– ಕಳ್ಳಸಾಗಾಣಿಕೆಗೆ ಹೂತಿಟ್ಟಿದ್ದ ಡ್ರಗ್ಸ್
– ಖದೀಮರ ಗುಂಪು ಅರೆಸ್ಟ್
ರೋಮ್: ಕಾಡಿನಲ್ಲಿ ಹೂತಿಟ್ಟಿದ್ದ 15.7 ಲಕ್ಷ ರೂ. ಮೌಲ್ಯದ ಕೊಕೇನ್ ಅನ್ನು ಕಾಡು ಹಂದಿಗಳು ತಿಂದು ತೇಗಿದ ಘಟನೆ ಇಟಲಿಯ ಟಸ್ಕನಿ ಅರಣ್ಯದಲ್ಲಿ ಬೆಳಕಿಗೆ ಬಂದಿದೆ.
ಕಳ್ಳಸಾಗಾಣಿಕೆಗೆ ಅರಣ್ಯದಲ್ಲಿ ಖದೀಮರು ಪ್ಯಾಕೆಟ್‍ಗಳಲ್ಲಿ ಕೊಕೇನ್ ತುಂಬಿ ಪ್ಯಾಕ್ ಮಾಡಿ ಮಣ್ಣಿನಲ್ಲಿ ಹೂತಿಟ್ಟಿದ್ದರು. ಆದರೆ ಈ ಪ್ಯಾಕೆಟ್‍ಗಳನ್ನು ಹುಡುಕಿ ತೆಗೆದ ಕಾಡು ಹಂದಿಗಳು ಅದರೊಳಗೆ ಇದ್ದ ಕೊಕೇನ್ ಅನ್ನು ತಿಂದು ಪ್ಯಾಕೆಟ್‍ಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದವು. ಅರಣ್ಯ ಇಲಾಖೆ ಸಿಬ್ಬಂದಿ ಕಾಡಿನಲ್ಲಿ ಓಡಾಡುತ್ತಿದ್ದಾಗ ಕೊಕೇನ್ ಪ್ಯಾಕೆಟ್‍ಗಳು ಪತ್ತೆಯಾಗಿತ್ತು. ಇದನ್ನೂ ಓದಿ:ಡ್ರಗ್ಸ್ ನಶೆಯಲ್ಲಿ ಕುಟುಂಬದವರನ್ನೇ ಕೊಂದು ಫೇಸ್‍ಬುಕ್ ಲೈವ್ ಹೋದ
ಅರಣ್ಯದಲ್ಲಿ ಕೊಕೇನ್ ಹೇಗೆ ಬಂತು ಎಂದು ಅರಣ್ಯ ಇಲಾಖೆ ಜಾಡುಹಿಡಿದು ಹೊರಟಾಗ ಸತ್ಯಾಂಶ ಹೊರಬಿದ್ದಿದೆ. ಕಳ್ಳಸಾಗಾಣಿಕೆ ನಡೆಸಲು ಖದೀಮರು ಕಾಡಿನಲ್ಲಿ ಕೊಕೇನ್ ಅಡಗಿಸಿಟ್ಟಿದ್ದರು. ಅಧಿಕಾರಿಗಳ ಕಣ್ಣು ತಪ್ಪಿಸಲು ಅದನ್ನು ಮಣ್ಣಿನಲ್ಲಿ ಹೂತಿಟ್ಟಿದ್ದರು. ಆದರೆ ಕೊಕೇನ್ ವಾಸನೆಗೆ ಕಾಡು ಹಂದಿಗಳು ಹೂತಿಟ್ಟಿದ್ದ ಕೊಕೇನ್ ಅನ್ನು ಅಗೆದು, ಹೊರತೆಗೆದು ತಿಂದು ತೇಗಿವೆ. ಇದನ್ನೂ ಓದಿ:ಕೊರಿಯರ್ ಆಫೀಸ್‍ನಲ್ಲಿ ಸಿಕ್ತು 200 ಕೋಟಿ ಮೌಲ್ಯದ ಡ್ರಗ್ಸ್!
ಸದ್ಯ ಈ ಕೊಕೇನ್ ಹೂತಿಟ್ಟಿದ್ದ ಖದೀಮರ ಗುಂಪನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಲ್ಲದೆ ಕಾಡಿನಲ್ಲಿ ಖದೀಮರು 15.7 ಲಕ್ಷ ರೂ. ಮೌಲ್ಯದ ಕೊಕೇನ್ ಹೂತಿಟ್ಟಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಅಲ್ಲದೆ ಈ ಗುಂಪು ಟಸ್ಕನಿ ಅರಣ್ಯದ ಸುತ್ತಮುತ್ತಲ ಪ್ರದೇಶಗಳಿಗೆ ಪ್ರತಿ ತಿಂಗಳು 2 ಕೆ.ಜಿವರೆಗೂ ಡ್ರಗ್ಸ್ ಮಾರಾಟ ಮಾಡುವುದನ್ನು ಬಾಯಿಬಿಟ್ಟಿದೆ.