ಬೆಂಗಳೂರು: ಆಕ್ಸ್‌ಫರ್ಡ್ ವಿವಿಯ (Oxford University) ಬ್ಲಾಗ್‌ನಲ್ಲಿ ಕರ್ನಾಟಕದ (Karnataka) ಅಭಿವೃದ್ಧಿ ಮಾದರಿಯನ್ನು ಶ್ಲಾಘಿಸಲಾಗಿದೆ ಎಂದು ಎಂದು ರಾಜ್ಯಪಾಲರ ಭಾಷಣದಲ್ಲಿ ಉಲ್ಲೇಖಿಸಲಾಗಿತ್ತು. ಇದರ ಅಸಲಿಯತ್ತನ್ನು ಸದನದಲ್ಲಿ ಆರ್ ಅಶೋಕ್ (R Ashok) ಬಯಲು ಮಾಡಿದ್ದಾರೆ.
ಜೆಹೋಶ್ ಪಾಲ್ ವಿದೇಶಿ ಬ್ಲಾಗ್‌ನಲ್ಲಿ ಈ ಲೇಖನವನ್ನು ಬರೆದಿದ್ದಾರೆ. ಅರ್ಥಶಾಸ್ತ್ರಜ್ಞ ಎಂದು ಹೇಳಿಕೊಳ್ಳುವ ಇವರು ಸಿಎಂ ಸಿದ್ದರಾಮಯ್ಯ(CM Siddaramaiah) ಮತ್ತು ಪ್ರಿಯಾಂಕ್ ಖರ್ಗೆ (Priyank Kharge) ಕಚೇರಿಯಲ್ಲಿ ಕೆಲಸ ಮಾಡಿದ್ದರು. 2018 ರಲ್ಲಿ ಪ್ರಿಯಾಂಕ್ ಖರ್ಗೆಯವರ ಕಚೇರಿಯಲ್ಲಿ ಎರಡು ತಿಂಗಳಲ್ಲಿ ಕೆಲಸ ಮಾಡಿದ್ದ ಜೆಹೋಶ್ ಪಾಲ್ ನಂತರ 2024 ರಲ್ಲಿ ಸಿಎಂ ಕಚೇರಿಯಲ್ಲೂ ಜೆಹೋಶ್ ಪಾಲ್ ಕೆಲಸ ಮಾಡಿದ್ದರು ಎಂದು ತಿಳಿಸಿದರು.
The shameless @INCKarnataka Govt has misused the Hon’ble Governer’s Address to the state legislature by inserting lies and half-truths, in what should have been a report card of the accomplishments of the Govt in the previous year and broad governance agenda for the next year.… pic.twitter.com/gGMSmYo29W
— R. Ashoka (@RAshokaBJP) March 6, 2025
ವಿಶ್ವ ಸಂಸ್ಥೆಯ ಮುಖ್ಯಸ್ಥರೇ ರಾಜ್ಯಕ್ಕೆ ಬಂದು ರಾಜ್ಯದ ಅಭಿವೃದ್ಧಿ ಮಾದರಿ, ಯೋಜನೆಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ ಎಂದು ಆ ಬ್ಲಾಗ್‌ನಲ್ಲಿ ಉಲ್ಲೇಖವಾಗಿದೆ. ಈ ಲೇಖನವನ್ನು 2024 ರ ಮಾರ್ಚ್ 27 ರಂದು ಹ್ಯೂಮನ್ ರೈಟ್ಸ್ ಹಬ್ ಬ್ಲಾಗ್‌ಗೆ ಬರೆಯಲಾಗಿದೆ ಎಂದು ಜೆಹೋಶ್ ಪಾಲ್ ಅವರ ಫೋಟೋವನ್ನು ಅಶೋಕ್ ಸದನದಲ್ಲಿ ಪ್ರದರ್ಶಿಸಿದರು.
ಹೊಗಳುಭಟರಿಂದ ಆ ರೀತಿ ಸಿಎಂ ಬರೆಸಿಕೊಂಡು ಅದನ್ನು ರಾಜ್ಯಪಾಲರ ಭಾಷಣದಲ್ಲಿ ಹೊಗಳಿದ್ದೇ ದೊಡ್ಡ ಅಪಮಾನ ಎಂದು ಅಶೋಕ್ ಕೆಣಕಿದರು.