ದಾವಣಗೆರೆ: ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರ ‘ಕಾಪರ್ ಏಜ್ ಗ್ರೂಪ್ ಇನ್ಸ್ಟಿಟ್ಯೂಟ್’ ಮಾಲೀಕ ಶುಕ್ರವಾರ ಸ್ವಗೃಹದಲ್ಲಿ ನೇಣಿಗೆ ಶರಣಾಗಿದ್ದಾರೆ.
ಕಾಪರ್ ಏಜ್ ಗ್ರೂಪ್ ಇನ್ಸ್ಟಿಟ್ಯೂಟ್ ಮಾಲೀಕ ಶರತ್‌ಜಿ.ಎನ್ (34) ನೇಣಿಗೆ ಶರಣಾದ ವ್ಯಕ್ತಿ. ಸ್ಪರ್ಧಾತ್ಮಕ ಪರೀಕ್ಷೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದ ಶರತ್, ಇತ್ತೀಚಿಗೆ ರಾಜಕೀಯದಲ್ಲಿ ಹೆಚ್ಚಿನ ಒಲವು ವ್ಯಕ್ತ ಪಡಿಸಿ ಕಾಂಗ್ರೆಸ್‌ನಲ್ಲಿ (Congress) ಗುರುತಿಸಿಕೊಂಡಿದ್ದರು. ಇದನ್ನೂ ಓದಿ: ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಉಪಚುನಾವಣೆ ಮತ ಎಣಿಕೆ ಆರಂಭ
ಶರತ್ ಹತ್ತಾರು ಕಡೆ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಸಂಸ್ಥೆಗಳನ್ನ ಕೂಡ ಆರಂಭಿಸಿದ್ದರು. ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣಾಗಿದ್ದು, ಆತ್ಮಹತ್ಯೆಯ ಕಾರಣ ನಿಗೂಢವಾಗಿದೆ. ದಾವಣಗೆರೆ (Davanagere) ನಗರದ ವಿದ್ಯಾನಗರ (Vidhyanagara) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಮಹಾರಾಷ್ಟ್ರ ಮತ ಎಣಿಕೆ: ಎನ್‌ಡಿಎಗೆ ಆರಂಭಿಕ ಮುನ್ನಡೆ
- Advertisement