– ವಾಯು ಪಡೆ, ಕೇಂದ್ರ ಸರ್ಕಾರಕ್ಕೆ ಧನ್ಯವಾದ
ಹೈದರಾಬಾದ್: ಪಾಕಿಸ್ತಾನ ಮೂರ್ಖ ನಿರ್ಧಾರಗಳನ್ನ ಕೈಗೊಂಡರೆ ಅದನ್ನು ಎದುರಿಸಲು ನಮ್ಮ ಸೇನೆ ಸಿದ್ಧವಾಗಿರಬೇಕು ಎಂದು ಆಲ್ ಇಂಡಿಯಾ ಮಜ್ಲಿಸೆ ಇತ್ತೆಹದುಲ್ ಮುಸ್ಲಿಂ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಹೈದರಾಬಾದ್‍ನಲ್ಲಿ ಮಾತನಾಡಿದ ಅವರು, ನಾವು ಊಹಿಸಿದಂತೆ ಭಾರತ ಸರ್ಕಾರ ಹಾಗೂ ವಾಯು ಪಡೆ ಪುಲ್ವಾಮಾ ದಾಳಿಗೆ ಪ್ರತ್ಯುತ್ತರ ನೀಡಿದೆ. ವಾಯುಸೇನೆಗೆ ನಮ್ಮ ಅಭಿನಂದನೆ. ಕೇಂದ್ರ ಸರ್ಕಾರವು ದಿಟ್ಟ ನಿರ್ಧಾವನ್ನು ಕೈಗೊಂಡಿದೆ. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಓವೈಸಿ ತಿಳಿಸಿದರು. ಇದನ್ನೂ ಓದಿ:ಭಾರತದಿಂದ 50 ಉಗ್ರರ ಹತ್ಯೆ: ದಾಳಿ ಒಪ್ಪಿಕೊಂಡ ಪಾಕ್ ಸೇನೆ
Advertisement
Owaisi praises Centre, says India has right to attack in self-defence
Read @ANI story | https://t.co/kPzmwjF1BW pic.twitter.com/jycCaHt5KQ
— ANI Digital (@ani_digital) February 26, 2019
Advertisement
ವಿಶ್ವಸಂಸ್ಥೆಯ ವಿಧಿ 51ರಂತೆ ಭಾರತವು ತನ್ನ ಗಡಿಯನ್ನು ಮತ್ತು ರಕ್ಷಣೆಗಾಗಿ ಅಗತ್ಯ ಕ್ರಮ ಕೈಗೊಂಡಿದೆ. ಸ್ವಯಂ ರಕ್ಷಣೆಗೆ ದಾಳಿ ಮಾಡುವ ಹಕ್ಕನ್ನು ಭಾರತ ಹೊಂದಿದೆ. ಕೇಂದ್ರ ಸರ್ಕಾರವು ಉಗ್ರರಿಗೆ ತಕ್ಕ ಪಾಠ ಕಲಿಸಲು ಸೂಕ್ತ ದಾಳಿ ನಡೆಸಬೇಕೆಂದು ನಾವು ಬಹುದಿನಗಳಿಂದ ಕಾಯುತ್ತಿದ್ದೇವು. ದಾಳಿ ಮಾಡಿದವರು ಮಸೂದ್ ಅಜರ್, ಲಷ್ಕರ್ ಅದು ಯಾರೇ ಆಗಿರಲಿ ನಾನು ಅವುಗಳನ್ನು ತಾಲಿಬಾನ್‍ಗಳು ಎಂತಲೇ ಕರೆಯುತ್ತೇನೆ. ಇಂತಹ ಸೈತಾನ್‍ಗಳನ್ನು ಸರ್ಕಾರ ಹೊಡೆದು ಹಾಕಬೇಕು ಎಂದು ಕಿಡಿಕಾರಿದರು.
Advertisement
ನಾನು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಯಾವುದೇ ಬಗ್ಗೆ ಪ್ರಶ್ನೆ ಮಾಡಲ್ಲ. ಉಗ್ರರನ್ನು ಹೊಡೆದು ಹಾಕುವ ನಿಟ್ಟಿನಲ್ಲಿ ಸರ್ಕಾರ ಕೈಗೊಳ್ಳುವ ಸರ್ಜಿಕಲ್ ಸ್ಟ್ರೈಕ್‍ಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ:ಪಾಕಿಸ್ತಾನದ ಮೊಂಡು ವಾದವನ್ನು ಬಯಲು ಮಾಡಿದ್ರು ಬಾಲಕೋಟ್ ನಿವಾಸಿಗಳು
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv