ನವದೆಹಲಿ: ದೇಶದ ಸಂಸದೀಯ ಅಭ್ಯಾಸಗಳು ವಿಕಸನಗೊಂಡಿವೆ ಮತ್ತು ಬಲಗೊಂಡಿವೆ. ದೆಹಲಿಯಲ್ಲಿ ನಡೆಯುತ್ತಿರುವ ಪಿ20 ಶೃಂಗಸಭೆಯು (P20 Summit) ವಿಶ್ವದ ಸಂಸದೀಯ ಆಚರಣೆಗಳ ‘ಮಹಾಕುಂಭ’. ಪ್ರಪಂಚದಾದ್ಯಂತ ವಿವಿಧ ಸಂಸದೀಯ ಅಭ್ಯಾಸಗಳ ವಿಶಿಷ್ಟ ಸಂಗಮವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.
ದೆಹಲಿಯ (Delhi) ಭಾರತ್ ಮಂಟಪದಲ್ಲಿ ನಡೆದ ಪಿ20 ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಜಿ20, ಚಂದ್ರಯಾನ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದರು. ಚುನಾವಣೆಯ ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತವು ಇದುವರೆಗೆ 17 ಸಾರ್ವತ್ರಿಕ ಚುನಾವಣೆಗಳು ಮತ್ತು 300 ಕ್ಕೂ ಹೆಚ್ಚು ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ನಡೆಸಿದೆ ಎಂದು ಹೇಳಿದರು.
Advertisement
Advertisement
2019ರ ಸಾರ್ವತ್ರಿಕ ಚುನಾವಣೆಯಲ್ಲಿ ಜನರು ಸತತ 2ನೇ ಬಾರಿಗೆ ನನ್ನ ಪಕ್ಷವನ್ನು ಗೆಲ್ಲುವಂತೆ ಮಾಡಿದರು. ಇದು ವಿಶ್ವದ ಅತಿದೊಡ್ಡ ಚುನಾವಣೆಯಾಗಿದೆ. ಇವಿಎಂಗಳ ಬಳಕೆಯು ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸಿದೆ. ಏಕೆಂದರೆ ಈಗ ಮತ ಎಣಿಕೆಯ ಕೆಲವೇ ಗಂಟೆಗಳಲ್ಲಿ ಫಲಿತಾಂಶಗಳನ್ನು ಪ್ರಕಟಿಸಲಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ವಿಭಜಿತ ಜಗತ್ತಿನಿಂದ ಭಯೋತ್ಪಾದನೆ ವಿರುದ್ಧ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ: ಮೋದಿ
Advertisement
ಭಾರತವು ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ನೀಡಲು ನಿರ್ಧರಿಸಿದೆ. ಭಾರತದಲ್ಲಿ ಸ್ಥಳೀಯ ಸ್ವ-ಆಡಳಿತ ಸಂಸ್ಥೆಗಳಲ್ಲಿ ಸುಮಾರು 32 ಲಕ್ಷ ಚುನಾಯಿತ ಪ್ರತಿನಿಧಿಗಳು ಇದ್ದಾರೆ. ಭಾರತವು ಇಂದು ಪ್ರತಿಯೊಂದು ವಲಯದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತದೆ. ಭಾರತದಲ್ಲಿ ನೂರಾರು ಭಾಷೆಗಳನ್ನು ಮಾತನಾಡುತ್ತಾರೆ. ಭಾರತದಲ್ಲಿ 28 ಭಾಷೆಗಳಲ್ಲಿ 900 ಕ್ಕೂ ಹೆಚ್ಚು ಟಿವಿ ಚಾನೆಲ್‌ಗಳಿವೆ. 33,000 ಕ್ಕೂ ಹೆಚ್ಚು ವಿಭಿನ್ನವಾಗಿ ಪತ್ರಿಕೆಗಳು ಸುಮಾರು 200 ಭಾಷೆಗಳಲ್ಲಿ ಪ್ರಕಟವಾಗಿವೆ ಎಂದರು. ಇದನ್ನೂ ಓದಿ: ನಿಮ್ಮ ಜೀವ ಉಳಿಸಿಕೊಳ್ಳಲು ದಕ್ಷಿಣಕ್ಕೆ ತೆರಳಿ- ಗಾಝಾ ನಿವಾಸಿಗಳಿಗೆ ಇಸ್ರೇಲ್ ಮಹತ್ವದ ಸೂಚನೆ
Advertisement
Web Stories