– ಈ ವಯಸ್ಸಿನಲ್ಲಿ ಕಲೆ ಗುರುತಿಸಿ ಪುರಸ್ಕಾರ ಮಾಡಿದ ಮೋದಿ ಸರ್ಕಾರಕ್ಕೆ ಧನ್ಯವಾದ
ಹುಬ್ಬಳ್ಳಿ: ಸಿನಿಮಾ ಭರಾಟೆಯಲ್ಲಿ ತೊಗಲು ಬೊಂಬೆ ಕಲೆಯು ನಶಿಸಿ ಹೋಗುತ್ತಿದೆ. ಆದರೆ ಈ ಕಲೆ ಉಳಿಯಬೇಕು ಎಂದು ಪದ್ಮಶ್ರೀ ಪ್ರಶಸ್ತಿ ವಿಜೇತೆ ಭೀಮವ್ವ (Bhimavva) ಹೇಳಿದರು.
ಹುಬ್ಬಳ್ಳಿ (Hubballi) ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂದಿನ ಜನಾಂಗಕ್ಕೆ, ಮಕ್ಕಳಿಗೆ, ಮೊಮ್ಮಕ್ಕಳಿಗೆ ಈ ತೊಗಲು ಗೊಂಬೆ (Togalu Gombe) ಕಲೆಯನ್ನು ಕಲಿಸುತ್ತೇನೆ. ಈ ವಯಸ್ಸಿನಲ್ಲಿ ಕಲೆ ಗುರುತಿಸಿ ಪುರಸ್ಕಾರ ಮಾಡಿದ ಮೋದಿ ಸರ್ಕಾರಕ್ಕೆ ಧನ್ಯವಾದಗಳು. ನನಗೆ ಬಹಳಷ್ಟು ಸಂತೋಷವಾಗಿದೆ. ದೇಶ, ವಿದೇಶದಲ್ಲಿ ಕಲೆ ಪ್ರದರ್ಶನ ಮಾಡಿದ್ದೇನೆ. ಇನ್ನೂ ಮುಂದೆ ಕಲೆ ಉಳಿಸುವ ಕಾರ್ಯ ಮಾಡುವೆ ಎಂದರು. ಇದನ್ನೂ ಓದಿ: ನಿಮ್ಗೆ ಹುಚ್ಚು ಹಿಡಿದಿದ್ಯಾ? – ಪಾಕಿಸ್ತಾನದಲ್ಲಿ ಈಗ ಸೇನೆ Vs ಪೊಲೀಸ್ ಕಿತ್ತಾಟ
ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿ (Padma Shri award) ಪಡೆದಿರುವ ಕೊಪ್ಪಳ ಜಿಲ್ಲೆಯ ಭೀಮವ್ವ ಅವರು ದೆಹಲಿಯಿಂದ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಿದ್ದರು. ಬಳಿಕ ಹುಬ್ಬಳ್ಳಿಯಿಂದ ಕುಟುಂಬಸ್ಥರ ಜೊತೆಗೆ ಸ್ವಗ್ರಾಮಕ್ಕೆ ತೆರಳಿದರು.