ಶ್ರೀನಗರ: ಕಾಶ್ಮೀರದಲ್ಲಿ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದಾರೆ. ಹಿಂದೂಗಳನ್ನೇ (Hindu) ಟಾರ್ಗೆಟ್ ಮಾಡಿದ ನರಹಂತಕರು ಧರ್ಮ ಕೇಳಿ ಎದೆಗೆ ಗುಂಡಿಕ್ಕಿ ರಕ್ತದೋಕುಳಿಯಾಡಿದ್ದಾರೆ. ಹೆಸರೇನು? ಯಾವ ಧರ್ಮ ಎಂದು ಕೇಳಿ ಹತ್ಯೆ ಮಾಡಿದಲ್ಲದೇ ಇದನ್ನು ಮೋದಿಗೆ ಹೋಗಿ ಹೇಳಿ ಎಂದು ಕೌರ್ಯ ಮೆರೆದಿದ್ದಾರೆ.
ಮಂಗಳವಾರ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ (Pahalgam Terror Attack) ಬಳಿಯ ಬೈಸರಾನ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಭಾರತೀಯ ಪ್ರವಾಸಿಗರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಈ ದಾಳಿಯಲ್ಲಿ ಕನಿಷ್ಠ 27 ಜನರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಘಟನೆಯನ್ನು ಭಾರತೀಯ ಅಧಿಕಾರಿಗಳು ಭಯೋತ್ಪಾದಕ ದಾಳಿ ಎಂದು ಘೋಷಿಸಿದ್ದು, ದಿ ರೆಸಿಸ್ಟೆನ್ಸ್ ಫ್ರಂಟ್ ಎಂಬ ಸಂಘಟನೆ ಈ ದಾಳಿಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಇದನ್ನೂ ಓದಿ: ಭಾರತಕ್ಕೆ ಮರಳಿದ ಮೋದಿ – ವಿಮಾನ ನಿಲ್ದಾಣದಲ್ಲೇ ಸಭೆ
ಘಟನೆಯ ಬಳಿಕ ಹಲವು ಆತಂಕಕಾರಿ ಮಾಹಿತಿಗಳು ಹೊರ ಬಂದಿವೆ. ಹತ್ಯೆ ನಡೆದ ರೀತಿಗಳು ಆತಂಕ ಮೂಡಿಸಿವೆ. ಸೇವಾ ಸಮವಸ್ತ್ರದಲ್ಲಿ ಬಂದ ಭಯೋತ್ಪಾದಕರು, ಪ್ರವಾಸಿಗರ ಹೆಸರು ಕೇಳಿ, ಗುರುತಿನ ಚೀಟಿಗಳನ್ನು ಪರಿಶೀಲಿಸಿ ಹಿಂದೂಗಳೆಂದು ಖಚಿತಪಡಿಸಿಕೊಂಡು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ರಾಜ್ಯದಿಂದ ಪ್ರವಾಸಕ್ಕೆ ತೆರಳಿದ್ದ ಮಂಜುನಾಥ್ ರಾವ್, ಭರತ್ ಭೂಷಣ್ ಹಾಗೂ ಮದುಸೂಧನ್ ಅವರನ್ನು ಹೀಗೆ ಹತ್ಯೆ ಮಾಡಲಾಗಿದೆ. ಇದನ್ನೂ ಓದಿ: Pahalgam Attack | ಉಗ್ರರ ಅಟ್ಟಹಾಸಕ್ಕೆ ಪತ್ನಿ ಕಣ್ಣೆದುರೇ ಬೆಂಗಳೂರಿನ ಟೆಕ್ಕಿ ಸಾವು
ಖುದ್ದು ಈ ಬಗ್ಗೆ ಮೃತ ಮಂಜುನಾಥ್ ರಾವ್ ಅವರ ಪತ್ನಿ ಪಲ್ಲವಿ ಕೂಡಾ ಆರೋಪ ಮಾಡಿದ್ದಾರೆ. ನನ್ನ ಪತಿಯನ್ನು ಹತ್ಯೆ ಮಾಡಿದರು. ಮೂವರು ಮುಸ್ಲಿಮರು ಬಿಸ್ಮಿಲ್ಲಾ, ಬಿಸ್ಮಿಲ್ಲಾ ಅಂತಿದ್ರು. ನಾನು ಅಲ್ಲೇ ಇದ್ದ ಭಯೋತ್ಪಾದಕನ ಬಳಿ ನನ್ನ ಪತಿಯನ್ನು ಸಾಯಿಸಿದ್ದೀರಾ, ನನ್ನನ್ನು ಸಾಯಿಸಿ ಎಂದು ಕೇಳಿದೆ. ನನ್ನ ಮಗ ಏ ನಾಯಿ ನನ್ನ ತಂದೆಯನ್ನು ಕೊಂದೆಯಲ್ಲಾ, ನಮ್ಮನ್ನು ಕೊಂದುಬಿಡು ಎಂದ. ಇಲ್ಲ ನಿಮ್ಮನ್ನು ಸಾಯಿಸಲ್ಲ. ಮೋದಿಗೆ ಹೋಗಿ ಹೇಳು ಎಂದು ಹೋದ ಎಂದು ಹೇಳಿದ್ದಾರೆ. ಇದನ್ನೂ ಓದಿ: Pahalgam Terror Attack | ಉಗ್ರರ ದಾಳಿಗೆ ಬೆಂಗಳೂರಿನ ಮಧುಸೂದನ್ ಬಲಿ
ಇನ್ನೂ ಕೆಲವು ವ್ಯಕ್ತಿಗಳ ಖಾಸಗಿ ಅಂಗವನ್ನು ಪರಿಶೀಲಿಸಿ ಬಳಿಕ ಹತ್ಯೆ ಮಾಡಿದ್ದಾರೆ ಎನ್ನುವ ಆರೋಪಗಳಿದ್ದು, ಮಾಹಿತಿ ಖಚಿತವಾಗಿಲ್ಲ. ಆದರೆ ಹತ್ಯೆಯ ಆಯ್ಕೆ ನೋಡಿದರೆ ಭಯೋತ್ಪಾದಕರ ಟಾರ್ಗೆಟ್ ಹಿಂದೂ ಪುರುಷರೇ ಎಂಬುದು ಖಚಿತವಾಗುತ್ತಿದೆ. ಈ ದಾಳಿಯು ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಯ ನಂತರದ ಕಾಶ್ಮೀರದಲ್ಲಿ ನಡೆದ ಅತ್ಯಂತ ಘೋರ ದಾಳಿಗಳಲ್ಲಿ ಒಂದಾಗಿದೆ. ಕೇಂದ್ರವೂ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಈಗಾಗಲೇ ಶ್ರೀನಗರ ತಲುಪಿದ್ದಾರೆ. ಹೀಗಾಗೀ ಈ ಹಿಂದೂ ದಾಳಿಗೆ ಭಾರತ ಹೇಗೆ ಪ್ರತಿಕಾರ ತೀರಿಸಿಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಪುತ್ರನಿಗೆ ದ್ವಿತೀಯ ಪಿಯುಸಿಯಲ್ಲಿ 97% ಅಂಕ – ಸಂಭ್ರಮಾಚರಣೆಗೆ ಕಾಶ್ಮೀರಕ್ಕೆ ತೆರಳಿದ್ದ ಮಂಜುನಾಥ್ ಕುಟುಂಬ