ಹುಬ್ಬಳ್ಳಿ: ಹಿಜಬ್ ಬಗ್ಗೆ ಕೋರ್ಟ್ ನೀಡಿರುವ ತೀರ್ಪನ್ನು ಗೌರವಿಸಿ. ಕೆಲವೊಮ್ಮೆ ಹರಾಮ್ ಇದ್ದದ್ದನ್ನು ಸಹ ಹಲಾಲ್ ಎಂದು ಭಾವಿಸಿಕೊಂಡು ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಹಿಜಬ್ ಕುರಿತು ಹೈಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಪದ್ಮಶ್ರೀ ಪುರಸ್ಕೃತ ಅಬ್ದುಲ್ ಖಾದರ್ ನಡುಕಟ್ಟಿನ್ ಅಭಿಪ್ರಾಯಪಟ್ಟಿದ್ದಾರೆ.
Advertisement
ಹುಬ್ಬಳ್ಳಿಯಲ್ಲಿ ಹಿಜಬ್ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಮುಸ್ಲಿಂ ಬಾಂಧವರಲ್ಲಿ ನನ್ನದೊಂದು ವಿನಂತಿ ಏನೆಂದರೆ, ನಾವು ಯಾವ ದೇಶದಲ್ಲಿ ಇರುತ್ತೇವೆಯೋ ಆ ದೇಶದ ನಿಯಮಗಳನ್ನು ಪಾಲಿಸಬೇಕು ಎಂದು ಮೊಹಮ್ಮದ್ ಪೈಗಂಬರರೇ ಹೇಳಿದ್ದಾರೆ. ಇದೀಗ ನಾವು ಇರುವ ದೇಶದ ನಿಯಮಗಳನ್ನು ಗೌರವಿಸಿ ಎಂದು ಮನವಿ ಮಾಡಿಕೊಂಡರು. ಇದನ್ನೂ ಓದಿ: ಉಕ್ರೇನ್‍ನಲ್ಲಿ ಮಡಿದ ನವೀನ್ ಪಾರ್ಥೀವ ಶರೀರ ಕೊನೆಗೂ ತಾಯ್ನಾಡಿಗೆ
Advertisement
Advertisement
ಹಿಜಬ್ ಬಗ್ಗೆ ಹೈಕೋರ್ಟ್ ನೀಡಿರುವ ತೀರ್ಪನ್ನು ಗೌರವಿಸಿ ಕೆಲವೊಮ್ಮೆ ಹರಾಮ್ ಇದ್ದದ್ದನ್ನು ಸಹ ಹಲಾಲ್ ಎಂದು ಭಾವಿಸಿಕೊಂಡು ಹೊಂದಾಣಿಕೆ ಮಾಡಿಕೊಳ್ಳಬೇಕು. ರಾಜ್ಯದ ಉಚ್ಚನ್ಯಾಯಾಲಯ ನೀಡಿರುವ ಆದೇಶವನ್ನು ಪಾಲನೆ ಮಾಡೋಣ. ನಮ್ಮ ನೆಲೆದ ಕಾನೂನಿಗೆ ಗೌರವ ನೀಡಬೇಕು. ಹಿಜಬ್ ವಿಚಾರದಲ್ಲಿ ಹೋರಾಟ ಮಾಡುವುದು ಸರಿಯಲ್ಲ ಎಂದು ಮುಸ್ಲಿಂ ಬಾಂಧವರಲ್ಲಿ ವಿನಂತಿಸಿಕೊಂಡರು. ಇದನ್ನೂ ಓದಿ: ಮಹಾತ್ಮ ಗಾಂಧಿ ಧರ್ಮಪತ್ನಿ ಕೂಡ ತಲೆಗೆ ಸೆರಗು ಹಾಕುತ್ತಿದ್ದರು: ಹಿಜಬ್ ಬೆಂಬಲಿಸಿದ ಹೆಚ್‌ಡಿಕೆ
Advertisement