ಈ ಹಿಂದೆ ತಲೆ ಬಾಚ್ಕೊಳ್ಳಿ ಪೌಡ್ರು ಹಾಕ್ಕೊಳ್ಳಿ ಎಂಬ ಕಾಮಿಡಿ ಚಿತ್ರವನ್ನು ಮಾಡಿದ್ದ ವಿಕ್ರಮ್ ಆರ್ಯ ಈಗ ಒಂದು ಮಹಿಳಾ ಪ್ರಧಾನ ಕಥೆ ಹೊಂದಿರುವ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಮಿಥುನ್ ಚಂದ್ರಶೇಖರ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದ ಹೆಸರು ‘ಪದ್ಮಾವತಿ’. ಇತ್ತೀಚೆಗೆ ಈ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ನಡೆಯಿತು. ಲಹರಿ ಆಡಿಯೋ ಈ ಚಿತ್ರದ ಹಾಡುಗಳನ್ನು ಹೊರತಂದಿದೆ.
Advertisement
ಫಿಲ್ಮ್ ಚೇಂಬರ್ ಅಧ್ಯಕ್ಷ ಎಸ್.ಎ. ಚಿನ್ನೇಗೌಡ್ರು, ನಿರ್ದೇಶಕ ಸಾಯಿಪ್ರಕಾಶ್, ಭಾ.ಮಾ. ಹರೀಶ್, ಉಮೇಶ್ ಬಣಕಾರ್, ಲಹರಿ ವೇಲು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
Advertisement
ಚಿತ್ರದ ನಿರ್ಮಾಪಕ ದಾಮೋದರ್ ರಾವ್ ಪಾರಗೆ ಮಾತನಾಡಿ, ನಾನು ಅನಿರೀಕ್ಷಿತವಾಗಿ ಈ ಚಿತ್ರರಂಗಕ್ಕೆ ಬಂದೆ, ಸ್ನೇಹಿತನಿಗೋಸ್ಕರ ಈ ಚಿತ್ರವನ್ನು ಮಾಡಿದ್ದೇನೆ. ತಾಯಿ ಮಗನ ಸೆಂಟಿಮೆಂಟ್ ಕಥೆ ಈ ಚಿತ್ರದಲ್ಲಿದೆ. ನಾನೂ ಸಹ ಈ ಚಿತ್ರದಲ್ಲಿ ಒಬ್ಬ ಸಾಹಿತಿಯ ಪಾತ್ರ ನಿರ್ವಹಿಸಿದ್ದೇನೆ ಎಂದು ಹೇಳಿದರು.
Advertisement
Advertisement
ನಾಯಕ ನಟ ವಿಕ್ರಮ್ ಆರ್ಯ ಮಾತನಾಡಿ, ಎರಡೂವರೆ ವರ್ಷಗಳ ನಂತರ ಮತ್ತೆ ಚಿತ್ರರಂಗಕ್ಕೆ ಬರುತ್ತಿದ್ದೇನೆ. ಗೊತ್ತಿಲ್ಲದೆ ಬಂದು ಸಿನೆಮಾ ಮಾಡಿದ್ದೆ. ಈಗ ಚಿಕ್ಕ ಬಜೆಟ್‍ನಲ್ಲಿ ಸಿನೆಮಾ ಮಾಡಿದ್ದೇವೆ. ಕಡಿಮೆ ಬಂಡವಾಳದಲ್ಲಿ ಒಂದು ಸಿನೆಮಾ ಹೇಗೆ ಮಾಡಬಹುದು ಎಂದು ಟ್ರೈ ಮಾಡಿದ್ದೇವೆ. ಮಿಲಿಟರಿ ಕ್ಯಾಪ್ಟನ್ ಆಗಿ ನಾನು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸೆಕೆಂಡ್ ಹಾಫ್‍ನಲ್ಲಿ ತಾಯಿ-ಮಗನ ಸೆಂಟಿಮೆಂಟ್ ಕಥೆ ಬರುತ್ತದೆ ಎಂದು ಹೇಳಿದರು.
ಚಿತ್ರದ ನಿರ್ದೇಶಕ ಮಿಥುನ್ ಚಂದ್ರಶೇಖರ್ ಮಾತನಾಡಿ, ನಾನು ಸಾಯಿಪ್ರಕಾಶ್ ಅವರ ಚಿತ್ರಗಳಿಗೆ ಕೆಲಸ ಮಾಡುತ್ತಾ ಚಿತ್ರರಂಗಕ್ಕೆ ಬಂದೆ. 13ಕ್ಕೂ ಹೆಚ್ಚು ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದು, ಫಸ್ಟ್ ಟೈಮ್ ಸ್ವತಂತ್ರ ನಿರ್ದೇಶಕನಾಗಿದ್ದೇನೆ. ಸಾಗರ, ಶಿವಮೊಗ್ಗ ಹಾಗೂ ಬೆಂಗಳೂರಿನಲ್ಲಿ 52 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದೇವೆ. ಲತಾ ಅವರು ಬರೆದ ಕಥೆ ಇದು. ಮೊದಲು ಈ ಪ್ರೀತಿಯ ಮರೆತು ಎಂಬ ಟೈಟಲ್ ಮಾಡಿದ್ದೆವು, ನಂತರ ಪದ್ಮಾವತಿ ಆಗಿದೆ. ಲವ್, ಮದರ್ ಸೆಂಟಿಮೆಂಟ್ ಜೊತೆಗೆ ಆಕ್ಷನ್ ಕೂಡ ಈ ಚಿತ್ರದಲ್ಲಿದೆ. 4 ಹಾಡುಗಳು ಹಾಗೂ 3 ಬಿಟ್ ಸಾಂಗ್ ಈ ಚಿತ್ರದಲ್ಲಿದೆ ಎಂದು ಹೇಳಿದರು.
ನಾಯಕಿ ಸಾಕ್ಷಿ ಮೇಘನಾ ಮಾತನಾಡಿ, ಇದು ನನ್ನ 3ನೇ ಚಿತ್ರ, ನನ್ನ ವಯಸ್ಸಿಗೆ ಮೀರಿದಂತಹ ಪಾತ್ರವನ್ನು ಈ ಚಿತ್ರದಲ್ಲಿ ಮಾಡಿದ್ದೇನೆ. ನನ್ನ ಪಾತ್ರದಲ್ಲಿ 3 ಶೇಡ್ಸ್ ಇವೆ. ಮೊದಲು ಟೀನೇಜ್, ನಂತರ ಮಿಡಲ್ ಏಜ್ ಹಾಗೂ 40ರ ಆಸುಪಾಸಿನ ಮಹಿಳೆಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು.
ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ ದಿನೇಶ್ ಕುಮಾರ್, ಚಿತ್ರದಲ್ಲಿ 5 ಹಾಡುಗಳಿಗೆ, ಡ್ಯೂಯೆಟ್, ಪ್ಯಾಥೋ ಸಾಂಗ್, ಮದರ್ ಸೆಂಟಿಮೆಂಟ್ ಹೀಗೆ ಎಲ್ಲಾ ತರದ ಹಾಡುಗಳನ್ನು ಮಾಡಿದ್ದೇವೆ. ಗಂಗಮ್ಮ ಕೂಡ ಈ ಚಿತ್ರದಲ್ಲಿ ಒಂದು ಹಾಡನ್ನು ಹಾಡಿದ್ದಾರೆ ಎಂದು ಹೇಳಿದರು.