Connect with us

Bollywood

24 ಬಾರಿ ಕಪಾಳ ಮೋಕ್ಷಕ್ಕೊಳಗಾದ ನಟ ರಣ್‍ವೀರ್ ಸಿಂಗ್

Published

on

ಮುಂಬೈ: ಬಾಲಿವುಡ್ ನ ಹಾಟ್ ಆ್ಯಂಡ್ ಸೆಕ್ಸಿ ನಟ ರಣ್‍ವೀರ್ ಸಿಂಗ್ ಸತತವಾಗಿ ನಟರೊಬ್ಬರಿಂದ 24 ಬಾರಿ ಕಪಾಳ ಮೋಕ್ಷ ಮಾಡಿಸಿಕೊಂಡಿದ್ದಾರೆ.

ಹೌದು, ರಣ್‍ವೀರ್ ಸದ್ಯ `ಪದ್ಮಾವತಿ’ ಸಿನಿಮಾದಲ್ಲಿ ನಟಿಸುತ್ತಿದ್ದು, ಚಿತ್ರೀಕರಣ ವೇಳೆ ಟೇಕ್ ಸರಿ ಬಂದಿಲ್ಲವೆಂದು ಬರೋಬ್ಬರಿ 24 ಬಾರಿ ನಟ ರಜಾ ಮುರಾದ್ ಅವರಿಂದ ಕಪಾಳ ಮೋಕ್ಷ ಮಾಡಿಸಿಕೊಂಡಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ `ಪದ್ಮಾವತಿ’ ಸಿನಿಮಾ ಐತಿಹಾಸಿಕ ಕಥೆಯನ್ನು ಹೊಂದಿದ್ದು, ಪ್ರತಿಯೊಂದು ಸೀನ್ ಗಳು ನ್ಯಾಚುರಲ್ ಆಗಿ ತೆರೆಯ ಮೇಲೆ ತರಲು ಚಿತ್ರತಂಡ ಸಾಕಷ್ಟು ಕಷ್ಟಪಡುತ್ತಿದೆ. ಈ ಹಿನ್ನೆಲೆಯಲ್ಲಿ ರಣ್‍ವೀರ್ ಕಪಾಳಕ್ಕೆ ಹೊಡೆಯುವ ಸೀನ್ ಗಾಗಿ 24 ಬಾರಿ ರೀಟೇಕ್ ಮಾಡಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಪಟ್ಟಂತೆ ಪತ್ರಿಕೆಯೊಂದು ರಣ್‍ವೀರ್ ಕೆನ್ನೆಗೆ 24 ಬಾರಿ ಹೊಡೆದ ರಜಾ ಮುರಾದ್ ಎಂದ ಶೀರ್ಷಿಕೆಯೊಂದಿಗೆ ಸುದ್ದಿಯನ್ನು ಪ್ರಕಟಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ರಣ್‍ವೀರ್ ಹೌದು, ನಿಜವಾದ ಸ್ಟೋರಿ ಎಂದು ತಮ್ಮ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

ಈ ಹಿಂದೆ ರಣ್‍ವೀರ್ ತಮ್ಮ `ಬೇಫಿಕ್ರೆ’ ಸಿನಿಮಾದ ಹಾಡಿನ ಚಿತ್ರೀಕರಣ ವೇಳೆ ಟೇಕ್ ಗಾಗಿ 21 ಬಾರಿ ಕಪಾಳ ಮೋಕ್ಷಕ್ಕೆ ಒಳಗಾಗಿದ್ದರು. ಈಗ ತಮ್ಮ ಹಳೆಯ ದಾಖಲೆಯನ್ನು ಸ್ವತಃ ತಾವೇ ಅಳಿಸಿ ಹಾಕಿದ್ದಾರೆ. ಪದ್ಮಾವತಿ ಸಿನಿಮಾದಲ್ಲಿ ರಣ್‍ವೀರ್ ಸಿಂಗ್, ದೀಪಿಕಾ ಪಡುಕೋಣೆ ಮತ್ತು ಶಾಹೀದ್ ಕಪೂರ್ ಪ್ರಧಾನ ಪಾತ್ರಗಳಲ್ಲಿ ಕಾಣಿಸಲಿದ್ದಾರೆ. ಸಿನಿಮಾ ಇದೇ ನವೆಂಬರ್ ತಿಂಗಳು ತೆರೆಕಾಣಲಿದೆ.

View this post on Instagram

True story! ???????? #Padmavati

A post shared by Ranveer Singh (@ranveersingh) on

View this post on Instagram

Deepika padukone's ghoomer song from Padmavati

A post shared by padmavati (@padmavati_film) on

View this post on Instagram

Very pretty Deepika 🙂

A post shared by padmavati (@padmavati_film) on

View this post on Instagram

Will Deepika decide who will be playing her husband role

A post shared by padmavati (@padmavati_film) on

Click to comment

Leave a Reply

Your email address will not be published. Required fields are marked *

www.publictv.in