ನವದೆಹಲಿ: ಚಿಕಿತ್ಸೆಗಾಗಿ ಜನರಿಂದ ಕೇವಲ 20 ರೂ. ಫೀಸ್ ಪಡೆಯುತ್ತಾ ಬಡವರಿಗೆ ನೆರವಾಗುತ್ತಿರುವ ಮಧ್ಯಪ್ರದೇಶದ ಡಾಕ್ಟರ್‍ರೊಬ್ಬರಿಗೆ (Doctor) 2023ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ (Padma Shri Award) ಒಲಿದಿದೆ.
ಹೌದು. ಬುಧವಾರ ಸಂಜೆ ಕೇಂದ್ರ ಸರ್ಕಾರವು ಪದ್ಮಶ್ರೀ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಮಧ್ಯಪ್ರದೇಶದ (Madhya Pradesh) ಜಬಲ್‍ಪುರ (Jabalpur) ಜಿಲ್ಲೆಯ 77 ವರ್ಷದ ವೈದ್ಯ ಡಾ.ಎಂ.ಸಿ. ದಾವರ್ (Dr M C Dawar) ಅವರ ಹೆಸರಿದೆ.
Advertisement
Advertisement
ಡಾ.ದಾವರ್ ಅವರು 1946ರ ಜ. 16ರಂದು ಪಾಕಿಸ್ತಾನದ ಪಂಜಾಬ್‍ನಲ್ಲಿ ಜನಿಸಿದರು. ದೇಶ ವಿಭಜನೆಯ ನಂತರ ದಾವರ್ ಕುಟುಂದವರೊಂದಿಗೆ ಭಾರತಕ್ಕೆ ಸ್ಥಳಾಂತರಗೊಂಡರು. 1967ರಲ್ಲಿ ತಮ್ಮ ಎಂಬಿಬಿಎಸ್ ಪದವಿಯನ್ನು ಜಬಲ್‌ಪುರದಲ್ಲಿ ಪೂರ್ಣಗೊಳಿಸಿದರು. ನಂತರ 1971ರಲ್ಲಿ ಇಂಡೋ ಪಾಕ್ ಯುದ್ಧದ ಸಮಯದಲ್ಲಿ ಸುಮಾರು ಒಂದು ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದರು.
Advertisement
1972ರಿಂದ ಜಬಲ್ಪುರದಲ್ಲಿ ಆಸ್ಪತ್ರೆಯನ್ನು ತೆರೆದು, ಅಲ್ಲಿಂದ ಜನರಿಗೆ ಚಿಕಿತ್ಸೆ ನೀಡುತ್ತಾ ಬಂದಿದ್ದಾರೆ. ವಿಶೇಷವೆಂದರೆ ಅವರು ಆಸ್ಪತ್ರೆಯನ್ನು ಪ್ರಾರಂಭಿಸಿದಾಗ ಕೇವಲ 2 ರೂ. ಪಡೆಯುತ್ತಿದ್ದರು. ಎಲ್ಲ ಸೌಲಭ್ಯಗಳು ದುಬಾರಿಯಾಗುತ್ತಿರುವ ಈ ಸಮಯದಲ್ಲೂ ಕೇವಲ 20 ರೂ. ಅನ್ನು ಫೀಸ್ ಆಗಿ ಪಡೆಯುತ್ತಿದ್ದಾರೆ. ಇದರಿಂದಾಗಿ ಅನೇಕ ಬಡವರಿಗೆ ಅನೇಕ ಸಹಾಯವಾಗುತ್ತಿದೆ.
Advertisement
ಈ ಬಗ್ಗೆ ಮಾತನಾಡಿದ ಅವರು, ಇಷ್ಟು ಕಡಿಮೆ ಶುಲ್ಕ ವಿಧಿಸುವ ಬಗ್ಗೆ ಮನೆಯಲ್ಲಿ ಚರ್ಚೆ ನಡೆದಿತ್ತು. ಆದರೆ ಅದರ ಬಗ್ಗೆ ಯಾವುದೇ ತಕರಾರು ಇರಲಿಲ್ಲ, ನಮ್ಮ ಏಕೈಕ ಗುರಿ ಜನರ ಸೇವೆಯಾಗಿದೆ. ಆದ್ದರಿಂದ ಶುಲ್ಕವನ್ನು ಹೆಚ್ಚಿಸಲಿಲ್ಲ. ನೀವು ತಾಳ್ಮೆಯಿಂದ ಕೆಲಸ ಮಾಡಿದರೆ ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ ಮತ್ತು ಸಾಧನೆಯನ್ನು ಗೌರವಿಸಲಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ನೂರು ಬಾರಿ ಮೋದಿ, ಶಾ ರಾಜ್ಯಕ್ಕೆ ಬಂದ್ರೂ, ಕಾಂಗ್ರೆಸ್ ನೂರಕ್ಕೆ ನೂರು ಗೆಲ್ಲುತ್ತೆ: ಸಿದ್ದರಾಮಯ್ಯ
ದಾವರ್ ಅವರ ಮಗ ರಿಶಿ ಮಾತನಾಡಿ, ರಾಜಕೀಯದ ಉದ್ದೇಶದಿಂದ ಮಾತ್ರ ಪ್ರಶಸ್ತಿಗಳನ್ನು ನೀಡಲಾಗುತ್ತದೆ ಎಂದು ನಾವು ಭಾವಿಸಿದ್ದೆವು. ಆದರೆ ಸರ್ಕಾರವು ದೇಶಕ್ಕಾಗಿ ದುಡಿಯುವ ಜನರನ್ನು ಹುಡುಕಿ ಗೌರವಿಸುತ್ತಿರುವ ರೀತಿ ತುಂಬಾ ಒಳ್ಳೆಯದು. ನಮ್ಮ ತಂದೆಗೆ ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ ಎಂದು ಹೇಳಿದರು. ಇದನ್ನೂ ಓದಿ: ಟಿಕೆಟ್ ಘೋಷಣೆ ವೇಳೆ ಸಮಸ್ಯೆ, ಸವಾಲು ನಿರ್ವಹಣೆಗೆ ಬಿಜೆಪಿ ಹೈಕಮಾಂಡ್ ಪ್ರೀಪ್ಲಾನ್
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k