ಫೇಮಸ್ ಯೂಟ್ಯೂಬರ್ (YouTuber), ಮಾಜಿ ಬಿಗ್ ಬಾಸ್ ವಿಜೇತ (Bigg Boss winner) ಹಾಗೂ ನಟನೂ ಆಗಿರುವ ಎಲ್ವಿಶ್ ಯಾದವ್ ಅವ್ರ ಮನೆ ಮೇಲೆ ಇಂದು ಬೆಳಗ್ಗೆ ಭೀಕರ ಗುಂಡಿನ ದಾಳಿ ನಡೆದಿದೆ.
ಬೆಳಗ್ಗೆ 5:30 ರಿಂದ 6 ಗಂಟೆ ಸಮಯದಲ್ಲಿ ಘಟನೆ ನಡೆದಿದೆ. ಮನೆಯ ಬಳಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು 2 ಡಜನ್‌ಗಿಂತಲೂ ಅಧಿಕ ಸುತ್ತು ಗುಂಡು ಹಾಅರಿಸಿ, ಎಸ್ಕೇಪ್ ಆಗಿದ್ದಾರೆ. ಅದೃಷ್ಟವಶಾತ್ ಆ ಸಂದರ್ಭದಲ್ಲಿ ಎಲ್ವಿಶ್ (Elvish Yadav) ಮನೆಯಲ್ಲಿ ಇರಲಿಲ್ಲವಾದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಫೈರಿಂಗ್ (Bullets Fire) ಬಳಿಕ ಇಡೀ ಪ್ರದೇಶದ ಜನರಲ್ಲಿ ಆತಂಕ ಮನೆ ಮಾಡಿದೆ. ಇದನ್ನೂ ಓದಿ: ಬೆಂಗಳೂರು | ಐವರನ್ನು ಬಲಿ ಪಡೆದಿದ್ದ ಅಗ್ನಿ ದುರಂತ ಪ್ರಕರಣ – ಕಟ್ಟಡದ ಮಾಲೀಕ ಅರೆಸ್ಟ್
ಏನಾಯಿತು?
ಎಲ್ವಿಶ್ ಯಾದವ್ ತಮ್ಮ ಯೂಟ್ಯೂಬ್ ಮತ್ತು ಸೋಷಿಯಲ್ ಮೀಡಿಯಾ ಆಕ್ಟಿವಿಟೀಸ್‌ಗಳಿಂದ ಫೇಮಸ್ ಆಗಿದ್ದಾರೆ. ಗುಂಡು ಹಾರಿಸಿದ ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಗುರುಗ್ರಾಮ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಹಳೇ ಅಕ್ರಮ ಸಂಬಂಧಕ್ಕೆ ಶಿಕ್ಷೆ – ಹೆತ್ತ ತಾಯಿಯನ್ನೇ 2 ಬಾರಿ ಅತ್ಯಾಚಾರಗೈದ ಪಾಪಿ ಮಗ
ಮೊದಲಿಗೆ ಮನೆಯವರ ಸುರಕ್ಷತೆಯನ್ನು ಖಚಿತಪಡಿಸಿಕೊಂಡಿದ್ದಾರೆ. ಬಳಿಕ ಸುತ್ತಮುತ್ತಲಿನ ಪ್ರದೇಶದ ಸಿಸಿಟಿವಿ ಕ್ಯಾಮೆರಾಗಳ ತಪಾಸಣೆ ನಡೆಸುತ್ತಿದ್ದಾರೆ. 20 ರಿಂದ 25 ಸುತ್ತು ಗುಂಡು ಹಾರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: Video Viral | ಸ್ವಾತಂತ್ರ‍್ಯ ದಿನಾಚರಣೆಯಂದು ಅಂಚೆ ಕಚೇರಿಯಲ್ಲಿ ಭರ್ಜರಿ ಬಾಡೂಟ; ಕ್ರಮಕ್ಕೆ ಆಗ್ರಹ