– 10 ಕಿ.ಮೀವರೆಗೂ ವ್ಯಾಪಿಸಿದ ಸ್ಫೋಟದ ತೀವ್ರತೆ
ಟೆಹ್ರಾನ್: ಇರಾನ್‌ನ (Iran) ಅಬ್ಬಾಸ್ ನಗರದ ಶಾಹಿದ್ ರಾಜೀ ಬಂದರಿನಲ್ಲಿ (Shahid Rajaee Port) ಭಾರೀ ಸ್ಫೋಟ ಸಂಭವಿಸಿದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಒಮಾನ್‌ನಲ್ಲಿ ಇರಾನ್ ಮತ್ತು ಅಮೆರಿಕದೊಂದಿಗೆ (America) ಮೂರನೇ ಸುತ್ತಿನ ಪರಮಾಣು ಒಪ್ಪಂದಗಳ ಕುರಿತು ಮಾತುಕತೆ ನಡೆಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ರಾಜೀ ಬಂದರು ಟೆಹ್ರಾನ್‌ನಿಂದ ಆಗ್ನೇಯಕ್ಕೆ 1,050 ಕಿ.ಮೀ. ದೂರದಲ್ಲಿರುವ ಹಾರ್ಮುಜ್ ಜಲಸಂಧಿಯಲ್ಲಿದೆ. ಇದು ಪರ್ಷಿಯನ್ ಕೊಲ್ಲಿಯ ಕಿರಿದಾದ ದ್ವಾರವಾಗಿದ್ದು, ಈ ಬಂದರಿನ ಮೂಲಕ ವಿಶ್ವದ ಶೇ.2ಂರಷ್ಟು ತೈಲ ವ್ಯಾಪಾರ ನಡೆಯುತ್ತದೆ.ಇದನ್ನೂ ಓದಿ: ಕ್ರೈಸ್ತ ಧರ್ಮಗುರು ಪೋಪ್ ಫ್ರಾನ್ಸಿಸ್‌ಗೆ ಶೋಕಸಾಗರದ ವಿದಾಯ
ಸ್ಫೋಟದ ತೀವ್ರತೆ ಸುಮಾರು 10 ಕಿ.ಮೀವರೆಗೂ ವ್ಯಾಪಿಸಿದ್ದು, ದಟ್ಟವಾದ ಹೊಗೆ ಹೊರಸೂಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸದ್ಯ ಬೆಂಕಿ ನಂದಿಸಲು ಬಂದರಿನ ಚಟುವಟಿಕೆಗಳನ್ನು ನಿಲ್ಲಿಸಲಾಗಿದ್ದು, ಬಂದರಿನಲ್ಲಿದ್ದ ಹಲವಾರು ಕಾರ್ಮಿಕರು ಈ ಅವಘಡದಲ್ಲಿ ಸಿಲುಕಿಕೊಂಡಿದ್ದಾರೆ.
ಈ ಕುರಿತು ಸ್ಥಳೀಯ ಬಿಕ್ಕಟ್ಟು ನಿರ್ವಹಣಾ ಅಧಿಕಾರಿಯೊಬ್ಬರು ಮಾತನಾಡಿ, ಬಂದರಿನ ವಾರ್ಫ್ ಪ್ರದೇಶದಲ್ಲಿ ಸಂಗ್ರಹಿಸಲಾಗಿದ್ದ ಹಲವಾರು ಪಾತ್ರೆಗಳು ಸ್ಫೋಟಗೊಂಡಿರುವ ಕಾರಣದಿಂದ ಈ ಭಾರೀ ಅನಾಹುತ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಸದ್ಯ ಗಾಯಾಳುಗಳನ್ನು ವೈದ್ಯಕೀಯ ಕೇಂದ್ರಗಳಿಗೆ ಸ್ಥಳಾಂತರಿಸುತ್ತಿದ್ದೇವೆ ಎಂದು ತಿಳಿಸಿದರು.
ಇದಕ್ಕೂ ಮುನ್ನ 2020ರಲ್ಲಿ, ಶಾಹಿದ್ ರಾಜೀ ಬಂದರಿನ ಮೇಲೆ ಸೈಬರ್ ದಾಳಿ ನಡೆದಿತ್ತು. ಆ ಸಮಯದಲ್ಲಿ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಗಮನಾರ್ಹ ಹಾನಿಯನ್ನುಂಟುಮಾಡಿತ್ತು.ಇದನ್ನೂ ಓದಿ: ಯಶ್ ನಟನೆಯ ರಾಯಾಯಣ ಚಿತ್ರದ ಫಸ್ಟ್ ಗ್ಲಿಂಪ್ಸ್ WAVES ಶೃಂಗಸಭೆಯಲ್ಲಿ ರಿಲೀಸ್