ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ (Jammu Kashmir) ಮತ್ತೆ ಉಗ್ರರು ಬಾಲಬಿಚ್ಚಿ ಹಿಂದೂಗಳ ನರಮೇಧ ಮಾಡಿದ್ದಾರೆ. ದಕ್ಷಿಣ ಕಾಶ್ಮೀರದ ಪ್ರವಾಸಿ ತಾಣ ಪಹಲ್ಗಾಮ್ (Pahalgam) ಕಣಿವೆಯಲ್ಲಿ ಹಿಂದೂಗಳನ್ನೇ (Hindu) ಗುರಿಯಾಗಿಸಿ ಕಲಿಮಾ (Kalima) ಹೇಳಲು ಬಾರದಕ್ಕೆ ತಲೆಗೆ ಗುಂಡಿಟ್ಟಿದ್ದಾರೆ.
ಪುಣೆಯ ಸಂತೋಷ್ ಜಗದಾಳೆ(54) ಉಗ್ರರ ಕೃತ್ಯಕ್ಕೆ ಬಲಿಯಾಗಿದ್ದಾರೆ. ಉಗ್ರರು ತನ್ನ ತಂದೆಯನ್ನು ಹೇಗೆ ಹತ್ಯೆ ಮಾಡಿದ್ದರು ಎಂಬುದನ್ನು ಪುತ್ರಿ ಅಸಾವರಿ ಮಾಧ್ಯಮಕ್ಕೆ ತಿಳಿಸಿದ್ದಾರೆ. ಇದನ್ನೂ ಓದಿ: ʻನಿನ್ನನ್ನು ಕೊಲ್ಲುವುದಿಲ್ಲ, ಹೋಗಿ ಮೋದಿಗೆ ಇದನ್ನ ಹೇಳುʼ – ಶಿವಮೊಗ್ಗದ ಉದ್ಯಮಿ ಪತ್ನಿಗೆ ಉಗ್ರ ಹೇಳಿದ ಮಾತು
ಗುಂಡಿನ ದಾಳಿ ಆಗುತ್ತಿದ್ದಂತೆ ನಾವು ಟೆಂಟ್ ಒಳಗೆ ಹೋಗಿ ಅಡಗಿ ಕುಳಿತಿವು. ಟೆಂಟ್ ಬಳಿ ಬಂದ ಉಗ್ರ ತಂದೆಯನ್ನು ಹೊರಗೆ ಬರುವಂತೆ ಕರೆದ. ಟೆಂಟ್‌ನಿಂದ ಹೊರ ಬಂದ ತಂದೆಯ ಬಳಿ ಕಲಿಮಾ(ಇಸ್ಲಾಮಿಕ್ ಶ್ಲೋಕ) ಹೇಳುವಂತೆ ಸೂಚಿಸಿದರು. ತಂದೆ ನನಗೆ ತಿಳಿದಿಲ್ಲ ಎಂದು ಹೇಳಿದ ಕೂಡಲೇ ಕಿವಿ, ತಲೆ, ಬೆನ್ನಿಗೆ ಮೂರು ಗುಂಡು ಹಾರಿಸಿ ಹತ್ಯೆ ಮಾಡಿದರು ಎಂದು ವಿವರಿಸಿದರು.
ಉಗ್ರರು ನನ್ನ ಪತಿಯ ಬಳಿ ನಿನ್ನ ಧರ್ಮ ಯಾವುದು ಎಂದು ಕೇಳಿದರು. ಮುಸ್ಲಿಮ್ ಅಲ್ಲ ಎಂದು ಹೇಳಿದ ಕೂಡಲೇ ಗುಂಡಿನ ದಾಳಿ ನಡೆಸಿದರು ಎಂದು ಮಹಿಳೆಯೊಬ್ಬರು ಅಳುತ್ತಲೇ ಘಟನೆಯನ್ನು ವಿವರಿಸಿದರು.
ಹಿಂದೂಗಳನ್ನೇ ಟಾರ್ಗೆಟ್ ಮಾಡಿದ್ದ ಉಗ್ರರು 26 ಪ್ರವಾಸಿಗರನ್ನು ಕೊಂದು ರಕ್ತದ ಕೋಡಿ ಹರಿಸಿದ್ದಾರೆ. ಇಬ್ಬರು ವಿದೇಶಿಗರು ಸೇರಿದಂತೆ ರಾಶಿ ರಾಶಿ ಹೆಣಗಳನ್ನು ಟಾರ್ಪಲ್‌ನಲ್ಲಿ ಮುಚ್ಚಲಾಗಿದೆ. ಪ್ರವಾಸದ ಖುಷಿಯಲ್ಲಿದ್ದ ಪ್ರವಾಸಿಗರ ಬಳಿ ಏಕಾಏಕಿ ನುಗ್ಗಿರುವ ಲಷ್ಕರ್‌ನ ಅಂಗ ಉಗ್ರ ಸಂಘಟನೆ ಟಿಆರ್‌ಎಫ್ ಟೆರರಿಸ್ಟ್ಗಳು ಗುಂಡಿನ ದಾಳಿ ಮಾಡಿದ್ದಾರೆ. ಅದರಲ್ಲೂ, ಪುರುಷರನ್ನೇ ಟಾರ್ಗೆಟ್ ಮಾಡಿ ನರಮೇಧ ಮಾಡಿದ್ದಾರೆ.