Connect with us

Bollywood

ಘೂಮರ್ ಹಾಡಿನಲ್ಲಿ ಕಾಣುವ ಈ ಪಾತ್ರಧಾರಿ ಬಗ್ಗೆ ಎಲ್ಲರಲ್ಲೂ ಮೂಡಿದೆ ಗೊಂದಲ

Published

on

ಮುಂಬೈ: ಪದ್ಮಾವತಿ ಸಿನಿಮಾದ ಹಾಡು `ಘೂಮರ್’ ಎಲ್ಲರಿಂದಲೂ ಅಪಾರ ಮೆಚ್ಚುಗೆಯನ್ನು ಪಡೆದುಕೊಂಡು 1 ಕೋಟಿಗೂ ಅಧಿಕ ವ್ಯೂವ್ ಗಳನ್ನು ಪಡೆದಿದೆ. ರಾಣಿ ಪದ್ಮಾವತಿಯ ಇಂಟ್ರಡಕ್ಷನ್ ಹಾಡಿನಲ್ಲಿ ದೀಪಿಕಾ ರಾಜಸ್ಥಾನಿ ಜನಪದ ಶೈಲಿಯಲ್ಲಿ ನರ್ತಿಸುವ ಮೂಲಕ ಬಾಲಿವುಡ್ ಸೆಲೆಬ್ರೆಟಿಗಳಿಂದ ಮೆಚ್ಚುಗೆಯನ್ನು ಪಡೆದಿದ್ದಾರೆ.

ಈ ಕುರಿತು ಬನ್ಸಾಲಿ ಪ್ರೊಡೆಕ್ಷನ್ ಫ್ಯಾನ್ಸ್ ಟ್ವಿಟ್ಟರ್ ನಲ್ಲಿ ಸ್ಪಷ್ಟಣೆ ನೀಡಿದೆ. ರಾಣಿ ಪದ್ಮಾವತಿ ತನ್ನ ನೆಚ್ಚಿನ ಘೂಮರ್ ನೃತ್ಯ ಮಾಡುತ್ತಿರುತ್ತಾರೆ. ಪದ್ಮಾವತಿ ಮುಂದೆ ನಟಿ ಅನುಪ್ರಿಯಾ ಗೋಯಂಕ ರಾಣಿಯ ಲುಕ್ ನಲ್ಲಿ ಕುಳಿತು ಗಾಂಭಿರ್ಯವಾಗಿ ನೃತ್ಯವನ್ನು ವೀಕ್ಷಣೆ ಮಾಡುತ್ತಿರುತ್ತಾರೆ. ಆದರೆ ಎಷ್ಟೋ ಜನಕ್ಕೆ ಅನುಪ್ರಿಯಾ ಗೋಯಂಕ ಯಾವ ಪಾತ್ರವನ್ನು ನಿರ್ವಹಿಸಿದ್ದಾರೆ ಎಂಬ ಗೊಂದಲವಿತ್ತು.

ಸಿನಿಮಾದಲ್ಲಿ ಅನುಪ್ರಿಯಾ ರಾಜಾ ರಾಣಾ ರಾವಲ್ ರತನ್ ಸಿಂಗ್ ರ ಮೊದಲ ಪತ್ನಿ ರಾಣಿ ನಾಗಮತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೂವರೆಗೂ ಅನುಪ್ರಿಯಾ ಸಿನಿಮಾದಲ್ಲಿ ನಟಿಸಿದ್ದಾರೆ ಎಂಬ ಸುದ್ದಿ ಎಲ್ಲರಿಗೂ ಗೊತ್ತಿತ್ತು. ಆದರೆ ಸಿನಿಮಾದಲ್ಲಿ ಯಾವ ಪಾತ್ರದಲ್ಲಿ ಮಿಂಚಲಿದ್ದಾರೆ ಎಂಬುದರ ರಹಸ್ಯವನ್ನು ಚಿತ್ರತಂಡ ಇದೂವರೆಗೂ ಕಾಯ್ದುಕೊಂಡಿತ್ತು. ಘೂಮರ್ ಹಾಡಿನ ಮೂಲಕ ಅನುಪ್ರಿಯಾ ಲುಕ್ ನ್ನು ಚಿತ್ರತಂಡ ರಿವೀಲ್ ಮಾಡಿದೆ.

ಘೂಮರ್ ಹಾಡು ನಿಜಕ್ಕೂ ಸಂಜಯ್ ಸರ್ ಗೆ ತುಂಬಾ ಸವಾಲುಗಳನ್ನು ನೀಡಿತ್ತು. ಸಿನಿಮಾದ ಚಿತ್ರೀಕರಣ ಪ್ರಾರಂಭಕ್ಕೂ ಮೊದಲೇ ಸಂಜಯ್ ಸರ್ ಘೂಮರ್ ನೃತ್ಯದ ಬಗ್ಗೆ ಅಧ್ಯಯನ ನಡೆಸಿದ್ದರು. ಪದ್ಮಾವತಿ ಸಿನಿಮಾದ ಚಿತ್ರೀಕರಣ ಮೊದಲು ಘೂಮರ್ ನೃತ್ಯದ ಮೂಲಕ ಆರಂಭಗೊಂಡಿತ್ತು. ಸಿನಿಮಾದ ಚಿತ್ರೀಕರಣದ ಮೊದಲ ದಿನವನ್ನು ನಾನು ಎಂದಿಗೂ ಮರೆಯುವುದಿಲ್ಲ. ಸಿನಿಮಾದ ಚಿತ್ರೀಕರಣದ ಫಸ್ಟ್ ಶಾಟ್ ನನ್ನದೇ ಎಂದು ತಿಳಿಸಿದಾಗ ನಾನು ಒಂದು ಕ್ಷಣ ನನ್ನ ದೇಹದಲ್ಲೆಲ್ಲಾ ರೋಮಾಂಚನವಾಯಿತು ಎಂದು ದೀಪಿಕಾ ಪಡುಕೋಣೆ ಹೇಳಿದ್ದಾರೆ.

ರಾಜಸ್ಥಾನಿಯ ಸರಳ ಡ್ಯಾನ್ಸ್ ಮೂವ್‍ಮೆಂಟ್ ಗಳಲ್ಲಿ ದೀಪಿಕಾ ಘೂಮರ್ ನೃತ್ಯಕ್ಕೆ ಗೆ ಜೀವ ತುಂಬಿದ್ದಾರೆ. ಹಾಡಿನಲ್ಲಿ ದೀಪಿಕಾ ಭಾರೀ ತೂಕದ ಆಭರಣಗಳನ್ನು ಧರಿಸಿ 66 ಬಾರಿ ಸುತ್ತಗಳನ್ನು ಹಾಕಿದ್ದಾರೆ. ಹಾಡಿನ ಸಾಹಿತ್ಯ ಎ.ಎಂ.ತುರಾಜ್ ಲೇಖನಿಯಲ್ಲಿ ಮೂಡಿಬಂದಿದ್ದು, ಶ್ರೇಯಾ ಘೋಷಾಲ್ ಮತ್ತು ಸ್ವರೂಪ್ ಖಾನ್ ಸಂಗಡಿಗರು ಹಿನ್ನಲೆ ಧ್ವನಿಯಾಗಿದ್ದಾರೆ. ಕೃತಿ ಮಹೇಶ್ ಮಿದ್ಯಾ, ಘೂಮರ್ ನೃತ್ಯದ ಕಲಾವಿದೆ ಜ್ಯೋತಿ ಡಿ. ತೊಮ್ಮರ್ ಅವರಿಂದ ದೀಪಿಕಾ ಈ ರಾಜಸ್ಥಾನಿ ಜನಪದ ಶೈಲಿಯ ನೃತ್ಯವನ್ನು ಕಲಿತಿದ್ದಾರೆ. ಘೂಮರ್ ಹಾಡು ಇದೂವರೆಗೂ ಯೂಟ್ಯೂಬ್ ನಲ್ಲಿ 2 ಕೋಟಿಗೂ ಅಧಿಕ ವ್ಯೂವ್ ಗಳನ್ನು ಪಡೆದುಕೊಂಡಿದೆ. ಸಿನಿಮಾ ಡಿಸೆಂಬರ್ 1ರಂದು ದೇಶಾದ್ಯಂತ ತೆರೆಕಾಣಲಿದೆ.

View this post on Instagram

Presenting… #Ghoomar #OutNow #Padmavati

A post shared by Deepika Padukone (@deepikapadukone) on

View this post on Instagram

Ranveer Singh as #Khilji

A post shared by Deepika Padukone (@deepikapadukone) on

View this post on Instagram

Ranveer Singh as #Khilji

A post shared by Deepika Padukone (@deepikapadukone) on

View this post on Instagram

#MaharawalRatanSingh #Padmavati @FilmPadmavati

A post shared by Deepika Padukone (@deepikapadukone) on

View this post on Instagram

#Padmavati @FilmPadmavati

A post shared by Deepika Padukone (@deepikapadukone) on

Click to comment

Leave a Reply

Your email address will not be published. Required fields are marked *