ಜೈಪುರ: ಮಾಲೀಕತ್ವದ ವಿಚಾರವಾಗಿ ಹಸು ಹಾಗೂ ಕರುವನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪ್ರಸಂಗವು ರಾಜಸ್ತಾನದ ಜೋಧ್‍ಪುರದಲ್ಲಿ ನಡೆದಿದೆ.
ಏನಿದು ಪ್ರಕರಣ?:
ಹಸು ಹಾಗೂ ಕರುವಿನ ಮಾಲೀಕತ್ವದ ವಿಚಾರವಾಗಿ ಪೊಲೀಸ್ ಪೇದೆ ಓಂ ಪ್ರಕಾಶ್ ಹಾಗೂ ಶಿಕ್ಷಕ ಶ್ಯಾಂ ಸಿಂಗ್ ಎಂಬವರ ನಡುವೆ ಜಗಳವಾಗಿತ್ತು. ಈ ಸಂಬಂಧ ಜೋಧ್‍ಪುರ್ ನಿಂದ 9 ಕಿ.ಮೀ. ದೂರದಲ್ಲಿರುವ ಮಾಂಡೋರ್ ಪೊಲೀಸ್ ಠಾಣೆಯಲ್ಲಿ ಆಗಸ್ಟ್ 2018ರಲ್ಲಿ ದೂರು ದಾಖಲಾಗಿತ್ತು.
Advertisement
Advertisement
ವಿಚಾರಣೆ ಹೇಗಿತ್ತು?:
ನ್ಯಾಯಾಲಯದ ಆವರಣಕ್ಕೆ ಹಸು ಹಾಗೂ ಕರುವನ್ನು ಕರೆತಂದಾಗ ಅಲ್ಲಿಗೆ ನ್ಯಾಯಾಧೀಶರು ಆಗಮಿಸಿದರು. ಬಳಿಕ ದೂರುದಾರ ನೀಡಿದ್ದ ಇಬ್ಬರನ್ನೂ ಹಸು ಹಾಗೂ ಕರುವಿನ ಬಳಿ ನಿಲ್ಲುವಂತೆ ಸೂಚಿಸಿದರು. ಹಸು ಹಾಗೂ ಕರುವು ಯಾರ ಮೇಲೆ ಒಲವು ತೋರಿಸುತ್ತಿದೆ ಎನ್ನುವುದನ್ನು ಗಮನಿಸಲಾಯಿತು. ಈ ಮೂಲಕ ಮಾಲೀಕರು ಯಾರು ಎನ್ನುವುದನ್ನು ಪತ್ತೆ ಹಚ್ಚಲು ಪ್ರಯತ್ನಿಸಲಾಯಿತು.
Advertisement
ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮದನ್ ಚೌಧರಿ ಅವರು, ಹಸು ಹಾಗೂ ದೂರುದಾರರ ನಡುವಿನ ಬಾಂಧವ್ಯ ಗಮನಿಸಿದರು. ಬಳಿಕ ದೂರುದಾರರ ಹೇಳಿಕೆ ದಾಖಲಿಸಿಕೊಂಡು ವಿಚಾರಣೆಯನ್ನು ಏಪ್ರಿಲ್ 15ಕ್ಕೆ ಮುಂದೂಡಿದ್ದಾರೆ.