ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿಗೆ (Pahalgam Terror Attack) ಪ್ರತೀಕಾರವಾಗಿ ಭಾರತ ಸಿಂಧೂ ನದಿ ಒಪ್ಪಂದವನ್ನು ಅಮಾನತಿನಲ್ಲಿಟ್ಟಿದ್ದರಿಂದ ಪಾಕಿಸ್ತಾನದಲ್ಲಿ (Pakistan) ಹರಿಯುತ್ತಿರುವ ಚೆನಾಬ್ ನದಿಯ(Chenab River) ನೀರಿನ ಮಟ್ಟ ಭಾರೀ ಇಳಿಕೆಯಾಗಿದೆ.
ಸಿಯಾಲ್‌ಕೋಟ್ ಬಳಿ ಚೆನಾಬ್ ನದಿಯ ನೀರಿನ ಮಟ್ಟ ಭಾರೀ ಇಳಿಕೆಯಾಗಿರುವ ದೃಶ್ಯ ಉಪಗ್ರಹದಲ್ಲಿ ಸೆರೆಯಾಗಿದೆ. ಏ.26 ರಂದು ನದಿಯಲ್ಲಿ ನೀರು ಹರಿಯುತ್ತಿದ್ದರೆ ಏ.29 ರಂದು ನೀರಿನ ಮಟ್ಟ ಭಾರೀ ಇಳಿಕೆಯಾಗಿರುವುದು ಚಿತ್ರದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಭಾರತ ಕೊಟ್ಟ ಶಾಕ್‌ಗೆ ತತ್ತರ – ನೆರೆ ತುರ್ತು ಪರಿಸ್ಥಿತಿ ಘೋಷಿಸಿದ ಪಾಕ್
ನೀರಿನ ಲಭ್ಯತೆ ಕಡಿಮೆಯಾಗಿದ್ದರಿಂದ ಈ ಪ್ರದೇಶದಲ್ಲಿ ಕೃಷಿ ಚಟುವಟಿಕೆಯ ಮೇಲೆ ಈಗಾಗಲೇ ಪರಿಣಾಮ ಬೀರಲು ಪ್ರಾರಂಭಿಸಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಅಯೋಧ್ಯೆಯ ಹೊಸ ಬಾಬ್ರಿ ಮಸೀದಿಗೆ ಪಾಕ್ ಸೈನಿಕರು ಮೊದಲ ಇಟ್ಟಿಗೆ ಇಡುವ ಕಾಲ ದೂರವಿಲ್ಲ: ನಾಲಿಗೆ ಹರಿಬಿಟ್ಟ ಪಾಕ್ ಸಂಸದೆ
ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ನಡೆಸಿದ ಬಳಿಕ ಭಾರತ ಸಿಂಧೂ ನದಿ ಒಪ್ಪಂದವನ್ನು ಅಮಾನತಿನಲ್ಲಿಟ್ಟಿದೆ. ಒಪ್ಪಂದವನ್ನು ಅಮಾನತಿನಲ್ಲಿಟ್ಟ ಕಾರಣ ಭಾರತ ಯಾವಾಗ ಬೇಕಾದರೂ ಪಾಕಿಸ್ತಾನಕ್ಕೆ ಮಾಹಿತಿ ನೀಡದೇ ನೀರನ್ನು ಹರಿಸಬಹುದು ಮತ್ತು ನೀರು ಹರಿಸುವುದನ್ನು ನಿಲ್ಲಿಸಬಹುದು. ಯಾವುದೇ ಮಾಹಿತಿಯನ್ನು ಪಾಕಿಸ್ತಾನಕ್ಕೆ ನೀಡಬೇಕಾದ ಅಗತ್ಯವಿಲ್ಲ.
ಪಾಕ್‌ನಲ್ಲಿ 68% ಜನ ಕೃಷಿ ಭೂಮಿಯನ್ನು ಅವಲಿಂಬಿಸಿದ್ದಾರೆ. ಚೆನಾಬ್ ನದಿಯ ಮೇಲೆ ಈಗಾಗಲೇ ಭಾರತದ ಜಲವಿದ್ಯುತ್ ಯೋಜನೆಗೆ ಚಾಲನೆ ನೀಡಲಾಗಿದೆ. ಹೀಗಿದ್ದರೂ ಮಾನವೀಯತೆ ಆಧಾರದ ಮೇಲೆ ಸಿಂಧೂ ನದಿ ಒಪ್ಪಂದವನ್ನು ಭಾರತ ಮುಂದುವರೆಸಿಕೊಂಡು ಹೋಗಿತ್ತು. ಆದರೆ ಪೆಹಲ್ಗಾಮ್ ದುರಂತದ ಬಳಿಕ ಸೆಟೆದು ನಿಂತ ಭಾರತ ಒಪ್ಪಂದವನ್ನು ಅಮಾನತಿನಲ್ಲಿಟ್ಟಿದ್ದು ಅದರ ಬಿಸಿ ಈಗ ಪಾಕ್ ತಟ್ಟುತ್ತಿದೆ.