ಭುವನೇಶ್ವರ: ಒಡಿಶಾದ ಅಕ್ಷರ ಸಂತ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನಂದಾ ಪ್ರಸ್ಟಿ ಅವರು ಇಂದು ನಿಧನರಾಗಿದ್ದಾರೆ.
ನಂದಾ ಪ್ರಸ್ಟಿ (102) ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಕಳೆದ ವಾರ ಒಡಿಶಾದ ಜೈಪುರ ಜಿಲ್ಲೆಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಪ್ರಸ್ಟಿ ಅವರು ಕಳೆದ ಒಂದು ತಿಂಗಳಿಂದಲೂ ಜ್ವರ, ಕೆಮ್ಮು ಮತ್ತು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು ಎಂದು ಜಿಲ್ಲಾ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ ಕೊರೊನಾ ಆತಂಕ- ಯಾದಗಿರಿಯಲ್ಲಿ ಸಿದ್ಧವಾಯ್ತಿ ಹೈಟೆಕ್ ಐಸಿಯು ವಾರ್ಡ್
Advertisement
Advertisement
ನಂದಾ ಪ್ರಸ್ಟಿ ಹಲವು ದಶಕಗಳಿಂದಲೂ ಒಡಿಶಾದ ಜೈಪುರ ಜಿಲ್ಲೆಯಲ್ಲಿ ಅನೇಕ ಮಕ್ಕಳು ಮತ್ತು ದೊಡ್ಡವರಿಗೆ ಉಚಿತ ಶಿಕ್ಷಣ ನೀಡುತ್ತಿದ್ದರು. ಹಣಕಾಸಿನ ಸಮಸ್ಯೆಯಿಂದಾಗಿ ಏಳನೇ ತರಗತಿಗೇ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದ ಇವರು ತಮ್ಮ ಹಳ್ಳಿಯಲ್ಲಿ ಅನಕ್ಷರತೆ ಹೋಗಲಾಡಿಸಲು ಪಣತೊಟ್ಟಿದ್ದರು. ಸ್ವಾತಂತ್ರ್ಯ ಬಂದಾಗಿನಿಂದಲೂ ಮುಕ್ತ ಮನಸಿನಿಂದ ಉಚಿತವಾಗಿ ಶಿಕ್ಷಣ ನೀಡುತ್ತಿದ್ದರು. ನಂದಾ ಮಾಸ್ಟರ್ ಎಂದೇ ಖ್ಯಾತರಾಗಿದ್ದ ಇವರು ಈ ಬಾರಿಯ ಪದ್ಮಶ್ರೀ ಪ್ರಶಸ್ತಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಕೈಯಿಂದ ಸ್ವೀಕರಿಸಿದ್ದರು. ರಾಮನಾಥ್ ಕೋವಿಂದ್ ತಲೆ ಮೇಲೆ ಕೈಯಿಟ್ಟು ಆಶೀರ್ವಾದ ಮಾಡಿ ಪ್ರಶಸ್ತಿ ಸ್ವೀಕರಿಸಿದ್ದರು. ಇದನ್ನೂ ಓದಿ: ಬೆಂಜ್ ಗುದ್ದಿದ ರಭಸಕ್ಕೆ 3 ವಾಹನಗಳು ಜಖಂ – 1 ಸಾವು, ಇಬ್ಬರು ಗಂಭೀರ
Advertisement
Pained by the demise of Shri Nanda Prusty Ji. The much respected “Nanda Sir” will be remembered for generations due to his efforts to spread the joys of education in Odisha. He drew the nation’s attention and affection a few weeks ago at the Padma Awards ceremony. Om Shanti. pic.twitter.com/VUpyPWP9FP
— Narendra Modi (@narendramodi) December 7, 2021
Advertisement
ನಂದಾ ಪ್ರಸ್ಟಿ ಜಿಯವರ ನಿಧನದಿಂದ ನೋವಾಗಿದೆ. ಒಡಿಶಾದಲ್ಲಿ ಶಿಕ್ಷಣದ ಸಂತೋಷವನ್ನು ಹರಡಲು ಅವರು ಮಾಡಿದ ಪ್ರಯತ್ನಗಳಿಂದಾಗಿ ಹೆಚ್ಚು ಗೌರವಾನ್ವಿತ ನಂದಾ ಸರ್ ತಲೆಮಾರುಗಳವರೆಗೆ ನೆನಪಿನಲ್ಲಿ ಉಳಿಯುತ್ತಾರೆ. ಅವರು ಕೆಲವು ವಾರಗಳ ಹಿಂದೆ ಪದ್ಮ ಪ್ರಶಸ್ತಿ ಸಮಾರಂಭದಲ್ಲಿ ರಾಷ್ಟ್ರದ ಗಮನ ಮತ್ತು ಪ್ರೀತಿಯನ್ನು ಸೆಳೆದರು. ಓಂ ಶಾಂತಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.