– ಭಾರತ ಸರ್ಕಾರ ಈ ದುರ್ಘಟನೆಯ ಪ್ರತೀಕಾರ ತೆಗೆದುಕೊಳ್ಳಲಿದೆ
ಬೆಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರು ಪಹಲ್ಗಾಮ್‌ನಲ್ಲಿ (Pahalgam) ಉಗ್ರರ ಗುಂಡೇಟಿಗೆ ಬಲಿಯಾದ ಬೆಂಗಳೂರಿನ ಮತ್ತಿಕೆರೆಯ ಭರತ್ ಭೂಷಣ್ (Bharath Bhushan) ಅವರ ಮೃತದೇಹದ ಅಂತಿಮ ದರ್ಶನ ಪಡೆದರು.
ಬಳಿಕ ಬರಿಗಾಲಿನಲ್ಲೇ ಬಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದ (Pakistan) ಮೇಲೆ ನಮ್ಮವರು ದಾಳಿ ಮಾಡಬಹುದು. ದೇಶದ ಜನರ ಆಕ್ರೋಶ ಅರ್ಥ ಮಾಡಿಕೊಂಡು ಕೇಂದ್ರ ಕಠಿಣ ಕ್ರಮಕ್ಕೆ ಮುಂದಾಗುವುದಂತೂ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಕೇಂದ್ರ ಸರ್ಕಾರದ ಜೊತೆ ನಾವಿದ್ದೇವೆ, ಎಲ್ಲಾ ಉಗ್ರ ತಾಣಗಳನ್ನು ನಾಶಪಡಿಸಬೇಕು: ಸಿಎಂ
ಎಂಥಾ ಕಠಿಣ ಕ್ರಮಕ್ಕೆ ಕೇಂದ್ರ ಮುಂದಾಗುತ್ತದೆ ಅಂದರೆ ಮತ್ತೊಮ್ಮೆ ಪಾಕಿಸ್ತಾನ ನಮ್ಮ ದೇಶದ ಮೇಲೆ ಉಗ್ರ ಚಟುವಟಿಕೆ ನಡೆಸಲು ಹೆದರಬೇಕು. ಬುಧವಾರ ಕೇಂದ್ರ ಕೈಗೊಂಡ ಕಠಿಣ ನಿರ್ಣಯಗಳು ಪಾಕಿಸ್ತಾನದ ದುಗುಡ ಹೆಚ್ಚಿಸಿದೆ. ಮುಂದೆಯೂ ಪಾಕಿಸ್ತಾನದ ಮೇಲೆ ದಾಳಿ ನಡೆಯುವ ವಿಶ್ವಾಸ ನನಗೆ ಇದೆ ಎಂದು ಹೇಳಿದರು. ಇದನ್ನೂ ಓದಿ: ಪಾಕ್ ಸೇನಾಧಿಕಾರಿ ಮುನೀರ್ ಉಗ್ರ – ಲಾಡೆನ್‌ನಂತೆ ಈತನ ಅಂತ್ಯವಾಗಬೇಕು: ಪೆಂಟಗನ್ ಮಾಜಿ ಅಧಿಕಾರಿ
ಇಂದು ಸರ್ವಪಕ್ಷ ಸಭೆ ನಡೆಯಲಿದೆ. ಎಲ್ಲಾ ಪಕ್ಷಗಳೂ ಕಠಿಣ ನಡೆಗೆ ಒತ್ತಾಯಿಸುವ ಸಾಧ್ಯತೆ ಇದೆ. ಭಾರತವೂ ಪಾಕಿಸ್ತಾನದ ವಿಚಾರದಲ್ಲಿ ಕಠಿಣ ಹೆಜ್ಜೆ ಇಡಲಿದೆ. ಭಾರತ ಸರ್ಕಾರ ಈ ದುರ್ಘಟನೆಯ ಪ್ರತೀಕಾರ ತೆಗೆದುಕೊಳ್ಳಲಿದೆ. ಕರ್ನಾಟಕದ ಪ್ರವಾಸಿಗರು ರಕ್ಷಣೆ ಮಾಡಿ ಕಾಶ್ಮೀರದಿಂದ ರಾಜ್ಯ ಸರ್ಕಾರ ವಾಪಸ್ ಕರೆತರುತ್ತಿದೆ. ಸರ್ಕಾರದ ಈ ನಡೆ ಶ್ಲಾಘನೀಯ ಎಂದರು. ಇದನ್ನೂ ಓದಿ: ಉಗ್ರರ ಗುಂಡಿಗೆ ಬಲಿಯಾದ ಭರತ್ ಭೂಷಣ್ ಅಂತಿಮ ದರ್ಶನ – ಮಗು ಮುಖ ನೋಡಿ ಸಿಎಂ ಭಾವುಕ
ಮೃತ ಭರತ್ ಭೂಷಣ್ ಅಂತಿಮ ದರ್ಶನ ಪಡೆದ ರಾಜ್ಯಪಾಲರು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಭರತ್ ಭೂಷಣ್ ಅವರ ಅಣ್ಣ ಪ್ರೀತಂರಿಂದ ಘಟನೆಯ ಕುರಿತು ಮಾಹಿತಿ ಪಡೆದರು.