Bengaluru CityDistrictsKarnatakaLatestMain Post

ಬಂಜಾರ ಸಮುದಾಯದ ಜನರನ್ನು ಮತಾಂತರ ಮಾಡಲಾಗುತ್ತಿದೆ: ಪಿ. ರಾಜೀವ್

ಬೆಂಗಳೂರು: ಬಂಜಾರ ಸಮುದಾಯದ (Banjara Community) ಜನರನ್ನು ಜಿಹಾದಿ ಮನಸ್ಥಿತಿಗಳು, ಕ್ರೈಸ್ತ ಮಿಷನರಿಗಳು (Christian Missionary) ಮತಾಂತರ ಮಾಡುತ್ತಿದ್ದಾರೆ ಎಂದು ಬಂಜಾರ ಸಮುದಾಯದ ನಾಯಕ ಪಿ.ರಾಜೀವ್ (P. Rajeev) ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ (Benagaluru) ಮಾತನಾಡಿದ ಅವರು, ವ್ಯವಸ್ಥಿತವಾಗಿ ಬಂಜಾರ ಸಮಾಜವನ್ನು ಒಡೆಯುವ ಕೆಲಸ ಆಗುತ್ತಿದೆ. ಜಿಹಾದಿ ಮನಸ್ಥಿತಿ ಹುಟ್ಟು ಹಾಕುವುದು ಮತ್ತು ಕ್ರೈಸ್ತ ಮಿಷನರಿಗಳು ಮತಾಂತರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಒಡಿಶಾದಲ್ಲಿ ಹಳಿ ತಪ್ಪಿ, ನಿಲ್ದಾಣಕ್ಕೆ ಡಿಕ್ಕಿ ಹೊಡೆದ ಗೂಡ್ಸ್ ರೈಲು – 3 ಸಾವು, ಹಲವರಿಗೆ ಗಾಯ

ಉಡುಗೆಯಲ್ಲಿ ನಮ್ಮ ಸಮುದಾಯ ವಿಶೇಷವಾಗಿದೆ. ಒಂದೇ ರೀತಿ ಉಡುಗೆ ಇದೆ. ಆಹಾರ ಪದ್ದತಿ ಒಂದೇ ಇದೆ. ಭಾಷೆಯೂ ಒಂದೇ ಇದೆ. ಕ್ರೈಸ್ತ ಮಿಷನರಿಗಳು ಮತಾಂತರ ಮಾಡುವ ಕೆಲಸ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಸಮುದಾಯದ ಸಮಾವೇಶ ಮಹಾರಾಷ್ಟ್ರದಲ್ಲಿ ಇಟ್ಟುಕೊಂಡಿದ್ದಾರೆ ಎಂದರು.

ಹಿಂದೂ ಭಾಷೆ ಅಶ್ಲೀಲ ಅಂತ ಒಬ್ಬ ರಾಜಕಾರಣಿ ಬಳಸುವುದು ಸರಿಯಲ್ಲ. ಹಿಂದೂಗಳಿಗೆ ಇರುವ ಭೂಮಿ ಭಾರತ ಮಾತ್ರ. ಜನಪ್ರತಿನಿಧಿ ಹಿಂದು ಮತ ಪಡೆದುಕೊಂಡಿರುತ್ತಾನೆ. ಅಂತಹ ಮತದಾರರನ್ನು ಅಶ್ಲೀಲ ಅಂತ ಹೇಳುತ್ತಾರೆ ಅಂದರೆ ಅವರು ಮುಸ್ಲಿಂ ಮತ್ತು ಕ್ರೈಸ್ತ ಮಿಷನರಿಗಳ ಮನಸ್ಥಿತಿ ಇಲ್ಲಿದೆ. ಇಂತಹ ಮನಸ್ಥಿತಿಗಳು ನಮ್ಮ ಸಮುದಾಯವನ್ನು ಮತಾಂತರ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಅಂಕಿಅಂಶಗಳ ಪ್ರಕಾರ ಬಹಳಷ್ಟು ಜನರನ್ನು ಮತಾಂತರ ಮಾಡಿದರು. ಅವರನ್ನು ಘರ್ ವಾಪಸ್ಸಿ ಮಾಡಿಸುವ ಕೆಲಸ ಆಗುತ್ತಿದೆ. ಅಂಕಿ ಅಂಶದ ಪ್ರಕಾರ 1,700 ಕ್ಕಿಂತ ಹೆಚ್ಚು ಕುಟುಂಬಗಳನ್ನು ಘರ್ ವಾಪಸ್ಸಿ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಇಂಡೋನೆಷ್ಯಾದಲ್ಲಿ ಭೂಕಂಪ 40ಕ್ಕೂ ಅಧಿಕ ಸಾವು – 300ಕ್ಕೂ ಹೆಚ್ಚು ಮಂದಿಗೆ ಗಾಯ

ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮ ಮಾಡಲು 75 ವರ್ಷಗಳಿಂದ ಬೇಡಿಕೆ ಇತ್ತು. ಕಾಂಗ್ರೆಸ್ ಸರ್ಕಾರ 65 ವರ್ಷಗಳಲ್ಲಿ ಇದನ್ನು ಮಾಡಿಲ್ಲ. ಬಿಜೆಪಿ ಸರ್ಕಾರ ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮವಾಗಿ ಘೋಷಣೆ ಮಾಡಲಾಗಿದೆ. ಸಿಎಂ ಬೊಮ್ಮಾಯಿ, ಕಂದಾಯ ಸಚಿವ ಅಶೋಕ್ ಕಂದಾಯ ಗ್ರಾಮವನ್ನಾಗಿ ಘೋಷಣೆ ಮಾಡಲಾಗಿದೆ. 75 ಸಾವಿರಕ್ಕೂ ಹೆಚ್ಚು ಲಂಬಾಣಿ ಕುಟುಂಬಗಳಿಗೆ ಹಕ್ಕುಪತ್ರ ನೀಡುವ ಕೆಲಸ ಆಗಿದೆ. ಈಗ ಮತ್ತೆ ಯಾದಗಿರಿ, ಬೀದರ್‍ನ ಸುಮಾರು 60 ಸಾವಿರ ಜನರಿಗೆ ಹಕ್ಕುಪತ್ರ ನೀಡುವ ಕೆಲಸ ಆಗುತ್ತಿದೆ ಅಂದರು.

Live Tv

Leave a Reply

Your email address will not be published. Required fields are marked *

Back to top button