ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ಸಂಭವಿಸಿದ ಅಗ್ನಿ ಅವಘಡಕ್ಕೆ ಓವರ್ ಹೀಟ್ ಆಗಿದ್ದ ಕಾರಿನ ಸೈಲೆನ್ಸರ್ ಕಾರಣ ಎಂಬ ಶಂಕೆ ವ್ಯಕ್ತವಾಗಿರುವುದಾಗಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪರಿಶೀಲನೆ ವೇಳೆ ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅವಘಡ ನಡೆದ ಸ್ಥಳದಲ್ಲಿ ಇಂದು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭೇಟಿ ಪರಿಶೀಲನೆ ನಡೆಸಿದರು. ಈ ವೇಳೆ ನಿರ್ಮಲಾ ಸೀತಾರಾಮನ್ ಅವರಿಗೆ ಮಾಹಿತಿ ನೀಡಿದ ಅಧಿಕಾರಿಗಳು, ಪ್ರದರ್ಶನದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಕಾರಿನ ಸೈಲೆನ್ಸರ್ ನಿಂದ ಬೆಂಕಿಯ ಜ್ವಾಲೆ ಆರಂಭವಾಗಿದೆ ಎಂಬ ಬಗ್ಗೆ ವಿವರಣೆ ನೀಡಿದ್ದಾಗಿ ರಕ್ಷಣಾ ವಕ್ತಾರರ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಲಾಗಿದೆ.
Advertisement
RM Smt @nsitharaman reached the #Yelahanka Air Force Station #Bengaluru. She inspected the site of unfortunate fire accident in the Parking Area of AeroIndia 2019.@PMOIndia pic.twitter.com/tbbuj6ZI8Q
— A. Bharat Bhushan Babu (@SpokespersonMoD) February 24, 2019
Advertisement
ಬೆಂಕಿ ಕಾಣಿಸಿಕೊಂಡ ವೇಳೆ ವೇಗದ ಗಾಳಿಯಿಂದ ಕೆಲವೇ ಕ್ಷಣಗಳಲ್ಲಿ ಅಗ್ನಿಯ ಜ್ವಾಲೆ ಹೆಚ್ಚಾಗಿ ಇಡೀ ಪ್ರದೇಶವನ್ನು ಆವರಿಸಿಕೊಂಡಿರುವ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಘಟನೆ ಗಮನಕ್ಕೆ ಬಂದ ಕೂಡಲೇ ವಾಯು ಪಡೆಯ ತುರ್ತು ಸೇವಾ ಅಧಿಕಾರಿಗಳು ಸೇರಿದಂತೆ ಇಲಾಖೆ ಪರಿಹಾರ ಕ್ರಮಗಳನ್ನು ನಡೆಸಿದೆ. ಕೆಲ ವಾಹನಗಳನ್ನು ಬೆಂಕಿಯಿಂದ ರಕ್ಷಣೆ ಮಾಡಿರುವ ಬಗ್ಗೆಯೂ ವಿವರಣೆ ನೀಡಿದ್ದಾರೆ. ಇದನ್ನು ಓದಿ: ಹಣ ಉಳಿಸಲು ಕಾಂಟ್ರ್ಯಾಕ್ಟರ್‌ಗಳು ಮುಂಜಾಗ್ರತ ಕ್ರಮಕೈಗೊಂಡಿಲ್ಲ: ಏರೋ ಶೋ ಹಿಂದಿನ ಕಾಂಟ್ರ್ಯಾಕ್ಟರ್
Advertisement
Within minutes of start of fire, planned response was activated.
There was quick assessment of the situation and joint planning by stakeholders.
Some cars were broke opened ,even when they had started burning.
(2/n)@nsitharaman @PMOIndia pic.twitter.com/yHAGOJVFqx
— A. Bharat Bhushan Babu (@SpokespersonMoD) February 24, 2019
Advertisement
ಅಗ್ನಿ ಅವಘಡದಲ್ಲಿ ಕಾರು ಕಳೆದುಕೊಂಡ ಸಾರ್ವಜನಿಕರಿಗೆ ನೆರವಾಗಲು ಸಹಾಯವಾಣಿಯನು ತೆರಯಲಾಗಿದ್ದು, 94808 01415 ಮತ್ತು 080-2294 2536 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ. ಇತ್ತ ಏರ್ ಶೋನ ಅಂತಿಮ ದಿನದ ಪ್ರದರ್ಶನ ಆರಂಭಗೊಂಡು ಯಾವುದೇ ಅಡೆ ತಡೆ ಇಲ್ಲದೆ ನಡೆಯುತ್ತಿದೆ. ಬೆಂಕಿಯ ಅವಘಡದ ಬಳಿಕವೂ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv