‘ಪಡ್ಡೆ ಹುಲಿ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಶ್ರೇಯಸ್ ಮೊದಲ ಸಿನಿಮಾದಲ್ಲೇ ಎಲ್ಲರ ಮನಸ್ಸನ್ನ ಗೆದ್ದಿದ್ರು. ‘ಪಡ್ಡೆ ಹುಲಿ’ ಮೂಲಕ ಸ್ಯಾಂಡಲ್‍ವುಡ್ ಒಬ್ಬ ಒಳ್ಳೆ ನಟನ ಪರಿಚಯ ಆಗಿದ್ದು, ಉತ್ತಮ ನಟನಾಗುವ ಎಲ್ಲಾ ಭರವಸೆಯನ್ನು ಶ್ರೇಯಸ್ ಮೂಡಿಸಿದ್ರು. ಹಾಗಾಗಿ ಎರಡನೇ ಸಿನಿಮಾವೂ ಬಲು ಬೇಗನೇ ಸೆಟ್ಟೇರಿತು. ‘ಪಡ್ಡೆಹುಲಿ’ಯಾಗಿ ಮಿಂಚಿದ್ದ ಶ್ರೇಯಸ್ ಇದೀಗ ‘ವಿಷ್ಣು ಪ್ರಿಯ’ನಾಗಿ ಅಬ್ಬರಿಸಲು ರೆಡಿಯಾಗಿದ್ದಾರೆ.
Advertisement
ಖ್ಯಾತ ನಿರ್ಮಾಪಕ ಕೆ. ಮಂಜು ಅವರ ಪುತ್ರ ಶ್ರೇಯಸ್. ‘ಪಡ್ಡೆಹುಲಿ’ಯಲ್ಲಿ ಲವ್ವರ್ ಬಾಯ್ ಆಗಿ ಹೆಂಗಳೆಯರ ಮನಸ್ಸನ್ನು ಕದ್ದಿದ್ರು. ಇವರ ಎರಡನೇ ಸಿನಿಮಾ ‘ವಿಷ್ಣು ಪ್ರಿಯ’ ಚಿತ್ರವನ್ನು ಮಲೆಯಾಳಂನ ವಿ.ಕೆ ಪ್ರಕಾಶ್ ನಿರ್ದೇಶನ ಮಾಡುತ್ತಿದ್ದಾರೆ. ಇಂದು ಲವ್ವರ್ ಬಾಯ್ ಶ್ರೇಯಸ್ ಮಂಜುಗೆ ಹುಟ್ಟು ಹಬ್ಬದ ಸಂಭ್ರಮ. ಇಡೀ ಚಿತ್ರತಂಡ ಶ್ರೇಯಸ್‍ಗೆ ಶುಭ ಹಾರೈಸಿದೆ. ಹೊಸ ಎರಡು ಪೋಸ್ಟರ್ ರಿಲೀಸ್ ಮಾಡುವ ಮೂಲಕ, ಅದ್ಭುತವಾದ ಗಿಫ್ಟ್ ನ್ನು ಶ್ರೇಯಸ್‍ಗೆ ನೀಡಿದ್ದಾರೆ.
Advertisement
ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ಶ್ರೇಯಸ್ ಪಾತ್ರ ಹೇಗಿರಲಿದೆ ಎಂಬುದು ಸ್ಪಷ್ಟವಾಗುತ್ತಿದೆ. ಒಂದು ಪೋಸ್ಟರ್ ನಲ್ಲಿ ಲವ್ವರ್ ಬಾಯ್ ಆಗಿ ಕಾಣಿಸಿಕೊಂಡಿದ್ದು, ಇನ್ನೊಂದು ಪೋಸ್ಟರ್ ನಲ್ಲಿ ಮಾಸ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಫೈಟ್ ಮಾಡೋಕು ಸೈ, ಡ್ಯೂಯೆಟ್ ಹಾಡೋಕು ಜೈ ಅಂತಿದ್ದಾರೆ ನಮ್ಮ ಹೀರೋ ಶ್ರೇಯಸ್.
Advertisement
Advertisement
ಶ್ರೇಯಸ್‍ಗೆ ನಾಯಕಿಯಾಗಿ ಮಲೆಯಾಳಂ ಬೆಡಗಿ, ಕಣ್ಸನ್ನೆ ಸುಂದರಿ ಪ್ರಿಯಾ ವಾರಿಯರ್ ಜೊತೆಯಾಗಿದ್ದಾರೆ. ಮಲೆಯಾಳಂ ಖ್ಯಾತ ಸಂಗೀತ ನಿರ್ದೇಶಕ ಗೋಪಿ ಸುಂದರಂ ಸಂಗೀತ ನೀಡಲಿದ್ದಾರೆ. ಕೆ. ಮಂಜು ನಿರ್ಮಾಣದಲ್ಲಿ, ವಿನೋದ್ ಭಾರತೀ ಛಾಯಾಗ್ರಹಣ, ಸುರೇಶ್ ಯುಆರ್‍ಎಸ್ ಸಂಕಲನ ಇರಲಿದೆ. ಚಿತ್ರೀಕರಣ ಕಡೆ ಹಂತದಲ್ಲಿದ್ದು, ಸದ್ಯದಲ್ಲೇ ರಿಲೀಸ್ ಆಗಲಿದೆ.