ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಳೆದ ವರ್ಷ ಸುಮಾರು 50,000ಕ್ಕೂ ಅಧಿಕ ಐಟಿ ಉದ್ಯೋಗಿಗಳನ್ನು ವಜಾಗೊಳಿಸಿದ್ದು, ಇದೀಗ ರಿಯಲ್ ಎಸ್ಟೇಟ್ ಉದ್ಯಮಕ್ಕೆ ತೀವ್ರ ಹೊಡೆತ ಬಿದ್ದಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಬೆಂಗಳೂರು ತಂತ್ರಜ್ಞಾನ ಕೇಂದ್ರವಾಗಿದ್ದು, ಐಟಿ ವೃತ್ತಿಪರರಿಗೆ ಆಶ್ರಯ ತಾಣವಾಗಿದೆ. ಲಕ್ಷಾಂತರ ಜನರು ಉದ್ಯೋಗ ಅರಸಿಕೊಂಡು ಬಂದು ಪೇಯಿಂಗ್ ಗೆಸ್ಟ್ ಹಾಗೂ ಇನ್ನಿತರ ಬಜೆಟ್ ಸ್ನೇಹಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆಯ ತ್ವರಿತ ಅಭಿವೃದ್ಧಿಯಿಂದಾಗಿ ಐಟಿ ವಲಯದಲ್ಲಿ ಸಾಮೂಹಿಕವಾಗಿ ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ. ಹೀಗಾಗಿ ನಗರವು ಉದ್ಯೋಗ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಹೇಳಿದೆ.ಇದನ್ನೂ ಓದಿ:ಮಗನ ಮುದ್ದಾದ ಫೋಟೋ ಹಂಚಿಕೊಂಡ ‘ಬಿಗ್ ಬಾಸ್’ ಖ್ಯಾತಿಯ ಕವಿತಾ ದಂಪತಿ
ಈ ಉದ್ಯೋಗ ಬಿಕ್ಕಟ್ಟು ಐಟಿ ವಲಯಕ್ಕೆ ಮಾತ್ರ ಸೀಮಿತವಾಗಿರದೇ ನಗರದ ರಿಯಲ್ ಎಸ್ಟೇಟ್ ಹೂಡಿಕೆ, ಸ್ಥಳೀಯ ವ್ಯವಹಾರಗಳ ಪರಿಣಾಮ ಬೀರಲಿದೆ. ಜೊತೆಗೆ ನಗರದ ಆರ್ಥಿಕ ಸ್ಥಿರತೆಯ ಮೇಲೆಯೂ ಗಂಭೀರ ಪರಿಣಾಮ ಬೀರಲಿದೆ.
ಮುಂಬರುವ ದಿನಗಳಲ್ಲಿ ಐಟಿ ವಲಯದಲ್ಲಿ ಮತ್ತಷ್ಟು ಉದ್ಯೋಗಿಗಳನ್ನು ವಜಾಗೊಳಿಸುವ ಸಾಧ್ಯತೆಯಿದ್ದು, ಕಂಪನಿಗಳು ಎಐ ತಂತ್ರಜ್ಞಾನಕ್ಕೆ ಬದಲಾದಾಗ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ಈ ಮೂಲಕ ಕಡಿಮೆ ವೇತನ ಪಡೆಯುವ ಉದ್ಯೋಗಿಗಳು ದುರ್ಬಲರಾಗುತ್ತಿದ್ದಾರೆ.
ರಿಯಲ್ ಎಸ್ಟೇಟ್‌ಗೆ ತೀವ್ರ ಹೊಡೆತ:
ಉದ್ಯೋಗಿಗಳನ್ನು ವಜಾಗೊಳಿಸುವದರಿಂದ ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ತ್ರೀವ ಪರಿಣಾಮ ಬೀರಲಿದೆ. ಸಾಮಾನ್ಯವಾಗಿ ಕಡಿಮೆ ವೇತನ ಪಡೆಯುವ ಉದ್ಯೋಗಿಗಳು ಕೈಗೆಟುಕುವ ದರದಲ್ಲಿ ದೊರಕುವ ಪಿಜಿ ಹಾಗೂ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಾರೆ. ಉದ್ಯೋಗಿಗಳನ್ನು ವಜಾಗೊಳಿಸುವುದರಿಂದ ಪಿಜಿ ಹಾಗೂ ಬಾಡಿಗೆ ಮನೆಗಳ ಬೇಡಿಕೆಯಲ್ಲಿ ತೀವ್ರ ಕುಸಿತ ಉಂಟಾಗುತ್ತದೆ. ಇದರಿಂದ ರಿಯಲ್ ಎಸ್ಟೇಟ್ ಉದ್ಯಮಿಗಳು ಕೂಡ ಆರ್ಥಿಕ ಒತ್ತಡಕ್ಕೆ ಸಿಲುಕಿಕೊಳ್ಳುತ್ತಾರೆ.
ಜೊತೆಗೆ ರಿಯಲ್ ಎಸ್ಟೇಟ್ ಹೂಡಿಕೆದಾರರಿಗೆ, ವಿಶೇಷವಾಗಿ ಟೆಕ್ ಪಾರ್ಕ್‌ಗಳು ಮತ್ತು ಕಾರ್ಪೊರೇಟ್ ಕಚೇರಿಗಳಿಗೆ ತಾಣವಾದ ಔಟರ್ ರಿಂಗ್ ರಸ್ತೆ ಬಳಿ ಇರುವವರ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆಯಿದೆ.ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳಿಗೆ 56,984 ಕೋಟಿ ರೂ. ಮೀಸಲಿಟ್ಟ ತೆಲಂಗಾಣ ಸರ್ಕಾರ