ಮುಗೀತು ಪ್ರತಿಷ್ಠೆಯ ಬೈ ಎಲೆಕ್ಷನ್ : ಮತಯಂತ್ರಗಳಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರ

Public TV
3 Min Read
Gundlupet nanjangud by election 1
110-years -old Devamma being helped to cast her vote at Mukkadahalli during by poll in Gudlupet Constituency on Sunday. -KPN ### by poll in Gundlupet Constituency

– ಏಪ್ರಿಲ್ 13ಕ್ಕೆ ಹೊರ ಬೀಳಲಿದೆ ಫಲಿತಾಂಶ
– ನಂಜನಗೂಡಿನಲ್ಲಿ ಶಾಂತಯುತ, ಗುಂಡ್ಲುಪೇಟೆಯಲ್ಲಿ ಘರ್ಷಣೆ, ಲಾಠಿಚಾರ್ಜ್

ಬೆಂಗಳೂರು: ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಖಾರವಾಗಿ ಮತದಾನ ಅಂತ್ಯವಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತ ಮಧ್ಯೆ ಘರ್ಷಣೆ, ಪೊಲೀಸರು ಲಾಠಿಚಾರ್ಜ್ ಜೊತೆಗೆ ಗುಡುಗು ಸಹಿತವಾಗಿ ಮಳೆರಾಯನೂ ಬಂದಿದ್ದ. ಇನ್ನು, ಓಟ್ ಮಾಡಿದ ಬಳಿಕ ವೃದ್ಧೆಯೊಬ್ರು ಪ್ರಾಣಬಿಟ್ಟ ಘಟನೆಯೂ ನಡೀತು. ಇದೆಲ್ಲದ ಮಧ್ಯೆ, ಶೇಕಡಾ 78ರಷ್ಟು ಮತದಾನವಾಗಿದೆ.

ಸಂಪುಟದಿಂದ ಕೈಬಿಟ್ಟಿದ್ದಕ್ಕೆ ಕೆಂಡಕಾರಿ ಕಮಲ ಸೇರಿದ್ದ ಶ್ರೀನಿವಾಸ್ ಪ್ರಸಾದ್ ಹಾಗೂ ಸ್ನೇಹಿತನೇ ಸವಾಲು ಹಾಕಿದ ಕಾರಣ ಪ್ರತಿಷ್ಠೆಯಾಗಿ ಸ್ವೀಕರಿಸಿದ ಸಿದ್ದರಾಮಯ್ಯ ಮಧ್ಯೆ ನಂಜನಗೂಡು ಭಾರೀ ಕುತೂಹಲ ಕೆರಳಿಸಿದೆ. ಇವತ್ತಿನ ಚುನಾವಣೆಯೂ ಗಮ್ಯತೆಯನ್ನ ಉಳಿಸಿಕೊಂಡಿದೆ. ಯಾಕಂದ್ರೆ, ಶಾಂತಿಯುತವಾಗಿ ನಡೆದಿರುವ ಮತದಾನದಲ್ಲಿ ಜನ ಉತ್ಸಾಹದಿಂದ ಓಟ್ ಮಾಡಿದ್ದಾರೆ. ನಂಜನಗೂಡಿನಲ್ಲಿ ಶೇ.76ರಷ್ಟು ಮತದಾನವಾಗಿದೆ.

ಮಾಜಿ ಸಚಿವ ಮಹದೇವ್‍ಪ್ರಸಾದ್ ಅಕಾಲಿಕ ನಿಧನದಿಂದ ತೆರವಾಗಿದ್ದ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಶೇ.78ರಷ್ಟು ಮತದಾನವಾಗಿದೆ. ಒಂದಷ್ಟು ಗಲಾಟೆ, ಗೊಂದಲ ಹಾಗೂ ಗುಡುಗು ಸಹಿತ ಮಳೆಯಿಂದ ಕೆಲಹೊತ್ತು ಮತದಾನ ವಿಳಂಬವಾಗಿತ್ತು. ಆದ್ರೆ, ಮತದಾನ ಪ್ರಮಾಣ ಹೆಚ್ಚಾಗಿರೋದ್ರಿಂದ ಸೋಲು ಗೆಲುವಿನ ಲೆಕ್ಕಾಚಾರ ಕೂಡ ಭರ್ಜರಿಯಾಗಿ ನಡೀತಿದೆ. ಕಾಂಗ್ರೆಸ್ ಅನುಕಂಪದ ಆಧಾರದಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ರೆ, ಬಿಜೆಪಿನೂ ಗೆಲುವಿನ ಭರವಸೆಯಲ್ಲಿದೆ.

ಗುಂಡ್ಲುಪೇಟೆಯ ಜನರ ಜೊತೆ ಅಭ್ಯರ್ಥಿಗಳು ಹಾಗೂ ಜನಪ್ರತಿನಿಧಿಗಳು ಸಹ ಹಕ್ಕು ಚಲಾಯಿಸಿದ್ರು. ಹಾಲಹಳ್ಳಿಯಲ್ಲಿ ಪತಿಯ ಸಮಾಧಿಗೆ ಪೂಜೆ ಮಾಡಿದ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹ ದೇವಪ್ರಸಾದ್ ಮತದಾನ ಮಾಡಿದ್ರು. ಬಿಜೆಪಿ ಅಭ್ಯರ್ಥಿ ನಿರಂಜನ್ ಕುಮಾರ್ ಕುಟುಂಬ ಸಮೇತ ಚೌಡಳ್ಳಿಯಲ್ಲಿ ಹಕ್ಕು ಚಲಾಯಿಸಿದ್ರು. ಬಳಿಕ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ರು.

ಕೇತ್ರದ ಬೇಗೂರಿನಲ್ಲಿ ಬೆಳಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಘರ್ಷಣೆ ನಡೀತು. ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಕೈ-ಕೈ ಮಿಲಾಯಿಸಿದ್ರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ರು. ಇದ್ರಿಂದ ಆಕ್ರೋಶಗೊಂಡ ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದ್ರು. ಇದರ ಮಧ್ಯೆ, ಕಂದೇಗಾಲ ಬೂತ್‍ನಲ್ಲಿ ಎರಡು ಗಂಟೆ ಮತದಾನ ಸ್ಥಗಿತಗೊಂಡ್ತು.

ರಾಘವಪುರ, ಮಡಹಳ್ಳಿ, ತೆಕಣಾಂಬಿ, ಭೀಮನಬೀಡು ಸೇರಿದಂತೆ ಹಲವು ಮತದಾನ ಕೇಂದ್ರದಲ್ಲಿ ಮತಯಂತ್ರಗಳು ಕೈಕೊಟ್ಟಿದ್ವು. ಕೆಲವೆಡೆ ಮತಯಂತ್ರಗಳನ್ನ ಬದಲಿಸಲಾಯ್ತು. ಇನ್ನೊಂದೆಡೆ ಮೂಲಭೂತ ಸೌಕರ್ಯಕ್ಕೆ ಒತ್ತಾಯಿಸಿ ಮಹದೇವಪ್ರಸಾದ್ ನಗರದ ಮತದಾರರು ಮತ ಚಲಾವಣೆ ಮಾಡೋಕೆ ಹೆಚ್ಚಾಗಿ ಬರಲೇ ಇಲ್ಲ. ಈ ಮಧ್ಯೆ ಹಂಗಳ ಗ್ರಾಮದಲ್ಲಿ ಮತದಾನ ಮಾಡಿ ಮನೆಗೆ ಹೋದ 80 ವರ್ಷದ ವೃದ್ಧೆ ದೇವಮ್ಮ ಅನ್ನೋರು ಇಹಲೋಕ ತ್ಯಜಿಸಿದ್ದಾರೆ.

ಅಂತ್ಯವಾಯ್ತು ಪ್ರತಿಷ್ಠೆಯ ಕಣದ ಎಲೆಕ್ಷನ್
ಇಡೀ ರಾಜ್ಯ ಸರ್ಕಾರವೇ ಅಖಾಡದಲ್ಲಿ ಜಿದ್ದಿಗೆ ಬಿದ್ದಿತ್ತು. ಬಿಜೆಪಿಗೂ ಗೆಲ್ಲಲೇಬೇಕೆಂಬ ಹಠ. ಹೀಗಾಗಿ ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿಂದೆಂದೂ ಕಂಡಿರದ ಪ್ರತಿಷ್ಠೆಯ ಕಣ. ಕೊನೆಗೂ ಎರಡೂ ಕ್ಷೇತ್ರಗಳಲ್ಲಿ ಇಂದು ಮತದಾನ ನಡೀತು. ಅದ್ರಲ್ಲೂ ಸಿಎಂ ಸಿದ್ದರಾಮಯ್ಯ ಹಾಗೂ ಶ್ರೀನಿವಾಸ್ ಮಧ್ಯೆ ಸ್ವಾಭಿಮಾನದ ಸಂಘರ್ಷ ಏರ್ಪಟ್ಟಿರೋ ನಂಜನಗೂಡಿನಲ್ಲಿ ಶಾಂತಯುತ ಮತದಾನವಾಗಿದೆ.

ಸುಡು ಬಿಸಿಲನ್ನು ಲೆಕ್ಕಿಸದೇ ಜನರು ಬೆಳಗ್ಗೆ 7ರಿಂದ ಸಂಜೆ 5 ಗಂಟೆ ತನಕ ಹಕ್ಕು ಚಲಾಯಿಸಿದ್ರು. ಜನರ ಜೊತೆ ಸರತಿನಲ್ಲಿ ನಿಂತ ನಂಜನಗೂಡಿನ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಸ್ವಗ್ರಾಮ ಕಳಲೆಯಲ್ಲಿ ಮತ ಹಾಕಿದ್ರು. ಮತದಾನ ಮಾಡುವಾಗ ಪಕ್ಷದ ಚಿಹ್ನೆ ಹಾಕಿಕೊಳ್ಳೋದಕ್ಕೆ ಅವಕಾಶ ಇಲ್ಲದಿದ್ರೂ ಕೇಶವಮೂರ್ತಿ ಕಾಂಗ್ರೆಸ್ ಶಾಲು ಧರಿಸಿದ್ರು.

ನಂಜನಗೂಡಿನಲ್ಲಿ ಮತದಾನ ಬಹುತೇಕ ಶಾಂತಿಯುತವಾಗಿದ್ರೂ ಒಂದಷ್ಟು ಗೊಂದಲ, ಗದ್ದಲ ಗಲಾಟೆನೂ ಇತ್ತು. ಅಶೋಕಪುರದ ಮತಗಟ್ಟೆಯಲ್ಲಿ ಕೈ ಹಾಗೂ ಕಮಲ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೀತು. ಮತಗಟ್ಟೆ 49ರಲ್ಲಿ ಎಡಗೈ ಬದಲಿಗೆ ಬಲಗೈ ತೋರುಬೆರಳಿಗೆ ಶಾಹಿ ಹಾಕಿದ್ದು ವಿವಾದವಾಯ್ತು. ಇನ್ನೊಂದೆಡೆ, ಗೋಳೂರು ಗ್ರಾಮದಲ್ಲಿ ಮತದಾನಕ್ಕೆ ಬಂದಿದ್ದ 84 ವರ್ಷದ ವೃದ್ಧೆ ನಂಜಮ್ಮ ಹೆಸರು ಇಲ್ಲದ ಕಾರಣ ವಾಪಸ್ ಹೋದ್ರು. ಈ ಮಧ್ಯೆ, ಮಹದೇವನಗರದ ನಿವಾಸಿಗಳು ಅವೈಜ್ಞಾನಿಕವಾಗಿ ಚರಂಡಿ ಕಟ್ಟಿದ್ದನ್ನ ವಿರೋಧಿಸಿ ಮತದಾನವನ್ನೇ ಬಹಿಷ್ಕಾರ ಮಾಡಿದ್ದರು.

ಇನ್ನು, ಸಿಎಂ ಆಪ್ತ ಮರೀಗೌಡ ನಂಜನಗೂಡಿನಲ್ಲಿ ಆಯೋಗದ ಆದೇಶವನ್ನ ಉಲ್ಲಂಘಿಸಿದ್ದಾರೆ. ಮತದಾರರನ್ನ ಹೊರತುಪಡಿಸಿ ಬೇರೆಯವ್ರು ಕ್ಷೇತ್ರ ಬಿಡುವಂತೆ ಆಯೋಗ ಆದೇಶ ಮಾಡಿದ್ದರೂ ಮತದಾರರಲ್ಲದ ಮರೀಗೌಡ ಮಾತ್ರ ಲಿಂಗಣ್ಣ ಸರ್ಕಲ್ ಬಳಿ ಆಪ್ತರ ಜೊತೆ ಸುತ್ತಾಡ್ತಿದ್ರು. ಇದರ ವಿರುದ್ಧ ಮುಖ್ಯ ಚುನಾವಣಾಧಿಕಾರಿಗೆ ಬಿಜೆಪಿ ದೂರು ಕೊಟ್ಟಿದೆ.

Gundlupet nanjangud by election 1 1
110 ವರ್ಷದ ದೇವಮ್ಮ ಅವರು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಮುಕ್ಕದ ಹಳ್ಳಿಯಲ್ಲಿ ಮತದಾನ ಮಾಡಿದರು.

Gundlupet nanjangud by election 2

 

Gundlupet nanjangud by election 3

 

Gundlupet nanjangud by election 4

Gundlupet nanjangud by election 5

Gundlupet nanjangud by election 6

Gundlupet nanjangud by election 7

 

Gundlupet nanjangud by election 8

 

Gundlupet nanjangud by election 9

Gundlupet nanjangud by election 10

Gundlupet nanjangud by election 11

Share This Article
Leave a Comment

Leave a Reply

Your email address will not be published. Required fields are marked *