Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ಕರ್ನಾಟಕದ ಇಬ್ಬರು ಸೇರಿ 34 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ

Public TV
Last updated: January 25, 2024 11:30 pm
Public TV
Share
5 Min Read
PADMASHRI AWARD
SHARE

ನವದೆಹಲಿ: 2024ನೇ ಸಾಲಿನ ಪದ್ಮ ಪ್ರಶಸ್ತಿಗಳಿಗೆ ಆಯ್ಕೆಯಾದವರ ಪಟ್ಟಿ ರಿಲೀಸ್ ಆಗಿದೆ. ಕರ್ನಾಟಕದ ಇಬ್ಬರು ಸೇರಿ 34 ಮಂದಿ ವಿವಿಧ ಕ್ಷೇತ್ರಗಳ ಸಾಧಕರು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

34 ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರ ಪಟ್ಟಿ ಇಲ್ಲಿದೆ..

ಪರ್ಬತಿ ಬರುವಾ: ಮಾವುತರಾಗಿ ಕೆಲಸ ಮಾಡುವ ಭಾರತದ ಮೊದಲನೇ ಮಹಿಳೆ ಇವರಾಗಿದ್ದಾರೆ. ಸಾಮಾನ್ಯವಾಗಿ ಪುರುಷರೇ ಮಾವುತರಾಗಿರುತ್ತಾರೆ. ಇವರು ಆ ಸಂಪ್ರದಾಯವನ್ನು ಮುರಿದು ತಮ್ಮದೇ ಛಾಪು ಮೂಡಿಸಿದ್ದಾರೆ.

ಜಾಗೇಶ್ವರ್ ಯಾದವ್: ಇವರು ಜಶ್‍ಪುರದ ಬುಡಕಟ್ಟು ಕಲ್ಯಾಣ ಕಾರ್ಯಕರ್ತರು. ಅವರು ಅಂಚಿನಲ್ಲಿರುವ ಬಿರ್ಹೋರ್ ಮತ್ತು ಪಹಾಡಿ ಕೊರ್ವಾ ಜನರ ಉನ್ನತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ.

ಚಾಮಿ ಮುರ್ಮು: ಸೆರೈಕೆಲಾ ಖಾರ್ಸಾವನ್ ಇವರು, ಬುಡಕಟ್ಟು ಪರಿಸರವಾದಿ ಮತ್ತು ಮಹಿಳಾ ಸಬಲೀಕರಣದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ.

ಗುವಿರ್ಂದರ್ ಸಿಂಗ್: ಹರಿಯಾಣದ ಇವರು, ನಿರಾಶ್ರಿತರು, ನಿರ್ಗತಿಕರು, ಮಹಿಳೆಯರು, ಅನಾಥರು ಮತ್ತು ದಿವ್ಯಾಂಗರ ಸುಧಾರಣೆಗಾಗಿ ಕೆಲಸದಲ್ಲಿ ತೊಡಗಿದ್ದಾರೆ.

ಸತ್ಯನಾರಾಯಣ ಬೇಲೇರಿ: ಕಾಸರಗೋಡಿನ ರೈತರಾದ ಇವರು, 650 ಕ್ಕೂ ಹೆಚ್ಚು ಸಾಂಪ್ರದಾಯಿಕ ಭತ್ತದ ತಳಿಗಳನ್ನು ಸಂರಕ್ಷಿಸುವ ಮೂಲಕ ಭತ್ತದ ಬೆಳೆ ಸಂರಕ್ಷಕರಾಗಿದ್ದಾರೆ.

ದುಖು ಮಾಝಿ: ಪಶ್ಚಿಮ ಬಂಗಾಳದ ಸಿಂಡ್ರಿ ಗ್ರಾಮದ ಬುಡಕಟ್ಟು ಪರಿಸರವಾದಿ. ಸುಮಾರು 5000 ಆಲದ ಮರ, ಮಾವು ಸೇರಿದಂತೆ ಹಲವಾರು ಗಿಡ ಮರಗಳನ್ನು ಇವರು ಬೆಳೆಸಿದ್ದಾರೆ.

ಕೆ ಚೆಲ್ಲಮ್ಮಾಳ್: ದಕ್ಷಿಣ ಅಂಡಮಾನ್‍ನ ಸಾವಯವ ಕೃಷಿಕ, 10 ಎಕರೆ ಸಾವಯವ ಕೃಷಿಯನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದರು. ಸುಮಾರು 150 ರೈತರಿಗೆ ಇವರು ಪ್ರೇರಣೆಯಾಗಿದ್ದಾರೆ.

ಸಂಗತಂಕಿಮಾ: ಮಿಜೋರಾಂನ ಅತಿದೊಡ್ಡ ಅನಾಥಾಶ್ರಮ `ತುಟಕ್ ನುನ್‍ಪುಟು ತಂಡ’ವನ್ನು ನಡೆಸುತ್ತಿದ್ದು ಇವರ ಈ ವಿಶೇಷ ಸೇವೆಗೆ ಪದ್ಮಶ್ರೀ ಗೌರವ ಸಿಕ್ಕಿದೆ.

ಹೇಮಚಂದ್ ಮಾಂಝಿ: ಇವರು ಚತ್ತೀಸ್‍ಗಢದ ನಾರಾಯಣಪುರದ ಸಾಂಪ್ರದಾಯಿಕ ವೈದ್ಯರು, 5 ದಶಕಗಳಿಂದ ಗ್ರಾಮಸ್ಥರಿಗೆ ಆರೋಗ್ಯ ಸೇವೆಯನ್ನು ಒದಗಿಸುತ್ತಿದ್ದಾರೆ. ಇವರು 15ನೇ ವಯಸ್ಸಿನಿಂದಲೇ ನಿರ್ಗತಿಕರಿಗೆ ಸೇವೆ ಸಲ್ಲಿಸಲು ಪ್ರಾರಂಭಿಸಿದ್ದರು.

ಯಾನುಂಗ್ ಜಮೋಹ್ ಲೆಗೊ: ಪೂರ್ವ ಸಿಯಾಂಗ್ ಮೂಲದ ಗಿಡಮೂಲಿಕೆ ಔಷಧಿ ತಜ್ಞರು 10,000 ಕ್ಕೂ ಹೆಚ್ಚು ರೋಗಿಗಳಿಗೆ ವೈದ್ಯಕೀಯ ಆರೈಕೆಯನ್ನು ಒದಗಿಸಿದ್ದಾರೆ. 1 ಲಕ್ಷ ವ್ಯಕ್ತಿಗಳಿಗೆ ಹಾಗೂ ಸ್ವಸಹಾಯ ಗುಂಪುಗಳಿಗೆ ಔಷಧೀಯ ಗಿಡಮೂಲಿಕೆಗಳ ಬಗ್ಗೆ ಶಿಕ್ಷಣ ನೀಡಿದ್ದಾರೆ.

ಸೋಮಣ್ಣ: ಮೈಸೂರಿನ ಗಿರಿಜನ ಕಲ್ಯಾಣ ಕಾರ್ಯಕರ್ತ, 4 ದಶಕಗಳಿಂದ ಜೇನು ಕುರುಬ ಜನಾಂಗದ ಅಭ್ಯುದಯಕ್ಕಾಗಿ ಅವಿರತವಾಗಿ ಶ್ರಮಿಸುತ್ತಿದ್ದಾರೆ.

ಸರ್ಬೇಶ್ವರ ಬಾಸುಮತರಿ: ಇವರು ಅಸ್ಸಾಂನ ಬುಡಕಟ್ಟು ರೈತರು, ಮಿಶ್ರ, ಸಮಗ್ರ ಕೃಷಿ ವಿಧಾನವನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿದ್ದಾರೆ. ತೆಂಗು, ಕಿತ್ತಳೆ, ಭತ್ತ, ಲಿಚಿಸ್ ಮತ್ತು ಮೆಕ್ಕೆಜೋಳದಂತಹ ವಿವಿಧ ಬೆಳೆಗಳನ್ನು ಇವರು ಕೃಷಿ ಮಾಡಿದ್ದಾರೆ.

ಪ್ರೇಮಾ ಧನರಾಜ್: ಕರ್ನಾಟಕದ ವೈದ್ಯೆ. ಪ್ಲಾಸ್ಟಿಕ್ ಸರ್ಜರಿ, ಸುಟ್ಟ ಸಂತ್ರಸ್ತರ ಆರೈಕೆ ಮತ್ತು ಪುನರ್ವಸತಿಗಾಗಿ ದುಡಿಯುತ್ತಿದ್ದಾರೆ.

ವಿಶ್ವನಾಥ ದೇಶಪಾಂಡೆ: ಮಹಾರಾಷ್ಟ್ರದ ಇವರು, ಅಂತಾರಾಷ್ಟ್ರೀಯ ಮಲ್ಲಕಂಬ ತರಬೇತುದಾರರು, ಜಾಗತಿಕ ಮಟ್ಟದಲ್ಲಿ ಕ್ರೀಡೆಯನ್ನು ಪುನರುಜ್ಜೀವನಗೊಳಿಸುವ ಮತ್ತು ಜನಪ್ರಿಯಗೊಳಿಸುವಲ್ಲಿ ಅವಿರತವಾಗಿ ಶ್ರಮಿಸಿದವರು. 50 ದೇಶಗಳ ಸುಮಾರು 5000 ಜನರಿಗೆ ಇವರು ತರಬೇತಿ ನೀಡಿದ್ದಾರೆ.

ಯಜ್ದಿ ಮಾನೇಕ್ಷಾ ಇಟಲಿಯ: ಗುಜರಾತ್‍ನ ಇವರು, ಭಾರತದ ಚೊಚ್ಚಲ ಸಿಕಲ್ ಸೆಲ್ ಅನೀಮಿಯಾ ನಿಯಂತ್ರಣ ಕಾರ್ಯಕ್ರಮದ (ಎಸ್‍ಸಿಎಸಿಪಿ) ಅಭಿವೃದ್ಧಿಯ ಪ್ರವರ್ತಕರಾದ ಖ್ಯಾತ ಸೂಕ್ಷ್ಮ ಜೀವಶಾಸ್ತ್ರಜ್ಞರು.

ಶಾಂತಿ ದೇವಿ ಪಾಸ್ವಾನ್ ಮತ್ತು ಶಿವನ್ ಪಾಸ್ವಾನ್: ಇವರು ಬಿಹಾರ್‍ನ ದುಸಾಧ್ ಸಮುದಾಯದ ದಂಪತಿ, ಜಾಗತಿಕವಾಗಿ ಗುರುತಿಸಲ್ಪಟ್ಟ ಗೋಡ್ನಾ ವರ್ಣಚಿತ್ರಕಾರರು. ಜಪಾನ್ ಮತ್ತು ಹಾಂಗ್ ಕಾಂಗ್‍ನಂತಹ ದೇಶಗಳಲ್ಲಿ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ. 20,000 ಕ್ಕೂ ಹೆಚ್ಚು ಮಹಿಳೆಯರಿಗೆ ತರಬೇತಿ ನೀಡಿದ್ದಾರೆ.

ರತನ್ ಕಹಾರ್: ಬಿರ್ಭೂಮ್‍ನ ಹೆಸರಾಂತ ಬದು ಜಾನಪದ ಗಾಯಕ, 60 ವರ್ಷಗಳಿಂದ ಜಾನಪದ ಸಂಗೀತಕ್ಕಾಗಿ ದುಡಿದಿದ್ದಾರೆ.

ಅಶೋಕ್ ಕುಮಾರ್ ಬಿಸ್ವಾಸ್: ಬಿಹಾರ್‍ನ ಸಮೃದ್ಧ ಟಿಕುಲಿ ವರ್ಣಚಿತ್ರಕಾರರು, ಕಳೆದ 5 ದಶಕಗಳಲ್ಲಿ ತಮ್ಮ ಪ್ರಯತ್ನಗಳ ಮೂಲಕ ಮೌರ್ಯ ಯುಗದ ಕಲಾಪ್ರಕಾರದ ಪುನರುಜ್ಜೀವನ ಮತ್ತು ಮಾರ್ಪಾಡುಗಾಗಿ ಮನ್ನಣೆ ಪಡೆದಿದ್ದಾರೆ.

ಬಾಲಕೃಷ್ಣನ್ ಸದನಂ ಪುತಿಯಾ ವೀಟಿಲ್: ಕೇರಳದ ಇವರು, 60 ವರ್ಷಗಳಿಂದ ಪ್ರಸಿದ್ಧ ಕಲ್ಲುವಾಝಿ ಕಥಕ್ಕಳಿ ನರ್ತಕರಾಗಿದ್ದಾರೆ. ಇದೊಂದು ವಿಶೇಷವಾದ ನೃತ್ಯವಾಗಿದ್ದು ಇಲ್ಲಿ ಬಳಕೆಯಾಗುವ ಸಂಗೀತ ಅನುಕರಣ ಅವ್ಯಯಗಳಂತೆ ಇದ್ದು, ನೃತ್ಯಕ್ಕೆ ವಿಶೇಷ ಮೆರುಗು ನೀಡುತ್ತದೆ.

ಉಮಾ ಮಹೇಶ್ವರಿ ಡಿ: ಆಂದ್ರಪ್ರದೇಶದ ಇವರು, ಮೊದಲ ಮಹಿಳಾ ಹರಿಕಥಾ ನಿರೂಪಕಿ, ಸಂಸ್ಕøತ ವಾಚನದಲ್ಲಿ ವಿಶೇಷ ಕೌಶಲ್ಯ ಹೊಂದಿದ್ದಾರೆ.

ಗೋಪಿನಾಥ್ ಸ್ವೈನ್: ಒಡಿಸ್ಸಾದ ಗಂಜಾಂನ ಇವರು, ಕೃಷ್ಣ ಲೀಲಾ ಗಾಯಕರು, ಸಂಪ್ರದಾಯವನ್ನು ಉಳಿಸಲು ಮತ್ತು ಪ್ರಚಾರ ಮಾಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ.

ಸ್ಮೃತಿ ರೇಖಾ ಚಕ್ಮಾ: ತ್ರಿಪುರಾದ ಇವರು ಚಕ್ಮಾ ಲೋಯಿನ್‍ಲೂಮ್ ಶಾಲ್ ನೇಕಾರರು, ಪರಿಸರ ಸ್ನೇಹಿ ಬಣ್ಣ ಬಳಸಿ ಹತ್ತಿ ಎಳೆಗಳನ್ನು ಸಾಂಪ್ರದಾಯಿಕ ವಿನ್ಯಾಸಗಳಾಗಿ ಪರಿವರ್ತಿಸಿ, ನೈಸರ್ಗಿಕ ಬಣ್ಣಗಳ ಬಳಕೆಗೆ ಉತ್ತೇಜನ ನೀಡಿದ್ದಾರೆ.

ಓಂಪ್ರಕಾಶ್ ಶರ್ಮಾ: ಮಧ್ಯಪ್ರದೇಶದ ಇವರು ಮಾಲ್ವಾ ಪ್ರದೇಶದ ಈ 200 ವರ್ಷಗಳ ಹಳೆಯ ಸಾಂಪ್ರದಾಯಿಕ ನೃತ್ಯ ನಾಟಕವನ್ನು ಪ್ರಚಾರ ಮಾಡಲು ತಮ್ಮ ಜೀವನದ 7 ದಶಕಗಳನ್ನು ಮೀಸಲಿಟ್ಟ ಮ್ಯಾಕ್ ಥಿಯೇಟರ್ ಕಲಾವಿದರಾಗಿದ್ದಾರೆ.

ನಾರಾಯಣನ್ ಇಪಿ: ಕೆರಳದ ಕಣ್ಣೂರಿನ ಹಿರಿಯ ತೆಯ್ಯಂ ಜಾನಪದ ನೃತ್ಯಗಾರರು – ವಸ್ತ್ರ ವಿನ್ಯಾಸ ಮತ್ತು ಮುಖವರ್ಣಿಕೆ ತಂತ್ರಗಳನ್ನು ಒಳಗೊಂಡಂತೆ ಇಡೀ ತೆಯ್ಯಂನಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದಾರೆ.

ಭಗಬತ್ ಪದಾನ್: ಒಡಿಸ್ಸಾದ ಇವರು, ಬಾರ್ಗಢ್‍ನ ಶಬ್ದ ನೃತ್ಯ ಜಾನಪದ ನೃತ್ಯದ ಕಲಾವಿದರು.

ಸನಾತನ ರುದ್ರ ಪಾಲ್: ಪಶ್ಚಿಮ ಬಂಗಾಳದ ಇವರು, 5 ದಶಕಗಳ ಅನುಭವ ಹೊಂದಿರುವ ಪ್ರತಿಷ್ಠಿತ ಶಿಲ್ಪಿ, ಸಾಂಪ್ರದಾಯಿಕ ಕಲಾ ಪ್ರಕಾರವನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವ – ಸಬೇಕಿ ದುರ್ಗಾ ವಿಗ್ರಹಗಳನ್ನು ರಚಿಸುವಲ್ಲಿ ಪರಿಣತಿ ಹೊಂದಿದ್ದಾರೆ.

ಬದ್ರಪ್ಪನ್ ಎಂ: ಕೊಯಮತ್ತೂರಿನ ವಲ್ಲಿ ಓಯಿಲ್ ಕುಮ್ಮಿ ಜಾನಪದ ನೃತ್ಯದ ಪ್ರತಿಪಾದಕ – `ಮುರುಗ್ಗನ್’ ಮತ್ತು `ವಲ್ಲಿ’ ದೇವತೆಗಳ ಕಥೆಗಳ ಹಾಡು ಮತ್ತು ನೃತ್ಯ ಪ್ರದರ್ಶನದ ಕಲಾವಿದರಾಗಿದ್ದಾರೆ.

ಜೋರ್ಡಾನ್ ಲೆಪ್ಚಾ: ಸಿಕ್ಕಿಮ್‍ನ ಲೆಪ್ಚಾ ಬುಡಕಟ್ಟಿನ ಸಾಂಸ್ಕೃತಿಕ ಪರಂಪರೆಯನ್ನು ಪೆÇೀಷಿಸುವ ಮಂಗನ್‍ನ ಬಿದಿರಿನ ಕುಶಲಕರ್ಮಿಯಾಗಿದ್ದಾರೆ. 25 ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದಾರೆ.

ಮಚಿಹನ್ ಸಾಸಾ: ಮಣಿಪುರದ ಉಖ್ರುಲ್‍ನ ಲಾಂಗ್‍ಪಿ ಪ್ರಾಚೀನ ಮಣಿಪುರಿ ಸಾಂಪ್ರದಾಯಿಕ ಕುಂಬಾರಿಕೆಯನ್ನು ಸಂರಕ್ಷಿಸಲು 5 ದಶಕಗಳನ್ನು ಮೀಸಲಿಟ್ಟರು, ಇದು ನವಶಿಲಾಯುಗದ ಅವಧಿಗೆ (ಕ್ರಿ.ಪೂ. 10,000) ಹಿಂದಿನದ್ದಾಗಿದೆ.

ಗಡ್ಡಂ ಸಮ್ಮಯ್ಯ: ತೆಲಂಗಾಣದ ಇವರು, 5 ದಶಕಗಳಿಂದ 19,000 ಪ್ರದರ್ಶನಗಳಲ್ಲಿ ಈ ಶ್ರೀಮಂತ ಪರಂಪರೆಯ ಕಲಾ ಪ್ರಕಾರವನ್ನು ಪ್ರದರ್ಶಿಸುತ್ತಿರುವ ಜನಾಂವ್‍ನ ಖ್ಯಾತ ಚಿಂದು ಯಕ್ಷಗಾನಂ ರಂಗಭೂಮಿ ಕಲಾವಿದರು.

ಜಂಕಿಲಾಲ್: ರಾಜಸ್ಥಾನದ ಭಿಲ್ವಾರದ ಬೆಹ್ರುಪಿಯಾ ಕಲಾವಿದ, ಮರೆಯಾಗುತ್ತಿರುವ ಕಲಾ ಪ್ರಕಾರವನ್ನು ಕರಗತ ಮಾಡಿಕೊಂಡಿದ್ದಾರೆ ಮತ್ತು 6 ದಶಕಗಳಿಂದ ಜಾಗತಿಕ ಪ್ರೇಕ್ಷಕರನ್ನು ಆಕರ್ಷಿಸುತ್ತಿದ್ದಾರೆ.

ದಾಸರಿ ಕೊಂಡಪ್ಪ: ತೆಲಂಗಾಣದ ನಾರಾಯಣಪೇಟೆಯ ದಾಮರಗಿಡ್ಡ ಗ್ರಾಮದ ಮೂರನೇ ತಲೆಮಾರಿನ ಬುರ್ರವೀಣಾ ವಾದಕ ಕಲಾಕೃತಿಯನ್ನು ಉಳಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ.

ಬಾಬು ರಾಮ್ ಯಾದವ್: ಸಾಂಪ್ರದಾಯಿಕ ಕರಕುಶಲ ತಂತ್ರಗಳನ್ನು ಬಳಸಿಕೊಂಡು ಸಂಕೀರ್ಣವಾದ ಹಿತ್ತಾಳೆ ಕಲಾಕೃತಿಗಳನ್ನು ರಚಿಸುವಲ್ಲಿ 6 ದಶಕಗಳ ಅನುಭವ ಹೊಂದಿರುವ ಹಿತ್ತಾಳೆ ಮರೋರಿ ಕುಶಲಕರ್ಮಿ.

ನೇಪಾಳ ಚಂದ್ರ ಸೂತ್ರಧರ್: ಪಶ್ಚಿಮ ಬಂಗಾಳದ ಇವರು ಛೌ ಮುಖವಾಡ ತಯಾರಿಕೆಯ ಸಂರಕ್ಷಣೆಯಲ್ಲಿ ಕಳೆದ 50 ವರ್ಷಗಗಳಿಂದ ಕೆಲಸ ಮಾಡುತ್ತಿದ್ದಾರೆ. 70 ಕ್ಕೂ ಹೆಚ್ಚು ಛೌ ನೃತ್ಯ ಗುಂಪುಗಳಿಗೆ ತರಬೇತಿ ನೀಡಿದ್ದಾರೆ.

TAGGED:Padma Awards 2024Padma Shrirepublic day
Share This Article
Facebook Whatsapp Whatsapp Telegram

You Might Also Like

Eshwar Khandre 4
Bengaluru City

ಆನೆ-ಮಾನವ ಸಂಘರ್ಷ ನಿಯಂತ್ರಣಕ್ಕೆ ಮಹತ್ವದ ಹೆಜ್ಜೆ `ಆನೆಪಥ’: ಈಶ್ವರ್ ಖಂಡ್ರೆ

Public TV
By Public TV
2 minutes ago
Udit Raj Shubhanshu Shukla Axiom 4
Latest

ಈ ಬಾರಿ ದಲಿತ ವ್ಯಕ್ತಿಯನ್ನು ಬಾಹ್ಯಾಕಾಶಕ್ಕೆ ಕಳಿಸಬೇಕಿತ್ತು : ಕಾಂಗ್ರೆಸ್ ನಾಯಕ ಉದಿತ್ ರಾಜ್

Public TV
By Public TV
7 minutes ago
bagalkote jayamruthyunjaya swamiji
Bagalkot

ಸಿಎಂ ವಿರುದ್ಧದ ಆ ಹೇಳಿಕೆಯೇ ನನಗೆ ಮುಳುವಾಯಿತು: ಪಂಚಮಶಾಲಿ ಶ್ರೀ

Public TV
By Public TV
54 minutes ago
Ramalinga Reddy 2
Districts

ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದ ಸಚಿವ ರಾಮಲಿಂಗಾರೆಡ್ಡಿ

Public TV
By Public TV
1 hour ago
paraglider crash
Crime

ಹಿಮಾಚಲ | ಪ್ಯಾರಾಗ್ಲೈಡಿಂಗ್ ವೇಳೆ ಅವಘಡ – ಗುಜರಾತ್‌ನ ಪ್ರವಾಸಿಗ ಸಾವು

Public TV
By Public TV
1 hour ago
Bengaluru Crime
Bengaluru City

ಬಿಷ್ಣೋಯ್ ಹೆಸರಲ್ಲಿ ಬೆದರಿಕೆ ಹಾಕಿ ಒಂದು ಕೋಟಿಗೆ ಡಿಮ್ಯಾಂಡ್ – ತಿಹಾರ್‌ ಜೈಲಲ್ಲಿ ಫ್ರೆಂಡ್ಸ್‌ ಆಗಿದ್ದ ಗ್ಯಾಂಗ್‌ ಅಂದರ್‌!

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?