Connect with us

Bollywood

ಬಿಡುಗಡೆ ಆಯ್ತು `ಪದ್ಮಾವತಿ’ ಟ್ರೇಲರ್- ಮಧ್ಯಾಹ್ನ 13:03ಕ್ಕೇ ಬಿಡುಗಡೆಯಾಗಿದ್ದು ಯಾಕೆ?

Published

on

ಮುಂಬೈ: 2017ರ ಬಹು ನಿರೀಕ್ಷಿತ ಪದ್ಮಾವತಿ ಚಿತ್ರದ ಟ್ರೇಲರ್ ಇಂದು ಮಧ್ಯಾಹ್ನ ಸರಿಯಾಗಿ 13:03ಕ್ಕೇ (1 ಗಂಟೆ 3 ನಿಮಿಷ) ಬಿಡುಗಡೆಯಾಗಿದೆ. 1303ರಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಚಿತ್ತೂರ್ ಕೋಟೆಯನ್ನು ವಶಕ್ಕೆ ಪಡೆದುಕೊಂಡಿದ್ದನು. ಹಾಗಾಗಿ ಚಿತ್ರದ ಟ್ರೇಲರ್ 13.03ಕ್ಕೆ ಬಿಡುಗಡೆಯಾಗಿದೆ.

ಚಿತ್ರದ ಟ್ರೇಲರ್‍ನಲ್ಲಿ ದೀಪಿಕಾ ಪಡುಕೋಣೆ ವಸ್ತ್ರಾಭರಣದಿಂದ ಕಂಗೊಳಿಸುತ್ತಿದ್ದಾರೆ. ಇನ್ನು ಕೆಲವು ದೃಶ್ಯಗಳಲ್ಲಿ ನಿರಾಭರಣ ಸುಂದರಿಯಾಗಿ ಸಾಕಷ್ಟು ಆರ್ಕಷಕರಾಗಿ ಕಾಣಿಸಿಕೊಂಡಿದ್ದಾರೆ. ರಾಣಾ ರತನ್ ಸಿಂಗ್ ಆಗಿ ಶಾಹಿದ್ ಕಪೂರ್ ರಜಪೂತ ರಾಜನಂತೆ ಶಾಂತ ಸ್ವಭಾವದ ರಾಜನಂತೆ ಕಾಣಿಸಿಕೊಂಡಿದ್ದಾರೆ.

ರಣ್‍ವೀರ್ ಸಿಂಗ್ ರಾಕ್ಷಸ ಸ್ವರೂಪಿಯಾಗಿದ್ದ ಅಲ್ಲಾವುದ್ದೀನ್ ಖಿಲ್ಜಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಧೃಡ ಕಾಯ ಹೊಂದಿರುವ ರಣ್‍ವೀರ್ ಸಾಹಸ ದೃಶ್ಯಗಳಲ್ಲಿ ಸಾಕಷ್ಟು ಪರಿಶ್ರಮ ಹಾಕಿರುವುದನ್ನು ಟ್ರೇಲರ್ ನಲ್ಲಿ ಕಾಣಬಹುದಾಗಿದೆ. ಟ್ರೇಲರ್ ನಲ್ಲಿ ಕೆಲವು ಸೆಕೆಂಡುಗಳ ಕಾಲ ಯುದ್ಧದ ಸನ್ನಿವೇಶಗಳನ್ನು ಸಹ ತೋರಿಸಲಾಗಿದೆ. ಇನ್ನೂ ಶಾಹೀದ್ ಶಾಂತ ಸ್ವಭಾವದ ರಜಪೂತ ದೊರೆಯಾಗಿ ಮಿಂಚುತ್ತಿದ್ದಾರೆ.

ಅಲ್ಲಾವುದ್ದೀನ್ ಖಿಲ್ಜಿ ಚಿತ್ತೂರು ರಾಣಿ ಪದ್ಮಿನಿ(ಪದ್ಮಾವತಿ)ಯನ್ನು ಇಷ್ಟ ಪಟ್ಟಿದ್ದ. ಹೀಗಾಗಿ ರಾಣಿಯನ್ನು ಒಲಿಸಿಕೊಳ್ಳಲು ಚಿತ್ತೂರು ಕೋಟೆಗೆ ಮುತ್ತಿಗೆ ಹಾಕಲು ಯೋಜನೆ ರೂಪಿಸಿದ್ದ. ಅದರಂತೆ 1303ರಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಚಿತ್ತೂರು ಕೋಟೆಗೆ ದಾಳಿ ನಡೆಸಿ ಗುಹಿಲಾ ರತ್ನಸಿಂಹ(ರಾಜಾ ರತನ್ ಸಿಂಗ್) ನನ್ನು ಬಂಧಿಸಿ 8 ತಿಂಗಳು ಸೆರೆಯಲ್ಲಿಟ್ಟಿದ್ದ. ಆದರೆ ಅಲ್ಲಾವುದ್ದೀನ್‍ನಿಂದ ತಪ್ಪಿಸಿಕೊಳ್ಳಲು ರಾಣಿ ಪದ್ಮೀನಿ (ಪದ್ಮಾವತಿ) ಜೋಹರ್(ಸತಿ ಸಹಗಮನನ ಪದ್ದತಿ) ಮೂಲಕ ತನ್ನ ಪ್ರಾಣವನ್ನು ಕಳೆದುಕೊಳ್ಳುವ ಕಥೆಯನ್ನು ಚಿತ್ರ ಹೊಂದಿದೆ.

ಪದ್ಮಾವತಿ ಚಿತ್ರದಲ್ಲಿ ರಾಣಿ ಪದ್ಮಾವತಿಯಾಗಿ ದೀಪಿಕಾ ಪಡುಕೋಣೆ, ರಾಣಾ ರತನ್ ಸಿಂಗ್ ಆಗಿ ಶಾಹಿದ್ ಕಪೂರ್, ಅಲ್ಲಾವುದ್ದೀನ್ ಖಿಲ್ಜಿ ಆಗಿ ರಣ್‍ವೀರ್ ಸಿಂಗ್ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸುತ್ತಿದ್ದು, ಡಿಸೆಂಬರ್ 1 ರಂದು ಬಿಡುಗಡೆ ಆಗಲಿದೆ.+

 

 

Click to comment

Leave a Reply

Your email address will not be published. Required fields are marked *