ಶ್ರೀನಗರ: ಪಹಲ್ಗಾಮ್ನಲ್ಲಿ (Pahalgam Terrorist Attack) ನಡೆದ ಭಯೋತ್ಪಾದಕ ದಾಳಿಯ ಕುರಿತು ಬೆಚ್ಚಿ ಬೀಳಿಸುವ ಅಂಶವೊಂದು ಎನ್ಐಎ (NIA) ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಏ.22 ರಂದು ಪಹಲ್ಗಾಮ್ನ ಬೈಸರನ್ ವ್ಯಾಲಿಯಲ್ಲಿ ನಡೆದ ಹಿಂದೂಗಳ ನರಮೇಧ, ಅದಕ್ಕೂ ಎರಡು ದಿನಗಳ ಹಿಂದೆಯೇ ನಡೆಯಬೇಕಿತ್ತು. ಏ.20ರಂದು ಭಯೋತ್ಪಾದಕರು ದಾಳಿಯ ಸಂಚು ರೂಪಿಸಿಕೊಂಡು ಸ್ಥಳಕ್ಕೆ ಬಂದಿದ್ದರು. ಆದರೆ ಅಂದು ಹವಾಮಾನದಲ್ಲಿ ತೀವ್ರ ಬದಲಾವಣೆ, ತೀವ್ರವಾದ ಮಳೆ ಮತ್ತು ಮಂಜು ಮುಸುಕಿದಂತಹ ವಾತಾವರಣವಿದ್ದ ಕಾರಣದಿಂದ ಯೋಜನೆಯನ್ನು ಮುಂದೂಡಿದ್ದರು ಎಂಬುದು ಎನ್ಐಎ ತನಿಖೆಯಲ್ಲಿ ಬಯಲಾಗಿದೆ.ಇದನ್ನೂ ಓದಿ: ಐಪಿಎಲ್ಗಾಗಿ ಮಟನ್, ಪಿಜ್ಜಾ ತ್ಯಜಿಸಿದ್ದ ವೈಭವ್ – ಡಯಟ್ ಸೀಕ್ರೆಟ್ ರಿವೀಲ್ ಮಾಡಿದ ಕೋಚ್
ದಾಳಿ ಸಂಚು ರೂಪಿಸಿದ್ದ ಭಯೋತ್ಪಾದಕರ ಟಾರ್ಗೆಟ್ ಬಹುದೊಡ್ಡದಾಗಿತ್ತು. ದೊಡ್ಡ ಬೇಟೆಗಾಗಿ ಕಾದು ಬಂದಿದ್ದ ಉಗ್ರರಿಗೆ ಅಂದು ಹವಾಮಾನ ಕೈಕೊಟ್ಟಿತ್ತು. ವಾತಾವರಣದಲ್ಲಿ ಹಠಾತ್ ಬದಲಾವಣೆಯಿಂದಾಗಿ ಬೈಸರನ್ ವ್ಯಾಲಿಯಲ್ಲಿ ಜನರ ಸಂಖ್ಯೆ ಕಡಿಮೆಯಾಗಿತ್ತು. ಹೀಗಾಗಿ ಹೆಚ್ಚು ಜನರನ್ನು ಹತ್ಯೆ ಮಾಡುವ ಉದ್ದೇಶದಿಂದಲೇ ದಾಳಿ ಮಾಡುವ ಯೋಜನೆಯನ್ನು ಮುಂದೂಡಿದ್ದರು ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಏ.22ರಂದು ನಡೆದಿದ್ದೇನು?
ಹತ್ಯೆಯಾದ ದಿನ ಉಗ್ರರು ಸುತ್ತಮುತ್ತಲಿನ ಕಾಡು ಬೆಟ್ಟದಂತಿರುವ ಪ್ರದೇಶದಿಂದ ನುಗ್ಗಿ ಬಂದು ಗುಂಡು ಹಾರಿಸಿದ್ದರು ಎಂದು ಅಂದಾಜಿಸಲಾಗಿತ್ತು. ಎನ್ಐಎ ತನಿಖೆಯಲ್ಲಿ ವಿಷಯ ಬೆಳಕಿಗೆ ಬಂದಿದೆ. ಉಗ್ರರು ಏ.22 ರಂದು ಮಧ್ಯಾಹ್ನ 2:30ಕ್ಕೆ ಫುಡ್ ಸ್ಟಾಲ್ ಹಿಂಭಾಗದಲ್ಲಿ ಪ್ರವಾಸಿಗರಿಗಾಗಿ ಕಾದು ಕುಳಿತಿದ್ದರು. ಜನ ಸಮೂಹ ದೊಡ್ಡಗಾಗಿ ಸೇರುತ್ತಿದ್ದಂತೆ ಎದ್ದು ನಿಂತು ಹೆಸರು, ಧರ್ಮ ಕೇಳಿ ಏಕಾಏಕಿ ಗುಂಡಿನ ದಾಳಿ ಆರಂಭಿಸಿದ್ದರು ಎಂದು ತಿಳಿದು ಬಂದಿದೆ.ಇದನ್ನೂ ಓದಿ: ಕಾಶ್ಮೀರದಲ್ಲಿ 48 ಪ್ರವಾಸಿ ತಾಣಗಳು ಬಂದ್ – ಉಗ್ರರ ಸಂಭಾವ್ಯ ದಾಳಿಯ ಎಚ್ಚರಿಕೆ ಕೊಟ್ಟ ಗುಪ್ತಚರ