ಕ್ಯಾನ್ಬೆರಾ: ಖಾಸಗಿ ಶಾಲೆಯೊಂದರಲ್ಲಿ ವ್ಯಾಸಂಗ ಮಾಡಿದ್ದ ಸುಮಾರು 65 ಮಹಿಳೆಯರಿಗೆ ಬಳಸಿದ ಕಾಂಡೋಮ್ ಹಾಗೂ ಮೇಲ್‌ನಿಂದ ಬೆದರಿಕೆ ಸಂದೇಶ ಪತ್ರವನ್ನ ಕಳುಹಿಸಿರುವ ಘಟನೆ ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ನಡೆದಿದೆ.
1990ರ ದಶಕದ ಉತ್ತರಾರ್ಧದಲ್ಲಿ ಮೆಲ್ಬೋರ್ನ್ ಬಳಿಯ ಕ್ಯಾಥೋಲಿಕ್ ಹೈಸ್ಕೂಲ್ ಕಿಲ್ಬ್ರೆಡಾ ಕಾಲೇಜ್ ಮೆಂಟೋನ್‌ನಲ್ಲಿ ವ್ಯಾಸಂಗ ಮಾಡಿದ ಸುಮಾರು 65 ಮಹಿಳೆಯರು ಕಳೆದ 2 ತಿಂಗಳಲ್ಲಿ ವಿಚಿತ್ರ ಮೇಲ್ ಸಂದೇಶವನ್ನ ಸ್ವೀಕರಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
Advertisement
Advertisement
ಇದೊಂದು ಉದ್ದೇಶಿತ ಕೃತ್ಯ ಎಂದು ಕರೆಯಲಾಗಿದ್ದು, ಈ ಘಟನೆ ಹಿಂದಿರುವ ವ್ಯಕ್ತಿಯನ್ನ ಪತ್ತೆಮಾಡಲು ಆಸ್ಟ್ರೇಲಿಯಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. 1999ರ ಶಾಲೆಯ ದಾಖಲಾತಿ ಪುಸ್ತಕದಿಂದ ಮಹಿಳೆಯರ ವಿಳಾಸ ಪಡೆದಿರುವುದಾಗಿ ವಿಕ್ಟೋರಿಯಾ ಪೊಲೀಸ್ ಡಿಟೆಕ್ಟಿವ್ ಸೀನಿಯರ್ ಸಾರ್ಜೆಂಟ್ ಗ್ರಾಂಟ್ ಲೂಯಿಸ್ ತಿಳಿಸಿದ್ದಾರೆ. ಇದನ್ನೂ ಓದಿ: ಮುಂಬೈ ದಾಳಿಯ ಆರೋಪಿ ತಹವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಅನುಮತಿ
Advertisement
Advertisement
ಈ ಕುರಿತು ಮಾತನಾಡಿರುವ ಗ್ರಾಂಟ್ ಲೂಯಿಸ್, ತನಿಖಾಧಿಕಾರಿಗಳು ಅಪರಾಧಿಗಳನ್ನ ಪತ್ತೆಹಚ್ಚಲು ಡಿಎನ್‌ಎ ಮತ್ತು ಕೈಬರಹದ ವಿಶ್ಲೇಷಣೆ ನಡೆಸುತ್ತಿದ್ದಾರೆ. ಸುಮಾರು 24 ವರ್ಷಗಳ ಹಿಂದೆಯೇ ಮಹಿಳೆಯರ ವಿಳಾಸವನ್ನು ಶಾಲೆಯ ದಾಖಲಾತಿ ಪುಸ್ತಕದಿಂದ ಪಡೆದುಕೊಂಡಿದ್ದಾರೆ. ಮಹಿಳೆಯರಿಗೆ ಕಳುಹಿಸಲಾದ ಪತ್ರಗಳು ಕೆಲವು ಕೈಬರಹ ಮತ್ತು ಕೆಲವು ಟೈಪ್ ಮಾಡಿದವುಗಳಾಗಿವೆ. ಆದ್ರೆ ಎಲ್ಲ ಪತ್ರಗಳೂ ಬೆದರಿಕೆಯ ಲೈಂಗಿಕ ಸಂದೇಶಗಳನ್ನು ಒಳಗೊಂಡಿವೆ ಎಂದು ತಿಳಿಸಿದ್ದಾರೆ.
ಅಲ್ಲದೇ, ನಾವು ನಿಮ್ಮನ್ನು ಹುಡುಕೇ ಹುಡುಕುತ್ತೇವೆ. ನೀವು ಇದನ್ನು ಇಲ್ಲಿಗೇ ನಿಲ್ಲಿಸಿದರೆ ಒಳ್ಳೆಯದು ಎಂದು ಪೊಲೀಸರು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಬ್ರಿಜಿಡಿನ್ ಸಿಸ್ಟರ್ಸ್ ಎಂಬವರು 1904ರಲ್ಲಿ ಬಾಲಕಿಯರಿಗಾಗಿ ಸ್ವಾಯತ್ತ ಕ್ಯಾಥೋಲಿಕ್ ಶಾಲೆಯನ್ನ ಸ್ಥಾಪಿಸಿದರು.
ಮೊದಲ ಘಟನೆಯು ಮಾರ್ಚ್ 20 ರಂದು ವರದಿಯಾಗಿತ್ತು. ಸೋಮವಾರ ಮತ್ತೊಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಂತ್ರಸ್ತ ಮಳೆಯರಲ್ಲಿ ಒಬ್ಬರು ತಾನು ಶಾಲಾ ದಾಖಲಾತಿ ಪುಸ್ತಕದಲ್ಲಿ ದಾಖಲಿಸಲಾದ ಹೆಸರಿನಿಂದ ಗುರುತಿಸಿಕೊಂಡಿದ್ದಾಳೆ. ಆಕೆಯ ತಾಯಿ ಸಂದೇಶ ಪತ್ರವನ್ನ ನೋಡಿ ಆಘಾತಗೊಂಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಆ ನಿರ್ದೇಶಕ ಸಾಮರ್ಥ್ಯ ಪರೀಕ್ಷಿಸಿಕೊಳ್ಳಲು ತನ್ನೊಂದಿಗೆ ಮಲಗುವಂತೆ ಕೇಳಿದ್ದ – ಕರಾಳ ನೆನಪು ಬಿಚ್ಚಿಟ್ಟ ಫ್ರೆಂಚ್ ನಟಿ
ಸಂತ್ರಸ್ತ ಮಹಿಳೆಯರಲ್ಲಿ ಒಬ್ಬರಾದ ಬ್ರೀ ಮಾತನಾಡಿ, ನಿಜಕ್ಕೂ ತುಂಬಾ ಅಸಹ್ಯಕರವಾದ ಸಂದೇಶವನ್ನು ಕಳುಹಿಸಲಾಗಿದೆ. ಅದು ಮೇಲ್‌ನಲ್ಲಿ ನಿರೀಕ್ಷಿಸುವ ವಿಷಯವೇ ಅಲ್ಲ. ನಾನು ಆ ರಾತ್ರಿ ನಿದ್ರೆಯೇ ಮಾಡಲಿಲ್ಲ. ನಮ್ಮ ಪೋಷಕರಲ್ಲಿ ಕೆಲವರಿಗೆ ಸಾಕಷ್ಟು ವಯಸ್ಸಾಗಿದೆ. ಕೆಲವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕೆಲವು ಹುಡುಗಿಯರು ಪತ್ರ ನೋಡುತ್ತಿದ್ದಂತೆ ಅಸ್ವಸ್ಥರಾಗಿದ್ದಾರೆ. ನಮ್ಮ ವಿರುದ್ಧ ದ್ವೇಷ ಕಟ್ಟಿಕೊಳ್ಳಲು ಸಾಧ್ಯವೇ ಇಲ್ಲ. ಅಂತಹದ್ದರಲ್ಲಿ ಇದೆಲ್ಲಾ ಹೇಗೆ ಬಂತು ಅನ್ನೋದೇ ಅಚ್ಚರಿಯಾಗುತ್ತಿದೆ ಬ್ರೀ ಹೇಳಿದ್ದಾರೆ.