20ನೇ ಮಹಡಿಯಿಂದ ಬಿದ್ದು OYO Rooms ಸಂಸ್ಥಾಪಕ ರಿತೇಶ್ ಅಗರ್ವಾಲ್ ತಂದೆ ಸಾವು!

Public TV
1 Min Read
Ritesh Agarwal

ಚಂಡೀಗಢ: ಗಗನಚುಂಬಿ ಕಟ್ಟಡದ 20ನೇ ಮಹಡಿಯಿಂದ ಬಿದ್ದು, ಓಯೋ ರೂಮ್ಸ್ (Oyo Rooms) ಸಂಸ್ಥಾಪಕ ರಿತೇಶ್ ಅಗರ್ವಾಲ್ (Ritesh Agarwal) ಅವರ ತಂದೆ ರಮೇಶ್ ಅಗರ್ವಾಲ್ ಅವರು ಮೃತಪಟ್ಟಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಗುರುಗ್ರಾಮದ ಸೆಕ್ಟರ್ 54ರಲ್ಲಿರುವ ಡಿಎಲ್‌ಎಫ್‌ನ ದಿ ಕ್ರೆಸ್ಟ್ ಸೊಸೈಟಿಯ 20ನೇ ಮಹಡಿಯಿಂದ ವ್ಯಕ್ತಿಯೊಬ್ಬರು ಕೆಳಗೆ ಬಿದ್ದಿದ್ದಾರೆ ಎಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಡಿಎಲ್‌ಎಫ್ ಭದ್ರತಾ ಸಿಬ್ಬಂದಿ ಪೊಲೀಸರಿಗೆ ತಿಳಿಸಿದ್ದರು. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮಾರ್ಗ ಮಧ್ಯದಲ್ಲೇ ಅವರು ಮೃತಪಟ್ಟಿದ್ದಾರೆಂದು ವೈದ್ಯರು ದೃಢಪಡಿಸಿದ್ದಾರೆ.

OYO Rooms

ಪೊಲೀಸರ (Police) ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತ್ತು. ಘಟನಾ ಸ್ಥಳದಲ್ಲಿ ಪರಿಶೀಲನೆ ವೇಳೆ, ಕಟ್ಟಡದ ಮೇಲಿನಿಂದ ಬಿದ್ದ ವ್ಯಕ್ತಿ ರಮೇಶ್ ಪ್ರಸಾದ್ ಅಗರ್ವಾಲ್ ಎಂದು ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ರಮೇಶ್ ಅಗರವಾಲ್ ಅವರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲಾಗಿದೆ. ಇದನ್ನೂ ಓದಿ: ಕೋವಿಡ್‌ ಬಳಿಕ ಏರಿಕೆಯಾಗಿದ್ದ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ಬೆಲೆ ಭಾರೀ ಇಳಿಕೆ

ಈ ಕುರಿತು ಪ್ರತಿಕ್ರಿಯಿಸಿರುವ ರಿತೇಶ್ ಅಗರ್ವಾಲ್, ನನಗೆ ನನ್ನ ತಂದೆಯೇ ಮಾರ್ಗದರ್ಶಕರು. ಅವರೇ ನನ್ನ ಶಕ್ತಿ. ಅವರಿಂದು ನಮ್ಮಿಂದ ದೂರವಾಗಿದ್ದಾರೆ. ಅರ್ಥಪೂರ್ಣ ಜೀವನ ನಡೆಸಿದ ಅವರು ನನಗೆ ಪ್ರತಿದಿನ ಸ್ಫೂರ್ತಿಯಾಗಿದ್ದರು. ಅವರ ಪ್ರತಿಯೊಂದು ಮಾತುಗಳು ನನ್ನ ಹೃದಯದಲ್ಲಿ ಆಳವಾಗಿ ಬೇರೂರಿದೆ. ಈ ದುಃಖದ ಸಮಯದಲ್ಲಿ ನನ್ನ ಖಾಸಗಿ ತನವನ್ನೂ ಗೌರವಿಸುವಂತೆ ಎಲ್ಲರಿಗೂ ಮನವಿ ಮಾಡಿಕೊಳ್ಳುತ್ತೇನೆ ಎಂದು ಅವರು ತಿಳಿಸಿದ್ದಾರೆ.

Ritesh Agarwal Family

ಇತ್ತೀಚೆಗಷ್ಟೇ ರಮೇಶ್ ಅವರ 29 ವರ್ಷದ ಮಗ ರಿತೇಶ್ ಅಗರವಾಲ್ ಅವರ ವಿವಾಹವು ಗೀತಾಂಶಾ ಸೂದ್ ಜತೆ ನಡೆದಿತ್ತು. ಮಾರ್ಚ್ 7 ರಂದು ದೆಹಲಿಯ ತಾಜ್ ಪ್ಯಾಲೇಸ್ ಪಂಚತಾರಾ ಹೋಟೆಲ್‌ನಲ್ಲಿ ಅದ್ಧೂರಿ ಆರತಕ್ಷತೆ ಸಹ ನಡೆದಿತ್ತು ಎನ್ನಲಾಗಿದೆ. ಇದನ್ನೂ ಓದಿ: ಸೆಲೆಬ್ರಿಟಿ, ಸಾಮಾಜಿಕ ಮಾಧ್ಯಮ ಪ್ರಭಾವಿಗಳಿಗೆ ಹೊಸ ಗೈಡ್‌ಲೈನ್ಸ್

Share This Article
Leave a Comment

Leave a Reply

Your email address will not be published. Required fields are marked *