ನವದೆಹಲಿ: 2024ನೇ ಸಾಲಿನ ಪದ್ಮ ಪ್ರಶಸ್ತಿಗಳಿಗೆ (Padma Awards 2024) ಆಯ್ಕೆಯಾಗಿರುವವರ ಪಟ್ಟಿ ಗುರುವಾರ ಪ್ರಕಟಗೊಂಡಿದೆ. ಕರ್ನಾಟಕದ ಇಬ್ಬರು ಸೇರಿ ಒಟ್ಟು 34 ಮಂದಿಯನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸಾಮಾಜಿಕ ಕಾರ್ಯಕರ್ತೆ ಪ್ರೇಮ ಧನರಾಜ್ (Prema Dhanraj) ಹಾಗೂ ಬುಡಕಟ್ಟು ಸಮುದಾಯದ ಮೈಸೂರಿನ ಜೇನುಕುರುಬ ಸೋಮಣ್ಣ (Somanna) ಸೇರಿ ಒಟ್ಟು 34 ಮಂದಿಗೆ ಪದ್ಮಶ್ರೀ (Padma Shri) ಪ್ರಶಸ್ತಿ ದಕ್ಕಿದೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯು ದೇಶಕ್ಕೆ ಐತಿಹಾಸಿಕ ಕ್ಷಣ: ದ್ರೌಪದಿ ಮುರ್ಮು
Advertisement
Advertisement
ಸೋಮಣ್ಣ: ಮೈಸೂರಿನ ಬುಡಕಟ್ಟು ಕಲ್ಯಾಣ ಕಾರ್ಯಕರ್ತ ಸೋಮಣ್ಣ ಅವರು 4 ದಶಕಗಳಿಂದ ಜೇನು ಕುರುಬ ಜನಾಂಗದ ಉನ್ನತಿಗಾಗಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಸಮಾಜಕಾರ್ಯ ಕ್ಷೇತ್ರದಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ.
Advertisement
Advertisement
ಪ್ರೇಮ ಧನರಾಜ್: ಪ್ಲಾಸ್ಟಿಕ್ ಸರ್ಜನ್ ವೈದ್ಯೆ, ಸಮಾಜ ಸೇವಕಿ, ಬೆಂಕಿಯಲ್ಲಿ ಸುಟ್ಟುಹೋದ ದೇಹಗಳನ್ನು ಸರ್ಜರಿ ಮೂಲಕ ಸರಿಪಡಿಸುವುದು, ಅವರಲ್ಲಿ ಮತ್ತೆ ಜೀವನೋತ್ಸಾಹ ತುಂಬುವ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. ಸುಟ್ಟಗಾಯ ತಡೆಗಟ್ಟುವಿಕೆ ಜಾಗೃತಿ ಮತ್ತು ನೀತಿ ಸುಧಾರಣೆಗಾಗಿ ಹೋರಾಡುತ್ತಿದ್ದಾರೆ. ವೈದ್ಯಕೀಯ (ಸ್ಥಳೀಯ ಸುಟ್ಟಗಾಯಗಳು) ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದನ್ನೂ ಓದಿ: ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ.. ಕಲಾ ಸೇವೆಯಲ್ಲೇ ಮುಂದುವರಿಯುತ್ತೇನೆ: ಶಿಲ್ಪಿ ಅರುಣ್ ಯೋಗಿರಾಜ್