ಡಿಸ್ಪುರ್: ಅಸ್ಸಾಂ ಮೂಲದ ಪದ್ಮ ಪ್ರಶಸ್ತಿ ಪುರಸ್ಕೃತ ಉದ್ಧಬ್ ಭರಾಲಿ ಅವರು ತಮ್ಮ ದತ್ತು ಮಗಳ ಮೇಲೆ ಅತ್ಯಾಚಾರವೆಸಗಿರುವ ಆರೋಪದ ಮೇಲೆ ಉತ್ತರ ಲಖಿಂಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಮಾಹಿತಿ ಪಡೆದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೆಟ್ ಅವರ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ.
Advertisement
Advertisement
ಬಾಲಕಿಯನ್ನು ಕೆಲವು ದಿನಗಳ ಹಿಂದೆ ಅವರು ದತ್ತು ಪಡೆದಿದ್ದರು. ತಾನೇ ದತ್ತು ಪಡೆದಿದ್ದ ಬಾಲಕಿಯ ಮೇಲೆ ಉದ್ಧಬ್ ಭರಾಲಿ ಅತ್ಯಾಚಾರ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಎಫ್‌ಆರ್‌ಐ ದಾಖಲಾದ ತಕ್ಷಣ ಉದ್ಧಬ್ ಭಾರಾಲಿ ಅವರು ಬಂಧನಕ್ಕೆ ಮುಂಚಿತವಾಗಿ ಜಾಮೀನು ಕೋರಿ ಗೌಹಾಟಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದರು. ನ್ಯಾಯಮೂರ್ತಿ ಅರುಣ್ ದೇವ್ ಚೌಧರಿ ಅವರ ರಜಾಕಾಲದ ಪೀಠವು ಅವರಿಗೆ ಕೆಲವು ಷರತ್ತುಗಳೊಂದಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ. ಸದ್ಯಕ್ಕೆ ಸಂತ್ರಸ್ತೆಯು ಮಕ್ಕಳ ಆರೈಕೆ ಕೇಂದ್ರದಲ್ಲಿದ್ದಾಳೆ. ಇದನ್ನೂ ಓದಿ: ಕೋವಿಡ್-19 ಹೊಸ ಮಾರ್ಗಸೂಚಿಗೆ ಬಿಜೆಪಿಯ ಸಚಿವ, ಶಾಸಕರಿಂದಲೇ ವಿರೋಧ
Advertisement
Advertisement
ಉದ್ಧಬ್ ಭಾರಾಲಿ ಅವರು 460 ಯಂತ್ರೋಪಕರಣಗಳ ಪೇಟೆಂಟ್ ಹೊಂದಿದ್ದಾರೆ. ಅವರು ಭತ್ತ ಒಕ್ಕಣೆ, ಕಬ್ಬು ತೆಗೆಯುವ ಯಂತ್ರ, ದಾಳಿಂಬೆ ಡಿ-ಸಿಡರ್ ಮುಂತಾದ ಆವಿಷ್ಕಾರಗಳಿಗೆ ಹೆಸರುವಾಸಿಯಾಗಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಗೆ ಭದ್ರತಾ ಲೋಪ – ನೀಚತನದ ಪರಮಾವಧಿ ಅಂದ್ರು ಅನಂತ್ ಕುಮಾರ್ ಹೆಗ್ಡೆ