ಶಕ್ತಿಶಾಲಿ ರಾಷ್ಟ್ರವಾಗಿ ರೂಪುಗೊಳ್ಳುತ್ತಿರುವ ಭಾರತ ರಕ್ಷಣಾ ವಲಯಕ್ಕೆ ಹೆಚ್ಚಿನ ಮಹತ್ವ ನೀಡಿದೆ. ಅದರಂತೆ ಶತ್ರು ಸೇನೆಗಳ ವಿರುದ್ಧ ಸಮರ ಸಾರಲು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಶಕ್ತಿಶಾಲಿ ಅಸ್ತ್ರವೊಂದನ್ನ ಭಾರತೀಯ ನೌಕಾಪಡೆ ನಿಯೋಜಿದೆ. ಇದು ಶತ್ರು ಸೇನೆ ಜಲಾಂತರ್ಗಾಮಿಯಿಂದ ನುಸುಳಿದರೂ ಅಥವಾ ಆಗಸದಲ್ಲಿ ದಾಳಿ ನಡೆಸಿದರೂ ಸಮರ್ಥವಾಗಿ ಎದುರಿಸಿ ದೇಶವನ್ನು ರಕ್ಷಣೆ ಮಾಡಲಿದೆ. ಅದೇ ಹಿಂದೂ ಮಹಾಸಾಗರದ ಕಾವಲುಗಾರ ಬೋಯಿಂಗ್ P-8I ಪೋಸೈಡನ್ (P-8I Poseidon) ವಿಮಾನ.
Advertisement
ಹೌದು. ಭಾರತೀಯ ನೌಕಾಪಡೆಯ 312 ಸ್ಕ್ವಾಡ್ರನ್ ಹಿಂದೂ ಮಹಾಸಾಗರ ಪ್ರಾಂತ್ಯದಲ್ಲಿ (IOR) ಕಣ್ಗಾವಲು ಚಟುವಟಿಕೆಗಳಿಗೆ ನಿಯೋಜನೆ ಮಾಡಿರುವ ಬೋಯಿಂಗ್ P-8I ಪೋಸೈಡನ್ ವಿಮಾನ ಅತ್ಯಂತ ಮಹತ್ವದ್ದಾಗಿದೆ. ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ಶತ್ರುಗಳ ಮೇಲೆ ಹದ್ದಿನ ಕಣ್ಣಿಟ್ಟು ಕಾವಲು ಕಾಯುವ ಈ P-8I ತನಗೆ ಸರಿಸಾಟಿಯೇ ಇಲ್ಲವೆಂಬುದನ್ನು ಸಾಬೀತು ಮಾಡಿದೆ. ಆದ್ದರಿಂದಲೇ ಭಾರತೀಯ ನೌಕಾಪಡೆಯಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿದೆ. ಇದನ್ನೂ ಓದಿ: ಜಗತ್ತಿಗೆ ಭಿಕ್ಷುಕರ ರಫ್ತಿನಲ್ಲಿ ಪಾಕಿಸ್ತಾನವೇ ಫಸ್ಟ್ – ಜೇಬುಗಳ್ಳರ ಸಂಖ್ಯೆಯಲ್ಲೂ ಪಾಕಿಸ್ತಾನಿಯರೇ ಹೆಚ್ಚು
Advertisement
ಇನ್ನೂ ಸ್ಕ್ವಾಡ್ರನ್ 312 ಭಾರತದ ರಾಷ್ಟ್ರೀಯ ಹಿತಾಸಕ್ತಿಗಳನ್ನ ಕಾಪಾಡುವ ಉದ್ದೇಶ ಹೊಂದಿದೆ. ಭಾರತೀಯ ನೌಕಾ ಶಸ್ತ್ರಾಸ್ತ್ರ ಸೇವೆಯ (INAS) 312 ಕಡಲ ವಿಚಕ್ಷಣಾ ಸ್ಕ್ವಾಡ್ರನ್ ಪ್ರಸ್ತುತ 12 P-8I ವಿಮಾನಗಳ ಕಾರ್ಯಾಚರಣೆ ನಡೆಸುತ್ತಿದೆ.
Advertisement
Advertisement
ಬೋಯಿಂಗ್ P-8 ವಿಮಾನದ ಭಾರತೀಯ ಆವೃತ್ತಿಯನ್ನು P-8I ಎಂದು ಕರೆಯಲಾಗುತ್ತದೆ. ಅಮೆರಿಕದ ನೌಕಾಪಡೆ ಮತ್ತು ಇತರ ಸೇನಾಪಡೆಗಳು ಬಳಸುವ ಆವೃತ್ತಿಯನ್ನು P-8A ಎಂದು ಕರೆಯಲಾಗುತ್ತದೆ. ಭಾರತ ಸೇನೆ ಒಳಗೊಂಡಿರುವ ಈ 12 ವಿಮಾನಗಳಲ್ಲಿ, 8 ವಿಮಾನಗಳು ಇಂಡಿಯನ್ ನೇವಲ್ ಏರ್ ಸ್ಕ್ವಾಡ್ರನ್ 312 ಎಂದು ಕರೆಯಲಾಗುವ INS ರಾಜಾಲಿಯಲ್ಲಿರುತ್ತವೆ. ರಾಜಾಲಿ ಏರ್‌ಸ್ಟೇಷನ್ ಭಾರತದ ಪೂರ್ವ ಕರಾವಳಿಯಲ್ಲಿ, ತಮಿಳುನಾಡಿನ ಅರಕ್ಕೋಣಮ್‌ನಲ್ಲಿದೆ. ಇನ್ನುಳಿದ 4 ವಿಮಾನಗಳು ಗೋವಾದಲ್ಲಿ ನಿಲುಗಡೆಯಾಗಿರುವ INS (ಭಾರತೀಯ ನೌಕಾಪಡೆಯ ಹಡಗು) ಹನ್ಸಾ ಮೇಲಿದ್ದು, ಇದನ್ನು ಇಂಡಿಯನ್ ನೇವಲ್ ಏರ್ ಸ್ಕ್ವಾಡ್ರನ್ 316 ಎನ್ನಲಾಗುತ್ತದೆ. ಈ ವಿಮಾನವನ್ನು ಕಾಂಡಾರ್ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ.
ಭಾರತೀಯ ನೌಕಾಪಡೆಯ 312 ಸ್ಕ್ವಾಡ್ರನ್ ಲೀಡರ್ ಕಣ್ಣಿಗೆ ಬೀಳದಂತೆ ಯಾವುದೇ ಹಡಗಾಗಲಿ, ಸಬ್‌ಮರೀನ್ (ಜಲಾಂತರ್ಗಾಮಿ) ಆಗಲಿ ಹಿಂದೂ ಮಹಾಸಾಗರ ಪ್ರಾಂತ್ಯವನ್ನು ದಾಟಿ ಹೋಗಲು ಸಾಧ್ಯವಿಲ್ಲ. ಕಳೆದ 10 ವರ್ಷಗಳ ಅವಧಿಯಲ್ಲಿ, P-8I ವಿಮಾನ ಹಿಂದೂ ಮಹಾಸಾಗರ ಪ್ರಾಂತ್ಯದಲ್ಲಿ ಸಕ್ರೀಯವಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಗಮನಾರ್ಹವಾದ 44,000 ಹಾರಾಟ ಗಂಟೆಗಳನ್ನು ದಾಖಲಿಸಿದೆ. ಆ ಮೂಲಕ ಇದು ‘ಹಿಂದೂ ಮಹಾಸಾಗರದ ಕಾವಲುಗಾರ’ ಎಂದೇ ಖ್ಯಾತಿ ಗಳಿಸಿದೆ. ಇದನ್ನೂ ಓದಿ: ಭಾರತದ ಚಂದ್ರಯಾನ-3 ನೌಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದಿಲ್ಲ: ಚೀನಾ ವಿಜ್ಞಾನಿ
P-8I ವಿಮಾನದ ವಿಶೇಷತೆಗಳೇನು?
ಪಿ-8ಐ ಒಂದು ಸಮರ್ಥ ವಿಮಾನವಾಗಿದ್ದು, ಕಡಿಮೆ ಎತ್ತರದಲ್ಲೂ ಹಾರಾಟ ನಡೆಸಿ ರಕ್ಷಣಾ ಕಾರ್ಯಾಚರಣೆಗಳನ್ನ ನಡೆಸಲಿದೆ. ಇದು 41,000 ಅಡಿಗಳಷ್ಟು ಎತ್ತರದಲ್ಲಿಯೂ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದೆ. ಕ್ವಿಕ್ ಟ್ರಾನ್ಸಿಟ್ ಕೈಗೊಳ್ಳಲಿದೆ. ಕ್ವಿಕ್ ಟ್ರಾನ್ಸಿಟ್ ಎಂದರೆ, ಪಿ-8ಐ ವಿಮಾನ ಸಾಕಷ್ಟು ದೂರದ ಪ್ರದೇಶಗಳ ನಡುವೆ ಅತ್ಯಂತ ಕಡಿಮೆ ಸಮಯದಲ್ಲಿ ಕಾರ್ಯಾಚರಣೆ ನಡೆಸುತ್ತದೆ. ಇದರೊಂದಿಗೆ ಸಬ್‌ಮರೀನ್‌ಗಳು (ಜಲಾಂತರ್ಗಾಮಿ) (Submarine), ನೀರಿನ ಮೇಲೆ ಚಲಿಸುವ ನೌಕೆಗಳನ್ನು ಹುಡುಕುವ ಮತ್ತು ರಕ್ಷಣಾ ಕಾರ್ಯಗಳನ್ನು ನಡೆಸಲಿದೆ. ಇದನ್ನೂ ಓದಿ: ಗಗನಯಾತ್ರಿಗಳ ಮೈಕ್ರೋಮೀಟೋರಾಯ್ಡ್ ದಿರಿಸುಗಳ ಕೌತುಕ ಲೋಕದ ಬಗ್ಗೆ ನಿಮಗೆ ಗೊತ್ತಾ?
ಪಿ-8I ವಿಮಾನ ಎರಡು ಇಂಜಿನ್‌ಗಳನ್ನು ಹೊಂದಿದೆ. ಅಂದಾಜು 40 ಮೀಟರ್‌ಗಳಷ್ಟು ಉದ್ದವಿದೆ. ಇದರ ವಿಂಗ್‌ಸ್ಪ್ಯಾನ್ (ರೆಕ್ಕೆಗಳು) ಉದ್ದ 37.64 ಮೀಟರ್‌ಗಳಾಗಿದೆ. ಪ್ರತಿಯೊಂದು ಪಿ-8ಐ ವಿಮಾನವೂ 85,000 ಕೆಜಿ ತೂಕ ಹೊಂದಿದ್ದು, 490 ನಾಟ್ (ಪ್ರತಿ ಗಂಟೆಗೆ 789 ಕಿಲೋಮೀಟರ್) ಗರಿಷ್ಠ ವೇಗದಲ್ಲಿ ಮುನ್ನುಗ್ಗುವ ಸಾಮರ್ಥ್ಯ ಹೊಂದಿದೆ. ಇದು 9 ಸಿಬ್ಬಂದಿ ವಿಮಾನದಲ್ಲಿ ಪ್ರಯಾಣಿಸಬಹುದು. 1,200 ನಾಟಿಕಲ್ ಮೈಲಿ (2,222 ಕಿ.ಮೀ.) ವ್ಯಾಪ್ತಿಯಲ್ಲೂ ಕಾರ್ಯಾಚರಣೆ ನಡೆಸಿ ಶತ್ರುಗಳನ್ನು ಹಿಮ್ಮೆಟಿಸಲಿದೆ. ಆ ಮೂಲಕ ಇದು ಗರಿಷ್ಠ 4 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಬಲ್ಲದು. ಇದನ್ನೂ ಓದಿ: ನೀರಿನ ಸೆಲೆ ಇರುವ ಗ್ರಹ ಪತ್ತೆ; ಇಲ್ಲಿದ್ಯಾ ಜೀವಿಗಳ ನೆಲೆ? – ನಾಸಾ ಹೇಳೋದೇನು?
ಪಿ-8ಐ ವಿಮಾನ ಜಗತ್ತಿನ ಅತ್ಯಾಧುನಿಕ ಆಯುಧಗಳ ವ್ಯವಸ್ಥೆ ಹೊಂದಿದೆ. ಅಂದಾಜು 25 ವರ್ಷಗಳ ಕಾರ್ಯಾಚರಣೆ ಆಯಸ್ಸು ಹೊಂದಿದೆ. ಅಂದ್ರೆ ಇದು ಕಡಲತೀರ ಪ್ರದೇಶದ ಸವಾಲಿನ ವಾತಾವರಣದಲ್ಲೂ 25,000 ಗಂಟೆಗಳ ಹಾರಾಟ ನಡೆಸಲಿದೆ. ಮಂಜುಗಡ್ಡೆಯ ವಾತಾವರಣದಲ್ಲೂ ಕಾರ್ಯಾಚರಣೆ ನಡೆಸಲಿದ್ದು, ಶೋಧ, ರಕ್ಷಣೆ, ಕಳ್ಳ ಸಾಗಾಣಿಕಾ ವಿರೋಧಿ ಕಾರ್ಯಾಚರಣೆ ಮತ್ತು ಸೇನೆಯ ಇತರ ವಿಭಾಗಗಳಿಗೆ ಬೆಂಬಲ ಸೇರಿದಂತೆ ವಿವಿಧ ಕಾರ್ಯಾಚರಣೆಗಳನ್ನು ನಡೆಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ.
ಭಾರತದ ಸಾಗರ ಶಕ್ತಿಯ ಹಿಂದಿನ ತಂತ್ರಜ್ಞಾನ:
ನೌಕಾಪಡೆಯ ವ್ಯವಹಾರಗಳಲ್ಲಿ ಕ್ರಾಂತಿ ನಡೆಯುತ್ತಿರುವ (ರೆವಲ್ಯೂಷನ್ ಇನ್ ನೇವಲ್ ಅಫೇರ್ಸ್ – RNA) ಈ ಕಾಲದಲ್ಲಿ, ತಂತ್ರಜ್ಞಾನ ಯುದ್ಧ ಸಂಬಂಧಿ ಆಯುಧಗಳ ಹಿಂದಿನ ಚಾಲಕಶಕ್ತಿಯಾಗಿದೆ. ಈ ಆಯಾಮದಲ್ಲಿ, ಹಿಂದೂ ಮಹಾಸಾಗರ ಪ್ರಾಂತ್ಯದಲ್ಲಿ ಭಾರತದ ಮಹತ್ತರ ಪಾತ್ರ ಮತ್ತು ಹಿಂದೂ ಮಹಾಸಾಗರದ ಪ್ರಾಮುಖ್ಯತೆಗಳನ್ನು ಕಡೆಗಣಿಸಲು ಸಾಧ್ಯವಿಲ್ಲ. ಸಮುದ್ರದ ಮೂಲಕ ಬರುವ ಅಪಾಯಗಳನ್ನು ಎದುರಿಸುವ ಸಲುವಾಗಿ, ಭಾರತ ಸರ್ಕಾರ ಆಧುನಿಕ ವಿಚಕ್ಷಣೆ ಮತ್ತು ಸೆನ್ಸರ್ ವ್ಯವಸ್ಥೆಗಳಿಗಾಗಿ ಸಾಕಷ್ಟು ಹಣ ಹೂಡಿಕೆ ಮಾಡಿದೆ. ಈ ಎಲ್ಲ ಪ್ರಯತ್ನಗಳೂ ಕರಾವಳಿ ವಿಚಕ್ಷಣೆ ಮತ್ತು ಭದ್ರತಾ ಕ್ರಮಗಳನ್ನು ಹೆಚ್ಚಿಸುವ ಉದ್ದೇಶ ಹೊಂದಿವೆ.
P-8I ಹೇಗೆ ಕಾರ್ಯಾಚರಣೆಗೆ ಸನ್ನದ್ಧವಾಗಿದೆ?
ಜನವರಿ 2009ರಲ್ಲಿ, ಭಾರತವು ಬೋಯಿಂಗ್ ಸಂಸ್ಥೆಯೊಡನೆ ಒಪ್ಪಂದ ಮಾಡಿಕೊಂಡು ಪಿ-8ಐ ಖರೀದಿಸಿತು. ನಂತರ ಇದನ್ನು ಕಡಲ ಗಸ್ತು ವಿಮಾನವಾಗಿ ನಿಯೋಜನೆ ಮಾಡಲಾಯಿತು. ಪಿ-8ಐ ವಿಮಾನ ಹಲವು ರೀತಿಯ ಕಾರ್ಯಾಚರಣೆಗಳಿಗೆ ಪೂರಕವಾಗಿದ್ದು, ಆ್ಯಂಟಿ ಸಬ್‌ಮರೀನ್ ಮತ್ತು ಆ್ಯಂಟಿ ಸರ್ಫೇಸ್ ಯುದ್ಧ ಸಾಮರ್ಥ್ಯ ಹೊಂದಿದೆ. ಅದರೊಡನೆ, ಗುಪ್ತಚರ ಮತ್ತು ಕಣ್ಗಾವಲು (ISR) ಕಾರ್ಯಾಚರಣೆಗಳನ್ನ ನಡೆಸಲಿದೆ. ಭಾರತದ ವಿಶಾಲ ಸಾಗರ ಪ್ರದೇಶಗಳಲ್ಲಿ ಗಸ್ತು ತಿರುಗುತ್ತದೆ. ವಿಮಾನದ ವೇಗ, ನಂಬಿಕಾರ್ಹತೆ, ದೀರ್ಘ ಬಾಳಿಕೆ ಮತ್ತು ಹೊಂದಿಕೊಳ್ಳುವಿಕೆಯ ಕಾರಣದಿಂದ ಇದು ಭಾರತೀಯ ನೌಕಾಪಡೆಯು ಭವಿಷ್ಯದ ಅವಶ್ಯಕತೆಗಳನ್ನೂ ಪೂರೈಸುವ ವಿಶ್ವಾಸ ಗಳಿಸಿದೆ.
ವಿಮಾನ ಜಗತ್ತಿನಾದ್ಯಂತ ಬಿಡಿಭಾಗಗಳು ಮತ್ತು ಸೇವಾ ಜಾಲದ ವ್ಯವಸ್ಥೆಯನ್ನ ಹೊಂದಿದೆ. ಅತ್ಯಾಧುನಿಕ ಸೆನ್ಸಾರ್‌ಗಳು ಮತ್ತು ಡಿಸ್‌ಪ್ಲೇ ತಂತ್ರಜ್ಞಾನವನ್ನ ಒಳಗೊಂಡಿರುವ ಓಪನ್ ಸಿಸ್ಟಮ್ಸ್ ಆರ್ಕಿಟೆಕ್ಚರ್‌ಗಳನ್ನು ಒಳಗೊಂಡಿದೆ. ಓಪನ್ ಸಿಸ್ಟಮ್ಸ್ ಆರ್ಕಿಟೆಕ್ಚರ್ ಎಂದರೆ, ವಿಮಾನವನ್ನು ವಿವಿಧ ಮೂಲಗಳಿಂದ ಪಡೆದುಕೊಳ್ಳುವ ತಂತ್ರಜ್ಞಾನಗಳು ಮತ್ತು ಬಿಡಿಭಾಗಗಳೊಡನೆ ಸುಲಭವಾಗಿ ಕಾರ್ಯಾಚರಿಸುವಂತೆ ನಿರ್ಮಿಸುವುದಾಗಿದೆ. ಆ ಮೂಲಕ ವಿಮಾನವನ್ನು ಭವಿಷ್ಯದಲ್ಲಿ ಮೇಲ್ದರ್ಜೆಗೇರಿಸಲು ಸಾಧ್ಯವಾಗುತ್ತದೆ.
ಭಾರತೀಯ ನೌಕಾಪಡೆಯು ಪಿ-8I ವಿಮಾನವನ್ನು ಸಾಗರ ಕಾರ್ಯಾಚರಣೆಗಳಿಗೆ ಬಳಸಲಾಗುತ್ತದೆ. 2020 ಮತ್ತು 2021ರಲ್ಲಿ ಚೀನಾದೊಡನೆ ಗಡಿ ಉದ್ವಿಗ್ನತೆ ತಲೆದೋರಿದ್ದಾಗ ಇದನ್ನು ಪೂರ್ವ ಲಡಾಖ್ ಪ್ರಾಂತ್ಯದಲ್ಲಿ ಚೀನೀ ಪಡೆಗಳ ಚಲನವಲನಗಳನ್ನು ಗಮನಿಸಲು ಬಳಸಲಾಗಿತ್ತು.
ಮಾಹಿತಿ ಸಂಗ್ರಹ: ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
Web Stories