ಕಾರವಾರ: ಅಯೋಧ್ಯೆಯ ರಾಮಮಂದಿರದಲ್ಲಿ (Ayodhya Ram Mandir) ಜನವರಿ 22 ರಂದು ನಡೆಯಲಿರುವ ‘ಪ್ರಾಣ ಪ್ರತಿಷ್ಠೆ’ ಸಮಾರಂಭಕ್ಕೆ ಪದ್ಮಶ್ರೀ ಪುರಸ್ಕೃತರನ್ನು ಆಹ್ವಾನಿಸಲಾಗಿದೆ.
ಅಂಕೋಲಾದ ಪದ್ಮಶ್ರೀ ಪುರಸ್ಕೃತರಾದ ಸುಕ್ರಿ ಬೊಮ್ಮಗೌಡ (Sukri Bommagowda), ತುಳಸಿ ಗೌಡ (Tulasi Gowda) ಅವರನ್ನು ಆಹ್ವಾನಿಸಲಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಪ್ರಾಂತ್ಯ ಪ್ರಚಾರಕರು ಆಹ್ವಾನ ಪತ್ರಿಕೆ ನೀಡಿದ್ದಾರೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ಕಮಲ ಪೀಠದ ಮೇಲೆ 36 ಅಡಿ ಅಭಯರಾಮನ ಪ್ರತಿಷ್ಠಾಪನೆ
Advertisement
Advertisement
ಹಾಲಕ್ಕಿ ಹಾಡುಗಳ ಒಡತಿ ಸುಕ್ರಜ್ಜಿ
ಸುಮಾರು 5,000 ಕ್ಕೂ ಹೆಚ್ಚು ಹಾಲಕ್ಕಿ ಹಾಡುಗಳನ್ನು ಸುಕ್ರಿ ಬೊಮ್ಮಗೌಡ ಹಾಕಿದ್ದಾರೆ. ಜನಪದ ಹಾಗೂ ಸಾಮಾಜಿಕ ಸೇವಾ ಕ್ಷೇತ್ರವನ್ನು ಗುರುತಿಸಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.
Advertisement
ವೃಕ್ಷಮಾತೆ ತುಳಸಿ ಗೌಡ
ವೃಕ್ಷಮಾತೆ ಎಂದೇ ಹೆಸರಾಗಿರುವ ತುಳಸಿ ಗೌಡ ಸಾವಿರಾರು ಮರಗಳನ್ನು ಬೆಳೆಸುವ ಮೂಲಕ ಪರಿಸರ ರಕ್ಷಣೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆ ದಿನ ‘ರಾಮಾಯಣ’ ಪ್ರಸಾರಕ್ಕೆ ಸಿದ್ಧತೆ
Advertisement
ಜನವರಿ 22 ರಂದು ರಾಮಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ಜರುಗಲಿದೆ. ಈ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ರಾಮಜಪ, ಶ್ರೀರಾಮ ಭಜನೆ ಮಾಡಲಾಗುತ್ತಿದೆ. ದೇಶದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ.