ಚಿಕ್ಕಬಳ್ಳಾಪುರ: ಕರ್ನಾಟಕ ಹಾಗೂ ಆಂಧ್ರ ಸಾರಿಗೆ ಬಸ್‌ಗಳು ಓವರ್‌ಟೆಕ್ ಪೈಪೋಟಿಗೆ ಬಿದ್ದ ಪರಿಣಾಮ ಬೈಕ್‌ನಲ್ಲಿ ಹೊರಟಿದ್ದ 8 ವರ್ಷದ ಬಾಲಕಿ, ಆಕೆಯ ಸೋದರ ಮಾವ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೊಡ್ಡಬಳ್ಳಾಪುರ (Doddaballapura) ತಾಲೂಕಿನ ಗೊಲ್ಲಹಳ್ಳಿ ಗೇಟ್ ಬಳಿ ನಡೆದಿದೆ.
Advertisement
ಮೃತರನ್ನು 8 ವರ್ಷದ ಮೋನಿಕಾ ಹಾಗೂ ಕೆಳಗಿನಜೋಗಹಳ್ಳಿ ನಿವಾಸಿ ವೆಂಕಟೇಶ್ ಎಂದು ಗುರುತಿಸಲಾಗಿದೆ. ಗೌರಿಬಿದನೂರು-ಬೆಂಗಳೂರು ಹೆದ್ದಾರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಹಿಂದೂಪುರದಿಂದ ಬೆಂಗಳೂರಿಗೆ ಬರುತ್ತಿತ್ತು. ಇದೇ ವೇಳೆ ಎಪಿಎಸ್‌ಆರ್‌ಟಿಸಿ ಬಸ್ ಬಂದಿದ್ದು, ಎರಡು ಬಸ್‌ಗಳ ನಡುವೆ ಓವರ್‌ಟೆಕ್ ಪೈಪೋಟಿ ನಡೆದಿದೆ.ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ – 8ನೇ ವೇತನ ಆಯೋಗ ರಚನೆಗೆ ಸಂಪುಟ ಅನುಮೋದನೆ
Advertisement
Advertisement
ಇದೇ ಸಮಯದಲ್ಲಿ 8 ವರ್ಷದ ಬಾಲಕಿ, ಆಕೆಯ ಸೋದರ ಮಾವನ ಜೊತೆ ಬೈಕ್‌ನಲ್ಲಿ ಹೊರಟಿದ್ದರು. ಬಸ್‌ಗಳ ಮಧ್ಯೆ ಬೈಕ್ ಸವಾರ ಸಿಲುಕಿದ್ದು, ಎಪಿಎಸ್‌ಆರ್‌ಟಿಸಿ ಬಸ್ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ನೆಲಕ್ಕುರುಳಿದ್ದು, ಬೈಕ್ ಮೇಲೆ ಕೆಎಸ್‌ಆರ್‌ಟಿಸಿ ಬಸ್ ಹರಿದಿದೆ.
Advertisement
ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಬಾಲಕಿ ತಲೆಗೆ ಗಂಭೀರ ಗಾಯವಾಗಿತ್ತು. ಬಾಲಕಿಯನ್ನು ಕೂಡಲೇ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾಳೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಎರಡು ಬಸ್‌ಗಳನ್ನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಇದನ್ನೂ ಓದಿ: ನಾನು ಕ್ಷೇಮವಾಗಿದ್ದೇನೆ: ಚೂರಿ ಇರಿತದ ಬಳಿಕ ಸೈಫ್ ಅಲಿ ಖಾನ್ ಫಸ್ಟ್ ರಿಯಾಕ್ಷನ್