ಬೆಂಗಳೂರು: ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡವನ್ನು ಬೆಂಬಲಿಸಿದ್ದ ಅಭಿಮಾನಿಯೊಬ್ಬರು ಒಂದೇ ದಿನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ.
ಶನಿವಾರ ನಡೆದ ಪಂದ್ಯದಲ್ಲಿ ದೀಪಿಕಾ ಘೋಷ್ ಎಂಬವರು ಬೆಂಗಳೂರು ತಂಡವನ್ನು ಧ್ವಜ ಹಿಡಿದು ಬೆಂಬಲಿಸುತ್ತಿದ್ದರು. ಇವರು ಧ್ವಜ ಹಿಡಿದು ಬೆಂಬಲಿಸುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದೇ ತಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Isse tum logo ki hawas ka pta chal raha hai bc , sirf 12 hours me 4.2k se 108k followers ho gaye iske#rcbgirl pic.twitter.com/0HxHyMDlqS
— Saxena Om (@infinitymemer96) May 5, 2019
ಇನ್‍ಸ್ಟಾಗ್ರಾಮ್‍ನಲ್ಲಿ 6 ಸಾವಿರ ಮಂದಿ ಫಾಲೋ ಮಾಡುತ್ತಿದ್ದರೆ ದಿನ ಬೆಳಗಾಗುವುದರ ಒಳಗಡೆ ಒಂದು ಲಕ್ಷಕ್ಕೂ ಅಧಿಕ ಮಂದಿ ಫಾಲೋ ಮಾಡಿದ್ದಾರೆ. ದೀಪಿಕಾ ತಮ್ಮ ಖಾತೆಯಲ್ಲಿ ಬೆಂಗಳೂರು ತಂಡದ ಧ್ವಜ ಹಿಡಿದು ಸಂಭ್ರಮಿಸುತ್ತಿರುವ ವಿಡಿಯೋ ಅಪ್ಲೋಡ್ ಮಾಡಿದ್ದು 13 ಗಂಟೆಯಲ್ಲಿ 7 ಲಕ್ಷ ವ್ಯೂ ಕಂಡಿದೆ.
ಸಾಮಾಜಿಕ ಜಾಲತಾಣದಲ್ಲಿ ದೀಪಿಕಾ ಘೋಷ್ ಭಾವಚಿತ್ರ ಹಾಕಿ ಹಲವಾರು ನಕಲಿ ಖಾತೆಯನ್ನು ಸಹ ತೆರೆಯಲಾಗುತ್ತಿದೆ. ಈ ವಿಚಾರ ತಿಳಿಯುತ್ತಿದ್ದಂತೆ ನನ್ನ ಹೆಸರಿನಲ್ಲಿ ಹಲವಾರು ನಕಲಿ ಖಾತೆಗಳನ್ನು ತೆರೆಯಲಾಗಿದೆ. ಅವುಗಳನ್ನು ಫಾಲೋ ಮಾಡಬೇಡಿ ಎಂದು ದೀಪಿಕಾ ಘೋಷ್ ಪೋಸ್ಟ್ ಪ್ರಕಟಿಸಿದ್ದಾರೆ. ಭಾನುವಾರ ಸಂಜೆಯ ವೇಳೆ ದೀಪಿಕಾ ಇನ್‍ಸ್ಟಾಗ್ರಾಮ್ ಖಾತೆಯನ್ನು 1.30 ಲಕ್ಷ ಮಂದಿ ಫಾಲೋ ಮಾಡಿದ್ದಾರೆ.
https://www.instagram.com/p/BxDY_lnna1L/