ನ್ಯೂಯಾರ್ಕ್: ಅಮೆರಿಕದಲ್ಲಿ (America) ಭಾರಿ ಹಿಮಪಾತವಾಗಿದ್ದು (US Snowstorm), 5,600 ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಅಮೆರಿಕದ ಈಶಾನ್ಯ ಭಾಗದಲ್ಲಿ ಮೇರಿಲ್ಯಾಂಡ್‌ನಿಂದ ಮೈನೆವರೆಗೆ ಭಾರಿ ಹಿಮಬಿರುಗಾಳಿ ಅಪ್ಪಳಿಸಿದೆ. ತೀವ್ರವಾದ ಗಾಳಿ ಮತ್ತು ಹಿಮಪಾತದ ಪರಿಣಾಮ ಸಾರಿಗೆ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ವ್ಯಾಪಾರ-ವಹಿವಾಟಿಗೆ ಅಡ್ಡಿಯುಂಟಾಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ಇದನ್ನೂ ಓದಿ: ಫೆ.26ಕ್ಕೆ ಭಾರತಕ್ಕೆ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ
ಕಳೆದ ಒಂದು ದಶಕದಲ್ಲಿ ಅತ್ಯಂತ ಪ್ರಬಲವಾದ ಚಂಡಮಾರುತ ಇದು ಎಂದು ಹವಾಮಾನ ತಜ್ಞರು ವಿಶ್ಲೇಷಿಸಿದ್ದಾರೆ. ಇದು ಮಹಾನಗರದ ಈಶಾನ್ಯದ ಕೆಲವು ಭಾಗಗಳಲ್ಲಿ 2 ಅಡಿ (60 ಸೆಂಟಿಮೀಟರ್) ಗಿಂತ ಹೆಚ್ಚು ಹಿಮವನ್ನು ಸುರಿಸಿದೆ. ಅಧಿಕಾರಿಗಳು ತುರ್ತು ಪರಿಸ್ಥಿತಿಗಳನ್ನು ಘೋಷಿಸಿದ್ದಾರೆ. ಶಾಲೆಗಳನ್ನು ಮುಚ್ಚಲಾಗಿದೆ. ಹಲವೆಡೆ ವಿದ್ಯುತ್ ವ್ಯತ್ಯಯವಾಗಿದ್ದು, ಜನರು ಕತ್ತಲಿಲ್ಲ ದಿನದೂಡುವಂತಾಗಿದೆ.
ಸೋಮವಾರ ಅಮೆರಿಕದಲ್ಲಿ 5,600 ಕ್ಕೂ ಹೆಚ್ಚು ವಿಮಾನಗಳ ಸೇವೆಯನ್ನು ರದ್ದುಗೊಳಿಸಲಾಗಿದೆ. ಮಂಗಳವಾರ ನಿಗದಿಯಾಗಿದ್ದ ಇನ್ನೂ 2,000 ವಿಮಾನಗಳನ್ನು ರದ್ದುಗೊಳಿಸಲಾಯಿತು. ಸುಮಾರು 2,500 ವಿಮಾನಗಳ ಹಾರಾಟದಲ್ಲಿ ವಿಳಂಬವಾಯಿತು. ಇದನ್ನೂ ಓದಿ: ಎಐ ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟನೆ – ಯುವ ಕಾಂಗ್ರೆಸ್ ಮುಖ್ಯಸ್ಥ ಬಂಧನ

