ಬಳ್ಳಾರಿ/ ವಿಜಯನಗರ: ಹೊಸಪೇಟೆ (Hosapete) ತಾಲೂಕಿನ ಮರಿಯಮ್ಮನ ಹಳ್ಳಿ ನಿವಾಸಿ ಮಂಜಮ್ಮ ಜೋಗತಿ (Manjamma Jogathi) ಅವರು ಕನ್ನಡ ಚಿತ್ರದಲ್ಲಿ ನಟಿಸಿದ್ದಾರೆ.
Advertisement
ಕನ್ನಡದ ಶಿವಲೀಲಾ (Shivaleela) ಚಿತ್ರದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ನಟನೆ ಮಾಡಿದ್ದು, ಈ ವಿಷಯವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಶಿವಲೀಲಾ ಕನ್ನಡದ ಮಂಗಳಮುಖಿಯರ ಕಷ್ಟ ಸುಖಗಳ ಜೀವನಾಧಾರಿತ ಚಿತ್ರ, ಇದಾಗಿದ್ದು ಮಂಜಮ್ಮ ಜೋಗತಿಯವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಶಿವಲೀಲಾ ಸಿನಿಮಾ ಕನ್ನಡ, ಹಿಂದಿ, ಮಲಯಾಳಂ ತೆಲಗು ಮತ್ತು ತಮಿಳು ಐದು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದ್ದು, ಚಿತ್ರದಲ್ಲಿ ಬಹುತೇಕ ಮಂಗಳಮುಖಿಯರೇ ನಟನೆ ಮಾಡಿದ್ದು ಮತ್ತೊಂದು ವಿಶೇಷ. ಇದನ್ನೂ ಓದಿ: ಮೂರೂವರೆ ವರ್ಷಗಳ ಬಳಿಕ ಜೆಡಿಎಸ್ ಕಚೇರಿಗೆ ಬಂದ ಜಿ.ಟಿ ದೇವೇಗೌಡ- ಸಿಹಿ ತಿನ್ನಿಸಿ ಸ್ವಾಗತಿಸಿದ ಹೆಚ್‌ಡಿಕೆ
Advertisement
Advertisement
ಶಿವಲೀಲಾ ಚಿತ್ರವನ್ನು ಅಶೋಕ್ ಜಯರಾಮ್ ನಿರ್ದೇಶನ ಮಾಡಿದ್ದು, ಶಿವಲೀಲಾ ಚಿತ್ರದಲ್ಲಿ ನಿರ್ಮಾಪಕರಾಗಿ ಮತ್ತು ನಟರಾಗಿ ಅಶೋಕ್ ಜಯರಾಮ್ ನಟನೆ ಮಾಡಿದ್ದಾರೆ. ನಾಯಕ ನಟರಾಗಿ ಆರ್ಯನ್, ಕಲಾ ನಿರ್ದೇಶಕ ಕನಕ ವಾಲ್ಮೀಕಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಈ ಕುರಿತು ಮಾತನಾಡಿದ ಮಂಜಮ್ಮ ಜೋಗತಿ ಚಿತ್ರದಲ್ಲಿ ಅವಕಾಶ ಸಿಕ್ಕಿದ್ದು, ಸಂತೋಷ ತಂದಿದೆ. ಮೇಲಾಗಿ ಈ ಚಿತ್ರದಲ್ಲಿ ಮಂಗಳಮುಖಿ ಅವರ ಜೀವನ, ಅವರು ಎದುರಿಸುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲಿದೆ ಎಂದಿದ್ದಾರೆ. ಇದನ್ನೂ ಓದಿ: ದೈವ ನರ್ತಕರಿಗೆ ಮಾಸಾಶನ – ವೀರಗಾಸೆ ಕುಣಿತ ಮಾಡುವ ನಮಗೂ ಕೊಡಿ ಪುರವಂತರು ಒತ್ತಾಯ