
ಡೆಡಿಕೇಟೆಡ್ ಫೈಟರ್ ಅಟ್ಯಾಕ್ ಏರ್ ಕ್ರಾಫ್ಟ್
ಭಾರತ – 130
ಪಾಕ್ – 90
ಹೆಲಿಕಾಪ್ಟರ್ ಗಳು
ಭಾರತ – 899
ಪಾಕ್ – 373
ದಾಳಿ ಹೆಲಿಕಾಪ್ಟರ್ ಗಳು
ಭಾರತ – 80
ಪಾಕ್ – 57
ಸಾರಿಗೆ ವ್ಯವಸ್ಥೆಗೆ
ಭಾರತ – 270
ಪಾಕ್ – 64
ತರಬೇತುದಾರರು
ಭಾರತ – 351
ಪಾಕ್ – 565
ವೈಮಾನಿಕ ಟ್ಯಾಂಕರ್ ಗಳು
ಭಾರತ – 6
ಪಾಕ್ – 4
ಸ್ಪೆಷಲ್ ಮಿಷನ್ ಗೆ ಬಳಕೆ
ಭಾರತ – 74
ಪಾಕ್ – 27
ನೌಕಾ ಸೇನೆ
ನೌಕೆಗಳು
ಭಾರತ – 293
ಪಾಕ್ – 321
ವಿಮಾನ ವಾಹಕ ನೌಕೆ
ಭಾರತ – 2
ಪಾಕ್ – 0
ಸಬ್ ಮರೈನ್
ಭಾರತ – 18
ಪಾಕ್ – 8
ಡೆಸ್ಟ್ರಾಯರ್ (ವಿಧ್ವಂಸಕ ನೌಕೆಗಳು)
ಭಾರತ – 13
ಪಾಕ್ – 0
ಯುದ್ಧ ನಾವೆ (ಫ್ರಿಗೇಟ್)
ಭಾರತ – 14
ಪಾಕ್ – 9
ಕಾರ್ವೆಟ್ (ಸಣ್ಣ ಯುದ್ಧ ನೌಕೆ)
ಭಾರತ – 18
ಪಾಕ್ – 9
ಪಾಟ್ರೋಲ್ ವೆಸೆಲ್ಸ್ (ಗಸ್ತು ನೌಕೆ)
ಭಾರತ – 135
ಪಾಕ್ – 69