ಬೆಂಗಳೂರು: ವಾಕಿಂಗ್ ಸ್ಟೈಲ್ ಹಾಗೂ ಹಾಕಿರೋ ಚಪ್ಪಲಿ ನೋಡಿಯೇ ಮಾಲೀಕನೊಬ್ಬ ಕಳ್ಳನನ್ನ ಹಿಡಿದಿರೋ ಘಟನೆ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ನಡೆದಿದೆ.
ಇದೇ ತಿಂಗಳ ಮೊದಲ ವಾರದಲ್ಲಿ ಭರತ್ ರಾಥೋಡ್ ಎಂಬವರ ಪುನಾಗರ್ ಫ್ಯಾಷನ್ಸ್ ನಲ್ಲಿ ಕಳ್ಳ ತನ್ನ ಕೈ ಚಳಕ ತೋರಿಸಿ 35,000 ರೂ. ಹಣ ಕಳ್ಳತನ ಮಾಡಿದ್ದಾನೆ. ಕಳ್ಳತನದ ದೃಶ್ಯವಾಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
Advertisement
ಸಿಸಿಟಿವಿ ಹಿಡಿದುಕೊಂಡು ಮಾಲೀಕ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಗೆ ಹೋದರೆ ಎಲೆಕ್ಷನ್ ಮುಗಿದ ಮೇಲೆ ಬಾ ಹೋಗು ಎಂದು ಪೊಲೀಸರು ಹೇಳಿ ವಾಪಸ್ ಕಳುಹಿಸಿದ್ದಾರೆ. ಅಯ್ಯೋ ಹೀಗಾಯ್ತಲ್ಲ ಎಂದು ಮಾಲೀಕ ಭರತ್ ಸಾಕಷ್ಟು ಸಲ ಕಳ್ಳನ ಕೈ ಚಳಕವನ್ನು ಸಿಸಿಟಿವಿಯಲ್ಲಿ ಗಮನಿಸಿದ್ದಾರೆ.
Advertisement
Advertisement
ವಾರದ ಬಳಿಕ ಅದೇ ಕಳ್ಳ ಚಿಕ್ಕಪೇಟೆಯ ಮತ್ತೊಂದು ಬೀದಿಯಲ್ಲಿ ಕಾಣಿಸಿಕೊಂಡಿದ್ದಾನೆ. ಆತನ ವಾಕಿಂಗ್ ಸ್ಟೈಲ್, ಚಪ್ಪಲಿ, ಹೇರ್ ಸ್ಟೈಲ್, ಸಿಸಿಟಿಯಲ್ಲಿ ಸೆರೆಯಾಗಿದ್ದ ವಿಷುವಲ್ಸ್ ಸೇಮ್ ಟು ಸೇಮ್ ಇತ್ತು.
Advertisement
ಮಾಲೀಕ ಭರತ್ ಕಳ್ಳನನ್ನು ಹಿಡಿಯೋಕೆ ಹೋದಾಗ ಓಡಲು ಶುರು ಮಾಡಿದ್ದಾನೆ. ಒಂದು ಕಿಲೋಮೀಟರ್ ವರೆಗೆ ಬೆನ್ನಟ್ಟಿ ಕಳ್ಳನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ರೆ, ಸಿಟಿ ಮಾರ್ಕೆಟ್ ಪೊಲೀಸರು ಬಿಟ್ಟು ಕಳಿಸಿದ್ದಾರೆ.
ಇದೀಗ ಡಿಸಿಪಿ ರವಿ ಚೆನ್ನಣ್ಣನವರ್ ಎಂಟ್ರಿಯಿಂದ ಎಫ್‍ಐಆರ್ ಮಾಡಿ ಶುಕ್ರವಾರ ಕಳ್ಳನನ್ನು ಅರೆಸ್ಟ್ ಮಾಡಿ ಜೈಲಿಗೆ ಅಟ್ಟಿದ್ದಾರೆ.