ಸ್ಯಾಂಡಲ್‌ವುಡ್‌ನಲ್ಲಿ (Sandalwood) `ಪಡ್ಡೆಹುಲಿ’, ರಾಣಾ, ಸಿನಿಮಾಗಳ ಮೂಲಕ ಮೋಡಿ ಮಾಡಿರುವ ನಟ ಶ್ರೇಯಸ್ (Shreyas) ಇದೀಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ರಾಣಾ ಶ್ರೇಯಸ್‌ಗೆ ಜೋಡಿಯಾಗಿ `ಬ್ಯಾಡ್ ಮ್ಯಾನರ್ಸ್’ (Bad Manners) ನಾಯಕಿ ಪ್ರಿಯಾಂಕಾ ಕುಮಾರ್ (Priyanka Kumar) ಸಾಥ್ ನೀಡ್ತಿದ್ದಾರೆ. ಇದನ್ನೂ ಓದಿ:ನನಗೆ ಮಕ್ಕಳು ಇಲ್ಲದಿರಬಹುದು, ಶ್ವಾನಗಳೇ ನನಗೆ ಮಕ್ಕಳ ಸಮಾನ: ರಮ್ಯಾ
View this post on Instagram
ಕಣ್ಸನೆ ಬೆಡಗಿ ಪ್ರಿಯಾ ವಾರಿಯರ್ (Priya Varrier) ಜೊತೆಗಿನ `ವಿಷ್ಣುಪ್ರಿಯ’ (Vishnu Priya) ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿರುವ ನಿರ್ಮಾಪಕ ಕೆ.ಮಂಜು (K.Manju) ಸುಪುತ್ರ ಶ್ರೇಯಸ್ ಇದೀಗ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ದುರ್ಗ, ನೀಲಿ ಸೀರಿಯಲ್ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವವಿರುವ ಮಧು ಗೌಡ ಗಂಗೂರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ.
ಮಾಸ್ ಎಂಟರ್ ಟೈನರ್ ಹಾಗೂ ಕಾಲೇಜ್ ಲವ್ ಸ್ಟೋರಿಯಾಗಿರುವ ಈ ಸಿನಿಮಾಗೆ ಪ್ರಿಯಾಂಕಾ ಕುಮಾರ್ ನಾಯಕಿಯಾಗಿದ್ದಾರೆ. ಅಭಿಷೇಕ್ ಅಂಬರೀಷ್ ನಟನೆಯ `ಬ್ಯಾಡ್ ಮ್ಯಾನರ್ಸ್’ ಮತ್ತು ವಿರಾಟ್ ನಟನೆಯ `ಅದ್ಧೂರಿ ಲವರ್’ (Adduri Lover) ಸಿನಿಮಾದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿರುವ ಪ್ರಿಯಾಂಕಾಗೆ ಇದು ಮೂರನೇ ಚಿತ್ರವಾಗಿದೆ. ಏಷ್ಯಾನೆಟ್ ಮೂವೀ ಬ್ಯಾನರ್ ಕಡೆಯಿಂದ ಆರ್.ಸಂತೋಷ್ ಕುಮಾರ್ ಈ ಚಿತ್ರ ನಿರ್ಮಾಣ ಮಾಡ್ತಿದ್ದು, ಅರ್ಜುನ್ ಜನ್ಯ ಸಂಗೀತ, ಗಗನ್ ಗೌಡ ಛಾಯಾಗ್ರಹಣ, ರವಿವರ್ಮಾ ಸಾಹಸ, ರಾಜೇಶ್ ಸಾಲುಂಡಿ ಸಂಭಾಷಣೆ ಚಿತ್ರಕ್ಕಿದೆ.
ಇದೇ 31ಕ್ಕೆ ಮುಹೂರ್ತ ನೆರವೇರಲಿದ್ದು, ಏಪ್ರಿಲ್ ತಿಂಗಳಿಂದ ಶೂಟಿಂಗ್‌ಗೆ ಕಿಕ್ ಸ್ಟಾರ್ಟ್ ಸಿಗಲಿದೆ. ಬೆಂಗಳೂರು, ಕೊಡಗು, ಚಿಕ್ಕಮಗಳೂರು, ಕೇರಳದಲ್ಲಿ ಶೂಟಿಂಗ್ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.