ಬೆಂಗಳೂರು: ಈ ವಾರದ ಸಿನಿಸಂತೆಗೆ `ಪಾದರಸ’ ಸಿನಿಮಾ ಎಂಟ್ರಿ ಕೊಡೋಕೆ ಸಜ್ಜಾಗಿದೆ. ಪಾದರದಂತಹ ಅಭಿನಯದಿಂದ ಖ್ಯಾತಿ ಆಗಿರುವ ನಟ ಸಂಚಾರಿ ವಿಜಯ್ ಹಿಂದೆಂದೂ ಕಾಣಿಸಿಕೊಳ್ಳದ ರೀತಿಯಲ್ಲಿ ಪಾದರಸದ ಮೂಲಕ ಸರ್ಪ್ರೈಸ್ ಕೊಡೋಕೆ ರೆಡಿಯಾಗಿದ್ದಾರೆ.
ತುಂಬಾ ಆ್ಯಕ್ಟಿವ್ ಆಗಿರೋ ವ್ಯಕ್ತಿಯನ್ನ ಏನ್ರಿ ಇವರು `ಪಾದರಸ’ದಂಥ ಮನುಷ್ಯ ಅಲ್ರೀ ಅಂತಾರೆ. ಇಂಥದ್ದೇ ವ್ಯಕ್ತಿತ್ವದ ಇಬ್ಬರು ಈ ವಾರ ಸ್ಯಾಂಡಲ್‍ವುಡ್ ಥಿಯೇಟರ್ ಗೆ ಆಗಮಿಸಲಿದ್ದಾರೆ. ಅವ್ರೇ ಸಂಚಾರಿ ವಿಜಯ್ ಮತ್ತು ನಿರಂಜನ್ ದೇಶಪಾಂಡೆ. ಇದನ್ನೂ ಓದಿ: ಸಂಚಾರಿ ವಿಜಯ್ ರಿಯಲ್ ಪಾದರಸ!
ಸ್ನೇಹಿತರಿಬ್ಬರ ದಗಲ್ಬಾಜಿ ಕೆಲಸ ಹಾಗೂ ಹುಡುಗಿಯರ ಜೊತೆ ಲವ್ವಿ ಡವ್ವಿ, ಟ್ರೈಲರ್‍ನಲ್ಲಿ ಇದೆ. ಆದರೆ ರೋಗಗ್ರಸ್ಥ ಮನಸ್ಥಿತಿಯನ್ನೂ ಮೀರಿ ಮನುಷ್ಯನ ಆತ್ಮಸಾಕ್ಷಿಗೆ ಸಂಬಂಧಿಸಿದ ಸೂಕ್ಷ್ಮ ಎಳೆಯಿಂದ `ಪಾದರಸ’ ಚಿತ್ರ ತಯಾರಾಗಿದೆ. ಭರ್ಜರಿ ಎಂಟರ್ ಟೈನ್ಮೆಂಟ್ ಜೊತೆ ಕೊನೆಯಲ್ಲಿ ಸೆಂಟಿಮೆಂಟ್ ಚಿತ್ರದ ಹೈಲೈಟ್. ಇದು ಹೊಸ ನಿರ್ದೇಶಕ ಹೃಷಿಕೇಶ್ ಜಂಬಗಿ ಸಾರಥ್ಯದಲ್ಲಿ ಮೂಡಿಬಂದಿದೆ. ಇದನ್ನೂ ಓದಿ: ಪ್ರೇಕ್ಷಕರ ಮನಸಿನ ತುಂಬಾ ಪ್ರಶ್ನೆಗಳ ಪಾದರಸ!
ಸಂಚಾರಿ ವಿಜಯ್‍ಗೆ ಜೋಡಿಯಾಗಿ ವೈಷ್ಣವಿ ಮೆನನ್ ಮತ್ತು ಮನಸ್ವಿನಿ ಅಭಿನಯಿಸಿದ್ದಾರೆ. ಎಲ್ಲಾ ರೀತಿಯ ಸಾಂಗ್‍ಗಳಿರುವ ಒಂದು ಕಂಪ್ಲೀಟ್ ಆಲ್ಬಂ ಚಿತ್ರದಲ್ಲಿದ್ದು ಎಟಿ ರವೀಶ್ ಸಾಂಗ್ ಕಂಪೋಸ್ ಮಾಡಿದ್ದಾರೆ. ಇನ್ನು ಕೃಷ್ಣ, ಪ್ರಕಾಶ್, ನಿತೀಶ್ ಸ್ನೇಹಿತರು ಸೇರಿ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಪಾದರಸ ಚಿತ್ರವನ್ನ ಜಯಣ್ಣ ವಿತರಿಸುತ್ತಿದ್ದು, ರಾಜ್ಯದ 100 ಚಿತ್ರಮಂದಿರಗಳಲ್ಲಿ ಇಂದು ತೆರೆ ಮೇಲೆ ಕಾಣಿಸಿಕೊಂಡಿದೆ. ಇದನ್ನೂ ಓದಿ: ಆರ್ಟ್ ಆಂಡ್ ಸೋಲ್ ಮೀಡಿಯಾದ ಕನಸಿನ ‘ಪಾದರಸ’!
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews
https://www.youtube.com/watch?v=JGCBJqzOa_I
https://www.youtube.com/watch?v=x-qwgkhfLTA