ಸಾಕುನಾಯಿ ಚಾರ್ಲಿ ಹುಟ್ಟುಹಬ್ಬಕ್ಕಾಗಿ ಬರೋಬ್ಬರಿ 16 ಲಕ್ಷ ರೂ. ಮೌಲ್ಯದ ಮನೆ ಉಡುಗೊರೆ ನೀಡಿದ ಮಾಲೀಕ

Public TV
1 Min Read
DOG HOUSE

320 X 50

ನವದೆಹಲಿ: ಹೆಚ್ಚಿನವರು ತಮ್ಮ ಜನ್ಮದಿನವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸುವುದಲ್ಲದೇ ಆತ್ಮೀಯರಿಂದ ಉಡುಗೊರೆಗಳನ್ನು ಸ್ವೀಕರಿಸುತ್ತಾರೆ. ಆದರೆ ಅಚ್ಚರಿಯೆಂಬಂತೆ ತಮ್ಮ ಮನೆಯ ನಾಯಿಗೆ ಮಾಲೀಕನೊಬ್ಬ ಸುಮಾರು 16 ಲಕ್ಷ ರೂ. ಬೆಲೆಬಾಳುವ ಮನೆ ನಿರ್ಮಿಸುವ ಮೂಲಕ ಅದರ ಬರ್ತ್‌ಡೇಗೆ ವಿಶೇಷವಾದ ಉಡುಗೊರೆ ನೀಡಿದ್ದಾರೆ.

ಮನೆಯಲ್ಲಿರುವ ನಾಯಿಗೆ 20,000 ಡಾಲರ್ (ಅಂದಾಜು 16.4 ಲಕ್ಷ ರೂ.) ಮೌಲ್ಯದ ಮನೆಯನ್ನು ಉಡುಗೊರೆ ನೀಡುವ ವಿಡಿಯೋ ಯೂಟ್ಯೂಬ್‌ನಲ್ಲಿ (Youtube) ವೈರಲ್ ಆಗಿದೆ. ಈ ವಿಡಿಯೋವನ್ನು ನೋಡಿದ ಅನೇಕ ವೀಕ್ಷಕರು ಮನೆಯ ಬಗ್ಗೆ ಅಸೂಯೆ ಪಟ್ಟಿದ್ದು, ಅನೇಕರ ಮನಗೆದ್ದಿದೆ. ಬ್ರೆಂಟ್ ರಿವೆರಾ ಎಂಬ ವ್ಯಕ್ತಿ ಈ ವಿಡಿಯೋವನ್ನು ಯೂಟ್ಯೂಬ್ ಅಲ್ಲಿ ಹಂಚಿಕೊಂಡಿದ್ದಾರೆ. ಕೆಲವೇ ದಿನಗಳಲ್ಲಿ ತಮ್ಮ ಸಾಕುನಾಯಿಯಾದ ಚಾರ್ಲಿಯ ಜನ್ಮದಿನ (Birthday) ಆಚರಿಸಲಿದ್ದು, ಅದಕ್ಕಾಗಿ ಏನಾದರೂ ವಿಶೇಷ ಉಡುಗೊರೆ (Gift) ನೀಡಬೇಕು ಎಂದು ರಿವೆರಾ ಯೋಚಿಸಿದ್ದಾರೆ. ಈ ಹಿನ್ನೆಲೆ ಚಾರ್ಲಿಗೆ ಸುಂದರ ಮನೆಯೊಂದನ್ನು ನಿರ್ಮಿಸಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತಕ್ಕೆ ಕೋಮು ಬಣ್ಣ – ಪೊಲೀಸರಿಂದ ಖಡಕ್ ಎಚ್ಚರಿಕೆ

ತನ್ನ ಸ್ನೇಹಿತನ ಸಹಾಯ ಪಡೆದು ಚಾರ್ಲಿಗೆ ಹೊಸದೊಂದು ಮನೆ ನಿರ್ಮಿಸಿದ್ದು, ಮನೆಯು ಪ್ರತ್ಯೇಕ ಮಲಗುವ ಕೋಣೆ, ವಾಸದ ಕೋಣೆ ಮತ್ತು ಹಿತ್ತಲನ್ನು ಒಳಗೊಂಡಿದೆ. ಅಷ್ಟೇ ಅಲ್ಲದೇ ಮನೆಯು ಟಿವಿಯನ್ನು ಒಳಗೊಂಡಿದ್ದು, ಅಳಿಲುಗಳ ಚಿತ್ರಣವನ್ನು ತೋರಿಸುತ್ತದೆ. ಅದರೊಂದಿಗೆ ಚಾರ್ಲಿಗೆ ಮಲಗಲು ಪ್ರತ್ಯೇಕ ಬೆಡ್‌ವೊಂದನ್ನು ಅಳವಡಿಸಲಾಗಿದೆ. ಚಾರ್ಲಿಗೆ ಬೇಜಾರಾಗದಂತೆ ಅದರೊಂದಿಗೆ ಆಡಲು ಮತ್ತು ಅದರ ಸೇವೆಯನ್ನು ಮಾಡಲು ಒಬ್ಬ ವ್ಯಕ್ತಿಯನ್ನು ನೇಮಿಸಲಾಗಿದೆ. ಇದನ್ನೂ ಓದಿ: ಮದುವೆಯಾಗಿ ಕೊಠಡಿ ಸೇರಿದ ನವದಂಪತಿ ಶವವಾಗಿ ಪತ್ತೆ – ಇಬ್ಬರಿಗೂ ಹೃದಯಾಘಾತ!

ಚಾರ್ಲಿಯ ಹುಟ್ಟುಹಬ್ಬದ ಪಾರ್ಟಿಗೆ ಅದರ ಗೆಳೆಯರ ಬಳಗವನ್ನು ಕೂಡಾ ರಿವೆರಾ ಆಹ್ವಾನಿಸಿದ್ದಾರೆ. ಅಲ್ಲದೇ ಚಾರ್ಲಿಗೆ ಮತ್ತೊಂದು ಉಡುಗೊರೆ ಎಂಬಂತೆ ಪುಟ್ಟ ನಾಯಿಯನ್ನು ಕೂಡಾ ನೀಡಿದ್ದಾರೆ. 10 ನಿಮಿಷಗಳ ಈ ವಿಡಿಯೋ 70 ಲಕ್ಷ ವೀಕ್ಷಣೆ ಕಂಡಿದೆ. ಇದನ್ನೂ ಓದಿ: ಇಂಟರ್‌ಲಾಕ್ ಸಿಸ್ಟಮ್ ಸಮಸ್ಯೆಯಿಂದ ರೈಲು ಅಪಘಾತ ಸಂಭವಿಸಿದೆ – ರೈಲ್ವೇ ಸಚಿವ ಅಶ್ವಿನಿ ವೈಷ್ಣವ್

Share This Article