ನವದೆಹಲಿ: ಈ ವರ್ಷದ ಆಗಸ್ಟ್ 3 ರಿಂದ ಸೆಪ್ಟೆಂಬರ್ 1 ರ ನಡುವೆ ತಯಾರಿಸಲಾದ ಒಟ್ಟು 9 ಸಾವಿರ ವ್ಯಾಗನ್ ಆರ್, ಸೆಲೆರಿಯೊ ಮತ್ತು ಇಗ್ನಿಸ್(Wagon R, Celerio, Ignis) ಕಾರುಗಳನ್ನು ಮಾರುತಿ ಸುಜುಕಿ(Maruti Suzuki) ಕಂಪನಿ ಹಿಂದಕ್ಕೆ ಪಡೆದಿದೆ.
ಹಿಂಬದಿಯ ಬ್ರೇಕ್ ಅಸೆಂಬ್ಲಿ ಪಿನ್‌ನಲ್ಲಿ ದೋಷ ಇರುವ ಕಾರಣ 9,925 ಯುನಿಟ್ ಕಾರುಗಳನ್ನು ಹಿಂಪಡೆಯಲು ನಿರ್ಧರಿಸಲಾಗಿದೆ ಎಂದು ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿ ಪ್ರಕಟಿಸಿದೆ. ಇದನ್ನೂ ಓದಿ: ಮಾರುತಿಗೆ ಬಂಪರ್ – ನಿವ್ವಳ ಲಾಭ 4 ಪಟ್ಟು ಏರಿಕೆ, ಇನ್ನೂ 4.12 ಲಕ್ಷ ವಾಹನಗಳ ಆರ್ಡರ್ ಬಾಕಿ
Advertisement
Advertisement
ಹಿಂಭಾಗದ ಬ್ರೇಕ್(Rear Brake) ಅಸೆಂಬ್ಲಿ ಪಿನ್‌ನಲ್ಲಿ (‘Part’) ದೋಷ ಇದ್ದ ಕಾರಣ ವಿಚಿತ್ರವಾದ ಶಬ್ದವನ್ನು ಉಂಟುಮಾಡುತ್ತಿತ್ತು. ದೀರ್ಘ ಅವಧಿಯಲ್ಲಿ ಈ ದೋಷವು ಬ್ರೇಕ್ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಕಂಪನಿ ತಿಳಿಸಿದೆ.
Advertisement
ಗ್ರಾಹಕರ ಸುರಕ್ಷತೆಯನ್ನು ಪರಿಗಣಿಸಿ, ತಪಾಸಣೆಗಾಗಿ ವಾಹನವನ್ನು ಹಿಂಪಡೆಯಲು ನಿರ್ಧರಿಸಲಾಗಿದೆ. ದೋಷಯುಕ್ತ ಭಾಗವನ್ನು ಉಚಿತವಾಗಿ ಬದಲಾಯಿಸಲಾಗುವುದು. ಗ್ರಾಹಕರು ಅಧಿಕೃತ ವರ್ಕ್‌ಶಾಪ್‌ಗಳಲ್ಲಿ ಬ್ರೇಕ್ ಕಿಟ್ ಅನ್ನು ಬದಲಾವಣೆ ಮಾಡಿಕೊಳ್ಳಬಹುದು ಎಂದು ಕಂಪನಿ ಮಾಹಿತಿ ನೀಡಿದೆ.