ಚಂಡೀಗಢ: ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಜನಸಾಮಾನ್ಯರೊಬ್ಬರ ಟ್ರಕ್ (Truck) ಏರಿ ಪ್ರಯಾಣಿಸಿದ್ದಾರೆ.
ಸೋಮವಾರ ರಾತ್ರಿ ರಾಹುಲ್ ಗಾಂಧಿ ದೆಹಲಿಯಿಂದ (Delhi) ಚಂಡೀಗಢಕ್ಕೆ (Chandigarh) ತೆರಳುತ್ತಿದ್ದ ವೇಳೆ ಹರಿಯಾಣದ (Haryana) ಅಂಬಾಲಾದಿಂದ ಟ್ರಕ್ ಒಂದನ್ನೇರಿ ಪ್ರಯಾಣಿಸಿದ್ದಾರೆ. ಈ ವೇಳೆ ಅವರು ರಾತ್ರಿಯಿಡೀ ನಿದ್ರೆ ಬಿಟ್ಟು ಕೆಲಸ ಮಾಡುವ ಟ್ರಕ್ ಚಾಲಕನ (Driver) ಸಮಸ್ಯೆಗಳನ್ನು ಆಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ट्रक ड्राइवर्स की समस्याओं को जानने के लिये उनके बीच पँहुच जाना और फिर उनके साथ #NH1 पर ट्रक की सवारी करते हुए उनसे बातें करना, ये सिर्फ राहुल गॉंधी ही कर सकते हैं।
कमाल करते हैं आप राहुल जी।@RahulGandhi pic.twitter.com/s2iFTQ1pPw
— Imran Pratapgarhi (@ShayarImran) May 23, 2023
ರಾಹುಲ್ ಗಾಂಧಿ ರಾತ್ರಿ ವೇಳೆ ಟ್ರಕ್ ಏರಿ ಪ್ರಯಾಣಿಸಿರುವುದಕ್ಕೆ ಸಂಬಂಧಪಟ್ಟಂತೆ ಕೆಲ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ. ಕಾಂಗ್ರೆಸ್ ಕಾರ್ಯಕರ್ತರು ಈ ವೀಡಿಯೋಗಳನ್ನು ಪೋಸ್ಟ್ ಮಾಡಿದ್ದು, ರಾಹುಲ್ ಗಾಂಧಿ ಅವರು ಟ್ರಕ್ ಚಾಲಕನ ಸಮಸ್ಯೆಗಳನ್ನು ಆಲಿಸುವ ಸಲುವಾಗಿ ಅವರ ಟ್ರಕ್ ಅನ್ನೇ ಏರಿ ಪ್ರಯಾಣಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇಂದಿನಿಂದ 2,000 ಮುಖಬೆಲೆ ನೋಟು ವಿನಿಮಯ ಪ್ರಕ್ರಿಯೆ ಆರಂಭ
ರಾಹುಲ್ ಗಾಂಧಿ ಪಕ್ಷಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಕಾರ್ಯಕ್ರಮಗಳಿಲ್ಲದ ಕಾರಣ ಶಿಮ್ಲಾಗೆ ತೆರಳುತ್ತಿದ್ದಾರೆ. ಶಿಮ್ಲಾದಲ್ಲಿ ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮ ಕುಟುಂಬದೊಂದಿಗೆ ಇದ್ದು ರಾಗಾ ಕೂಡಾ ಅಲ್ಲಿಗೆ ಪ್ರಯಾಣ ಬೆಳೆಸಿದ್ದಾರೆ. ಇದನ್ನೂ ಓದಿ: ಜನನ, ಮರಣ ಮಾಹಿತಿ ಮತದಾರರ ಪಟ್ಟಿಗೆ ಜೋಡಣೆ – ಶೀಘ್ರವೇ ಮಸೂದೆ ಮಂಡನೆ