ಕೊಪ್ಪಳ: ವಕ್ಫ್ ಬೋರ್ಡ್‍ನ (Waqf Board) ಲ್ಯಾಂಡ್ ಜಿಹಾದ್‍ನ್ನು ಬಿಜೆಪಿ ಗಂಭೀರವಾಗಿ ತೆಗೆದುಕೊಂಡಿದೆ ಎಂದು ಬಿಜೆಪಿಯ ರಾಷ್ಟ್ರಿಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ (P.Rajeev) ಹೇಳಿದ್ದಾರೆ.
ಕೊಪ್ಪಳದಲ್ಲಿ (Koppal) ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಜಮೀರ್ ಅಹ್ಮದ್ ಅವರು ಮಾನ್ಯ ಸಿಎಂ ಅವರ ಸೂಚನೆಯ ಮೇರೆಗೆ ಅದಾಲತ್ ಮಾಡಿರೋದಾಗಿ ತಿಳಿಸಿದ್ದಾರೆ. ಈ ಬಗ್ಗೆ ಸಿಎಂ ಸ್ಪಷ್ಟನೆ ನೀಡಿಲ್ಲ. ಅವರು ಸುಮ್ಮನಾಗಿರೋದು ನೋಡಿದ್ರೆ ಒಪ್ಪಿಕೊಂಡಿದ್ದಾರೆ ಎಂದರ್ಥ ಎಂದು ಕಿಡಿಕಾರಿದ್ದಾರೆ.
ರೈತರ, ಮಠಮಾನ್ಯಗಳ ಆಸ್ತಿ ವಕ್ಫ್ ಪಾಲಾಗಿರೋದರಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪಾತ್ರ ನೇರವಾಗಿ ಇದೆ. ಸಿಎಂ ಸೂಚನೆ ಇಲ್ಲದೆ ಜಮೀರ್ ಈ ರೀತಿ ಮಾಡಿರೋದೇ ಆದರೆ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು. ಸಿಎಂ ಸೂಚನೆ ನೀಡಿದ್ದರೆ ಅದಕ್ಕೆ ಅವರು ಜನರ ಬಳಿ ಕ್ಷಮೆ ಕೇಳಬೇಕು. ಈ ನಿಟ್ಟಿನಲ್ಲಿ ರಾಜ್ಯದಾದ್ಯಂತ ಹೋರಾಟಕ್ಕೆ ಮುಂದಾಗಿದ್ದೇವೆ. ಅಲ್ಲದೇ ಸದನದ ಒಳಗೆ ಸರ್ಕಾರದ ವೈಪಲ್ಯಗಳನ್ನ ಹಾಗೂ ವಕ್ಫ್ ವಿಚಾರವನ್ನ ಗಂಭೀರವಾಗಿ ತೆಗೆದುಕೊಂಡು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ರಾಜ್ಯ ಬಿಜೆಪಿಯಲ್ಲಿ ಯಾವುದೇ ಬಣಗಳು ಇಲ್ಲ. ಯತ್ನಾಳ್ ಅವರು ವೈಯಕ್ತಿಕವಾಗಿ ಹೋರಾಟ ಮಾಡ್ತಿದ್ದಾರೆ. ಅವರು ಸಹ ನಮ್ಮ ರಾಜ್ಯಾಧ್ಯಕ್ಷರ ಜೊತೆ ಹೋರಾಟಕ್ಕೆ ಬರ್ತಾರೆ ಅದೆಲ್ಲ ಪಕ್ಷದ ಹೈಕಮಾಂಡ್ ಗಮನಿಸುತ್ತಾರೆ. ಹಗರಣಗಳನ್ನು ಹಾಗೂ ವಕ್ಫ್ ವಿಚಾರಗಳನ್ನ ಡೈವರ್ಟ್ ಮಾಡಲು ಕಾಂಗ್ರೆಸ್ ಪ್ರಯತ್ನ ನಡೆಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಉಪಚುನಾವಣೆಯಲ್ಲಿ ಸೋಲಿನ ವಿಚಾರವಾಗಿ, ಉಪಚುನಾವಣೆಗಳಲ್ಲಿ ಆಡಳಿತ ಯಂತ್ರಗಳನ್ನು ಬಳಸಿಕೊಳ್ಳುವ ಮೂಲಕ ಕಾಂಗ್ರೆಸ್‍ಗೆ ಗೆಲುವಾಗಿದೆ. ಜನರು ನಮಗೆ ಬೆಂಬಲ ನೀಡಿದ್ದಾರೆ ಅಂದ್ರೆ ನಾವು ತಪ್ಪು ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳ್ತಾರೆ. ಉಪಚುನಾವಣೆಗಳು ಮುಂದಿನ ಚುನಾವಣೆಯ ದಿಕ್ಸೂಚಿ ಆಗಲ್ಲ ಎಂದಿದ್ದಾರೆ.