ದಾವಣಗೆರೆ: ನೆಚ್ಚಿನ ನಾಯಿಗೆ ಮೃತಪಟ್ಟ ಹಿನ್ನೆಲೆಯಲ್ಲಿ ಅಂತಿಮ ದರ್ಶನ ಹಾಗೂ ಅಂತ್ಯ ಸಂಸ್ಕಾರ ನಡೆಸಿದ ಘಟನೆ ದಾವಣಗೆರೆಯ ಗಾಂಧಿನಗರದಲ್ಲಿ ನಡೆದಿದೆ.
ಕಳೆದ 13 ವರ್ಷಗಳಿಂದ ಗಾಂಧಿನಗರದ ಮಂಜು ಹಾಗೂ ಸುನೀಲ್, ಅಡಿವ್ಯಾ ಎನ್ನುವ ನಾಯಿಯನ್ನು ಪ್ರೀತಿಯಿಂದ ಸಾಕಿದ್ದರು. ಆದರೆ ಶುಕ್ರವಾರ ರಾತ್ರಿ ಅನಾರೋಗ್ಯದಿಂದ ನಾಯಿ ಮೃತಪಟ್ಟಿದೆ. ಬಳಿಕ ಪೆಂಡಾಲ್ ಹಾಕಿ ಸಾರ್ವಜನಿಕ ದರ್ಶನಕ್ಕೆ ಇಟ್ಟಿದ್ದಾರೆ. ಅಲ್ಲದೇ ರಾತ್ರಿಯೇ ಭಜನೆ ಮಾಡಿ ಪೂಜೆ ಸಲ್ಲಿಸಿದ್ದಾರೆ.
Advertisement
ಪ್ರೀತಿಯಿಂದ ಸಾಕಿದ ಅಡಿವ್ಯಾನನ್ನು ನೆನೆಪಿಸಿಕೊಂಡು ಕುಟುಂಬ ದುಃಖಿಸುತ್ತಿದೆ. ಇಂದು ಗಾಂಧಿನಗರ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿದೆ. ಮೃತ ನಾಯಿಯ ಅಂತ್ಯಸಂಸ್ಕಾರವನ್ನು ವಿಶಿಷ್ಟ ಸಂಪ್ರದಾಯದಿಂದ ನಡೆಸಿದ್ದಾರೆ.
Advertisement