ಶಿವಮೊಗ್ಗ: ಜಗತ್ತಿನಲ್ಲಿ ಇದೂವರೆಗೂ ಆಗಿರುವ ಯುದ್ಧಗಳಲ್ಲಿ ರಾಕೆಟ್ ಬಳಸಿದ ಕೀರ್ತಿ ಮೈಸೂರು ಸಂಸ್ಥಾನಕ್ಕೆ ದೊರಕಿದೆ. 18ನೇ ಶತಮಾನದಲ್ಲಿ ಟಿಪ್ಪು ಮೊದಲ ಬಾರಿಗೆ ಯುದ್ಧದಲ್ಲಿ ರಾಕೆಟ್ ಬಳಸಲಾಗಿತ್ತು ಎಂಬುದಕ್ಕೆ ಸಾಕ್ಷಿಯಾಗಿ ಒಂದು ಸಾವಿರಕ್ಕೂ ಹೆಚ್ಚಿನ ರಾಕೆಟ್‍ಗಳು ಪತ್ತೆಯಾಗಿದೆ.
ಜಿಲ್ಲೆ ಹೊಸನಗರ ತಾಲೂಕು ನಗರದ ಪುರಾತನ ಬಾವಿಯೊಂದರಲ್ಲಿ ರಾಕೆಟ್‍ಗಳು ಪತ್ತೆಯಾಗಿವೆ. ಕಳೆದ ನಾಲ್ಕು ದಿನಗಳಿಂದ ಬಾವಿಯಲ್ಲಿ ಉತ್ಖನನ ನಡೆಸಲಾಗಿತ್ತು. ಸದ್ಯ ಇಲ್ಲಿ ದೊರೆತ ರಾಕೆಟ್‍ಗಳನ್ನು ಶಿವಮೊಗ್ಗದ ಶಿವಪ್ಪನಾಯಕ ಆರಮನೆಯಲ್ಲಿರುವ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಸ್ಥಳಾಂತರಿಸಲಾಗಿದೆ.
Advertisement
Advertisement
ಟಿಪ್ಪು ಯುದ್ಧದಲ್ಲಿ ಬಳಸಿದ್ದ ಎರಡು ರಾಕೆಟ್ ಗಳು ಇಂಗ್ಲೆಂಡ್ ವುಲ್ ವಿಚ್ ವಸ್ತು ಸಂಗ್ರಹಾಲಯದಲ್ಲಿ ಹಾಗೂ 160 ರಾಕೆಟ್ ಗಳು ಬೆಂಗಳೂರಿನ ಸರ್ಕಾರಿ ವಸ್ತು ಸಂಗ್ರಹಾಲಯದಲ್ಲಿ ಸಂಗ್ರಹಿಸಲಾಗಿದೆ. ಇವುಗಳನ್ನು ಹೊರತುಪಡಿಸಿ ಸಾವಿರಕ್ಕೂ ಹೆಚ್ಚು ರಾಕೆಟ್‍ಗಳು ದೊರಕಿರುವುದು ಇದೇ ಮೊದಲು ಎಂದು ಪುರಾತತ್ವ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Advertisement
18ನೇ ಶತಮಾನದಲ್ಲೇ ನಮ್ಮ ನಾಡು ತಂತ್ರಜ್ಞಾನದಲ್ಲಿ ಎಷ್ಟು ಮುಂದಿತ್ತು ಎಂಬುದಕ್ಕೆ ಈ ರಾಕೆಟ್ ಗಳು ಸಾಕ್ಷಿಯಾಗಿವೆ. ಈ ರಾಕೆಟ್ ಗಳನ್ನು ಶಿವಮೊಗ್ಗದ ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿ ಸಂಗ್ರಹಿಸಿಡಲಾಗಿದೆ. ಇವುಗಳ ಬಗ್ಗೆ ಮತ್ತಷ್ಟು ಸಂಶೋಧನೆ ನಡೆಯಬೇಕಿದೆ ಎಂದು ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕರಾದ ಶೇಜೇಶ್ವರ್ ತಿಳಿಸಿದ್ದಾರೆ.
Advertisement
ಈ ಹಿಂದೆ 2002 ರಲ್ಲಿಯೇ ತೀರ್ಥಹಳ್ಳಿಯ ನಿವೃತ್ತ ಪ್ರಾಂಶುಪಾಲ ನಾಗರಾಜ್ ರಾವ್ ಅವರ ತೋಟದ ಬಾವಿಯಲ್ಲಿ ಈ ರಾಕೆಟ್ ಗಳು ಪತ್ತೆಯಾಗಿತ್ತು. ಆದರೆ ಈ ವೇಳೆ ಮಾಹಿತಿ ಕೊರತೆಯಿಂದ ಇವುಗಳನ್ನು ಕೇವಲ ಮದ್ದು ಗುಂಡು ಎಂದು ತಿಳಿಯಲಾಗಿತ್ತು. ಆದರೆ 2007 ರಲ್ಲಿ ಇವುಗಳು ರಾಕೆಟ್ ಎಂದು ಸಂಶೋಧನೆಯಿಂದ ತಿಳಿಯಿತು. ಆ ವೇಳೆಯೇ 120 ರಾಕೆಟ್ ಪತ್ತೆಯಾಗಿತ್ತು, ಇವುಗಳ ಮಾಹಿತಿ ಆಧಾರದ ಮೇಲೆ ಉತ್ಖನನ ನಡೆಸಲಾಯಿತು. ಸತತ ನಾಲ್ಕು ದಿನಗಳ ಉತ್ಖನನ ನಡೆಸಿದ ಬಳಿಕ ಸುಮಾರು 1 ಸಾವಿರಕ್ಕೂ ಹೆಚ್ಚು ರಾಕೆಟ್ ಪತ್ತೆಯಾಗಿದೆ ಎಂದು ತಿಳಿಸಿದರು.