ನವದೆಹಲಿ: ಒಆರ್‌ಎಸ್‍ನ ಸಂಶೋಧಕ ದಿಲೀಪ್ ಮಹಲನಾಬಿಸ್, ಜಾಕಿರ್ ಹುಸೇನ್, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್, ಎಂಎಂ ಕೀರವಾಣಿ ಸೇರಿ ಒಟ್ಟು 106 ಮಂದಿಗೆ ಪದ್ಮ ಪ್ರಶಸ್ತಿ ಲಭಿಸಿದೆ.
2023ನೇ ಸಾಲಿನಲ್ಲಿ ಒಟ್ಟು 106 ಮಂದಿಗೆ ಪದ್ಮ ಪ್ರಶಸ್ತಿ ಲಭಿಸಿದೆ. 6 ಪದ್ಮ ವಿಭೂಷಣ, 9 ಪದ್ಮಭೂಷಣ ಮತ್ತು 91 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.
Advertisement
Advertisement
ಒಆರ್‌ಎಸ್‍ನ ಸಂಶೋಧಕ ದಿಲೀಪ್ ಮಹಲನಾಬಿಸ್ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ. ಇನ್ನುಳಿದಂತೆ, ಕುಮಾರ್ ಮಂಗಲಂ ಬಿರ್ಲಾ ಮತ್ತು ಸುಧಾ ಮೂರ್ತಿ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಗಿದೆ. ಆರ್‌ಆರ್‌ಆರ್‌ನ ನಾಟು ನಾಟು ಹಾಡಿನ ಸಂಯೋಜಕ ಎಂಎಂ ಕೀರವಾಣಿ ಅವರಿಗೆ ಕಲಾ ಕ್ಷೇತ್ರದಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿದೆ.
Advertisement
ಪದ್ಮವಿಭೂಷಣ, ಪದ್ಮಭೂಷಣ, ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಹೆಸರುಗಳು ಇಂತಿವೆ:
ಪದ್ಮವಿಭೂಷಣ ಪ್ರಶಸ್ತಿ: ಮುಲಾಯಂ ಸಿಂಗ್ ಯಾದವ್ (ಮರಣೋತ್ತರ) ಬಾಲಕೃಷ್ಣ ದೋಷಿ (ಮರಣೋತ್ತರ), ಜಾಕಿರ್ ಹುಸೇನ್, ಎಸ್ ಎಂ ಕೃಷ್ಣ ದಿಲೀಪ್ ಮಹಲನಾಬಿಸ್ (ಮರಣೋತ್ತರ) ಶ್ರೀನಿವಾಸ್ ವರದನ್
Advertisement
ಪದ್ಮಭೂಷಣ: ಎಸ್ ಎಲ್ ಭೈರಪ್ಪ, ಕುಮಾರ್ ಮಂಗಲಂ ಬಿರ್ಲಾ, ದೀಪಕ್ ಧಾರ್, ವಾಣಿ ಜೈರಾಮ್, ಸ್ವಾಮಿ ಚಿನ್ನ ಜೀಯರ್, ಸುಮನ್ ಕಲ್ಯಾಣಪುರ, ಕಪಿಲ್ ಕಪೂರ್, ಸುಧಾ ಮೂರ್ತಿ, ಕಮಲೇಶ್ ಡಿ ಪಟೇಲ್
ಪದ್ಮಶ್ರೀ ಪ್ರಶಸ್ತಿ: ಸುಕಮ ಆಚಾರ್ಯ, ಜೋಧಯ್ಯಬಾಯಿ ಬೈಗಾ, ಪ್ರೇಮ್ಜಿತ್ ಬರಿಯಾ, ಉಷಾ ಬಾರ್ಲೆ, ಮುನೀಶ್ವರ ಚಂದಾವರ, ಹೇಮಂತ್ ಚೌಹಾಣ್ ಭಾನುಭಾಯಿ ಚಿತಾರಾ, ಹೆಮೊಪ್ರೊವಾ ಚುಟಿಯಾ, ನರೇಂದ್ರ ಚಂದ್ರ ದೆಬ್ಬರ್ಮ (ಮರಣೋತ್ತರ), ಸುಭದ್ರಾ ದೇವಿ, ಖಾದರ್ ವಲ್ಲಿ ದೂದೇಕುಲ, ಹೇಂ ಚಂದ್ರ ಗೋಸ್ವಾಮಿ, ಪ್ರಿತಿಕಾನಾ ಗೋಸ್ವಾಮಿ,ರಾಧಾ ಚರಣ್ ಗುಪ್ತಾ, ಮೊಡಡುಗು ವಿಜಯ್ ಗುಪ್ತಾ, ಅಹ್ಮದ್ ಹುಸೇನ್ ಮತ್ತು ಮೊಹಮ್ಮದ್ ಹುಸೇನ್ (ಜೋಡಿ), ದಿಲ್ಶಾದ್ ಹುಸೇನ್, ಭಿಕು ರಾಮ್‍ಜಿ ಇದತೇ, ಸಿ ಐ ಇಸಾಕ್, ರತ್ತನ್ ಸಿಂಗ್ ಜಗ್ಗಿ, ಬಿಕ್ರಮ್ ಬಹದ್ದೂರ್ ಜಮಾತಿಯಾ, ರಾಮ್ಕುಯಿವಾಂಗ್ಬೆ ಜೆನೆ, ರಾಕೇಶ್ ರಾಧೇಶ್ಯಾಮ್ ಜುಂಜುನ್ವಾಲಾ (ಮರಣೋತ್ತರ), ರತನ್ ಚಂದ್ರ ಕರ್ ಮಹಿಪತ್ ಕವಿ, ಎಂ ಎಂ ಕೀರವಾಣಿ,
ಅರೀಜ್ ಖಂಬಟ್ಟಾ (ಮರಣೋತ್ತರ), ಪರಶುರಾಮ ಕೊಮಾಜಿ ಖುನೆ, ಗಣೇಶ ನಾಗಪ್ಪ ಕೃಷ್ಣರಾಜನಗರ ಮಾಗುನಿ ಚರಣ್ ಕುಂರ್, ಆನಂದ್ ಕುಮಾರ್,ಅರವಿಂದ್ ಕುಮಾರ್,ದೋಮರ್ ಸಿಂಗ್ ಕುನ್ವರ್, ರೈಸಿಂಗ್ಬೋರ್ ಕುರ್ಕಲಾಂಗ್ ಹೀರಾಬಾಯಿ ಲೋಬಿ, ಮೂಲಚಂದ್ ಲೋಧಾ, ರಾಣಿ ಮಾಚಯ್ಯ, ಅಜಯ್ ಕುಮಾರ್ ಮಾಂಡವಿ,ಪ್ರಭಾಕರ ಭಾನುದಾಸ್ ಮಂದೆ ಗಜಾನನ ಜಗನ್ನಾಥ ಮಾನೆ, ಅಂತರ್ಯಾಮಿ ಮಿಶ್ರಾ, ನಾಡೋಜ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ, ಪ್ರೋ. (ಡಾ.) ಮಹೇಂದ್ರ ಪಾಲ್ ಉಮಾ ಶಂಕರ್ ಪಾಂಡೆ, ರಮೇಶ್ ಪರ್ಮಾರ್ ಮತ್ತು ಶಾಂತಿ ಪರ್ಮಾರ್, ನಳಿನಿ ಪಾರ್ಥಸಾರಥಿ, ಹನುಮಂತ ರಾವ್ ಪಸುಪುಲೇಟಿ ರಮೇಶ ಪತಂಗೆ, ಕೃಷ್ಣ ಪಟೇಲ್.
ಕೆ ಕಲ್ಯಾಣಸುಂದರಂ ಪಿಳ್ಳೆ, ವಿ ಪಿ ಅಪ್ಪುಕುಟ್ಟನ್ ಪೊದುವಾಳ್, ಕಪಿಲ್ ದೇವ್ ಪ್ರಸಾದ್, ಎಸ್ ಆರ್ ಡಿ ಪ್ರಸಾದ್, ಶಾ ರಶೀದ್ ಅಹ್ಮದ್ ಕ್ವಾದ್ರಿ, ಸಿ ವಿ ರಾಜು, ಬಕ್ಷಿ ರಾಮ್, ಚೆರುವಾಯಲ್ ಕೆ ರಾಮನ್, ಸುಜಾತಾ ರಾಮದೊರೈ, ಅಬ್ಬಾರೆಡ್ಡಿ ನಾಗೇಶ್ವರ ರಾವ್,ಪರೇಶಭಾಯಿ ರಾತ್ವಾ, ಬಿ ರಾಮಕೃಷ್ಣ ರೆಡ್ಡಿ, ಮಂಗಳಾ ಕಾಂತಿ ರಾಯ್, ಕೆ ಸಿ ರನ್ನರಸಂಗಿ ವಡಿವೇಲ್ ಗೋಪಾಲ್ ಮತ್ತು ಮಾಸಿ ಸದಯ್ಯನ್,ಮನೋರಂಜನ್ ಸಾಹು, ಪತಾಯತ್ ಸಾಹು, ಋತ್ವಿಕ್ ಸನ್ಯಾಲ್, ಕೋಟ ಸಚ್ಚಿದಾನಂದ ಶಾಸ್ತ್ರಿ, ಸಂಕುರಾತ್ರಿ ಚಂದ್ರಶೇಖರ್,ಕೆ ಶಾನತೋಯಿಬಾ ಶರ್ಮಾ,ನೆಕ್ರಮ್ ಶರ್ಮಾ,ಗುರ್ಚರಣ್ ಸಿಂಗ್, ಲಕ್ಷ್ಮಣ್ ಸಿಂಗ್, ಮೋಹನ್ ಸಿಂಗ್, ತೌನೋಜಮ್ ಚಾವೋಬಾ ಸಿಂಗ್, ಪ್ರಕಾಶ್ ಚಂದ್ರ ಸೂದ್, ನೈಹುನಾವೋ ಸೋರಿ, ಡಾ. ಜನುಮ್ ಸಿಂಗ್ ಸೋಯ್, ಕುಶೋಕ್ ಥಿಕ್ಸೇ ನವಾಂಗ್ ಚಂಬಾ ಸ್ಟಾಂಜಿನ್, ಎಸ್ ಸುಬ್ಬರಾಮನ್, ಮೋವಾ ಸುಬಾಂಗ್, ಪಾಲಂ ಕಲ್ಯಾಣ ಸುಂದರಂ, ರವೀನಾ ರವಿ ಟಂಡನ್, ವಿಶ್ವನಾಥ್ ಪ್ರಸಾದ್ ತಿವಾರಿ, ಧನಿರಾಮ್ ಟೊಟೊ, ತುಲಾ ರಾಮ್ ಉಪ್ರೇತಿ, ಗೋಪಾಲಸಾಮಿ ವೇಲುಚಾಮಿ, ಈಶ್ವರ ಚಂದರ್ ವರ್ಮಾ, ಕೂಮಿ ನಾರಿಮನ್ ವಾಡಿಯಾ, ಕರ್ಮ ವಾಂಗ್ಚು (ಮರಣೋತ್ತರ), ಗುಲಾಮ್ ಮುಹಮ್ಮದ್ ಝಾಝ್. ಇದನ್ನೂ ಓದಿ: ಎಸ್.ಎಂ. ಕೃಷ್ಣ, ಎಸ್‍ಎಲ್ ಭೈರಪ್ಪ, ಸುಧಾಮೂರ್ತಿ ಸೇರಿ ರಾಜ್ಯದ 8 ಮಂದಿಗೆ ಪದ್ಮ ಪ್ರಶಸ್ತಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k