– ನನ್ನ ಅಣ್ಣನ ಕೊಂದವ್ರನ್ನ ಸಾಯ್ಸಿ ಎಂದು ಆಕ್ರೋಶ
ಚಂಡೀಗಢ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ಗುಂಡೇಟಿಗೆ (Pahalgam Terrorist Attack) ಬಲಿಯಾದ ನವವಿವಾಹಿತ, ನೌಕಾ ಸೇನೆಯ ಲೆಫ್ಟಿನೆಂಟ್ ವಿನಯ್ ನರ್ವಾಲ್ (Vinay Narwal) ಅವರ ಅಂತ್ಯಕ್ರಿಯೆಯನ್ನು ವಿನಯ್ ತಂಗಿ ಸೃಷ್ಟಿ ನೆರವೇರಿಸಿದ್ದಾರೆ.
#WATCH | Haryana | Last rites of Indian Navy Lieutenant Vinay Narwal, who was killed in the Pahalgam terror attack, being performed at his native place in Karnal. pic.twitter.com/mRxMmPkXgn
— ANI (@ANI) April 23, 2025
ಹರ್ಯಾಣದ (Haryana) ಕರ್ನಲ್‌ನಲ್ಲಿ ವಿನಯ್ ಅವರ ಅಂತ್ಯಕ್ರಿಯೆ ನೆರವೇರಿದೆ. ಅಣ್ಣನ ಚಿತೆಗೆ ತಂಗಿ ಸೃಷ್ಟಿ ಅಗ್ನಿ ಸ್ಪರ್ಶ ಮಾಡಿದ್ದಾರೆ. ಅತೀವ ದುಃಖದಿಂದ ಕಣ್ಣೀರು ಹಾಕುತ್ತಾ ವಿನಯ್ ಕುಟುಂಬಸ್ಥರು ಅಂತಿಮ ವಿಧಿ ವಿಧಾನ ಪೂರ್ಣಗೊಳಿಸಿದ್ದಾರೆ. ಇದನ್ನೂ ಓದಿ: ಜೆಪಿ ಪಾರ್ಕ್ ವಾರ್ಡ್‌ನಲ್ಲಿರುವ ಉದ್ಯಾನವನಕ್ಕೆ ಭರತ್ ಭೂಷಣ್ ಹೆಸರು
ಈ ವೇಳೆ ತಂಗಿ ಸೃಷ್ಟಿಯ ಆಕ್ರೋಶ ಕಟ್ಟೆಯೊಡೆದು, ನನ್ನ ಅಣ್ಣನ ಕೊಂದವ್ರನ್ನ ಸಾಯ್ಸಿ ಸರ್ ಎಂದು ಹರ್ಯಾಣ ಸಿಎಂ ನಯಾಬ್ ಸಿಂಗ್ ಸೈನಿಗೆ ಮನವಿ ಮಾಡಿದ್ದಾರೆ. ಅವರು ನನ್ನಣ್ಣನಿಗೆ ನೀನು ಮುಸ್ಲಿಮಾ ಎಂದು ಕೇಳಿದ್ರು. ಬಳಿಕ ಅಣ್ಣನ ಮೇಲೆ ಮೂರು ಗುಂಡು ಹಾರಿಸಿದ್ರು. ಒಂದೂವರೆ ಗಂಟೆ ಕಾಲ ನಮ್ಮ ರಕ್ಷಣೆಗೆ ಯಾರೂ ಬರಲಿಲ್ಲ. ಉಗ್ರರು ಸಾಯ್ಬೇಕು, ನಂಗೆ ನ್ಯಾಯ ಬೇಕು ಎಂದು ಸೃಷ್ಟಿ ಕಣ್ಣೀರಿಟ್ಟರು. ಇದನ್ನೂ ಓದಿ: Pahalgam Terror Attack: ಶಿವಮೊಗ್ಗ ತಲುಪಿದ ಮಂಜುನಾಥ್ ಮೃತದೇಹ
ಏಪ್ರಿಲ್ 16 ರಂದು ವಿನಯ್ ಹಾಗೂ ಹಿಮಾಂಶಿ ಅವರ ವಿವಾಹವಾಗಿತ್ತು. ಮೂರು ದಿನಗಳ ನಂತರ ಆರತಕ್ಷತೆ ನಡೆಯಿತು. ಆ ಬಳಿಕ ಜಮ್ಮು ಕಾಶ್ಮೀರಕ್ಕೆ ಹನಿಮೂನ್‌ಗೆ ತೆರಳಿದ್ದರು. ಇಬ್ಬರು ಪಹಲ್ಗಾಮ್ ಬಳಿಯ ಬೈಸರನ್‌ನ ರಮಣೀಯ ತಾಣದಲ್ಲಿ ಭೇಲ್‌ಪುರಿ ತಿನ್ನುತ್ತಿದ್ದಾಗ ಭಯೋತ್ಪಾದಕನೊಬ್ಬ ಲೆಫ್ಟಿನೆಂಟ್ ವಿನಯ್ ಅವರ ತಲೆಗೆ ಗುಂಡು ಹಾರಿಸಿದ್ದಾನೆ. ನಿನು ಮುಸಲ್ಮಾನನಾ? ಅಂತ ಕೇಳಿ ಗುಂಡು ಹಾರಿಸಿದ್ದಾನೆ. ಬಂದೂಕಿನಲ್ಲಿ ಸಿಡಿದ ಗುಂಡು ವಿನಯ್ ತಲೆಯನ್ನ ಸೀಳಿ ಪತ್ನಿ ಎದುರೇ ಪತಿ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ ನರಮೇಧ – ಬೆಂಗಳೂರಿಗೆ ಆಗಮಿಸಿದ ಮೃತದೇಹ, ಕುಟುಂಬಸ್ಥರಿಗೆ ಹಸ್ತಾಂತರ