ಡೆಹ್ರಾಡೂನ್: ಉತ್ತರಾಖಂಡದ (Uttarakhand) ಜೋಶಿಮಠದಲ್ಲಿ (Joshimath) ಇತ್ತೀಚಿನ ದಿನಗಳಲ್ಲಿ 561 ಮನೆಗಳು ಬಿರುಕು (Cracks) ಬಿಟ್ಟಿವೆ. ಕೆಲವು ರಸ್ತೆಗಳಲ್ಲಿಯೂ ಬಿರುಕು ಕಾಣಿಸಿಕೊಂಡಿವೆ. ಜೋಶಿಮಠ ಮುಳುಗುತ್ತಿದೆ (Joshimath Sinking) ಎಂಬ ಆತಂಕ ಇಲ್ಲಿನ ನಿವಾಸಿಗಳು ಹಾಗೂ ಸರ್ಕಾರವನ್ನು ಆತಂಕಕ್ಕೆ ದೂಡಿದೆ. ಬಿರುಕು ಬಿಟ್ಟಿರುವ ಹಿನ್ನೆಲೆಯಲ್ಲಿ ಜನರು ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ. ಭೂಕುಸಿತದಿಂದ (Landslide) ಮನೆ ಕುಸಿದು ಬೀಳುವ ಭೀತಿ ನಗರದ ನಿವಾಸಿಗಳನ್ನು ಕಾಡುತ್ತಿದೆ.
Advertisement
ಉತ್ತರಾಖಂಡದಲ್ಲಿ ಆಗುತ್ತಿರುವ ಈ ಬದಲಾವಣೆ ಹಾಗೂ ಅದರಿಂದಾಗುತ್ತಿರುವ ಹಾನಿಯನ್ನು ನಿರ್ಣಯಿಸಲು ಉತ್ತರಾಖಂಡ ಭಾರತೀಯ ಜನತಾ ಪಕ್ಷ (ಬಿಜೆಪಿ) 14 ಸದಸ್ಯರ ಸಮಿತಿಯನ್ನು ರಚಿಸಿದೆ. ಜಿಲ್ಲೆಯಲ್ಲಿ ಭೂ ಕುಸಿತ ಮುಂದುವರಿದಿದ್ದು, ಮಾರ್ವಾಡಿಯ ಜೆಪಿ ಕಾಲೋನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ 561 ಮನೆಗಳು ಬಿರುಕು ಬಿಟ್ಟಿವೆ. ಭೂಗರ್ಭದಿಂದ ನೀರು ಸೋರಿಕೆಯಾಗುತ್ತಿದೆ ಎಂದು ಚಮೋಲಿ ಜಿಲ್ಲಾ ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ.
Advertisement
Advertisement
ಸಿಂಘಧಾರ್, ಮಾರ್ವಾಡಿ, ಕೆಲವು ಸಾರ್ವಜನಿಕ ರಸ್ತೆಗಳು ಹಾಗೂ ಮುಖ್ಯ ರಸ್ತೆಗಳ ಬಿರುಕುಗಳನ್ನು ಸರಿಪಡಿಸಲಾಗುತ್ತಿದೆ. ಪ್ರತಿ ಗಂಟೆಗೊಮ್ಮೆ ಬಿರುಕುಗಳು ಹೆಚ್ಚಾಗುತ್ತಲೇ ಇವೆ. ಇದು ಆತಂಕಕ್ಕೆ ಕಾರಣವಾಗುತ್ತಿದೆ ಎಂದು ಜೋಶಿಮಠ ಪುರಸಭೆ ಅಧ್ಯಕ್ಷ ಶೈಲೇಂದ್ರ ಪನ್ವಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಮುಂದಿನ ತಿಂಗಳು ಪ್ರಧಾನಿ, ರಾಷ್ಟ್ರಪತಿಗಳಿಂದ ದಶಪಥ ರಸ್ತೆ ಲೋಕಾರ್ಪಣೆ
Advertisement
ಬಿರುಕು ಯಾಕೆ?
ಜೋಶಿಮಠದಲ್ಲಿ ತೀವ್ರವಾಗಿ ರಸ್ತೆ ಹಾಗೂ ಮನೆಗಳಲ್ಲಿ ಬಿರುಕು ಬಿಡುವುದಕ್ಕೆ ಕಾರಣ ಭೂಕುಸಿತ. ಭೂಮಿ ಅಡಿಯಲ್ಲಿರುವ ಬಂಡೆಯಿಂದ ಅಂತರ್ಜಲ ಈಗ ಹರಿದು ಬರುತ್ತಿದೆ. ಗಣಿಗಾರಿಕೆ ಇತ್ಯಾದಿ ಚಟುವಟಿಕೆಯಿಂದ ಅಡಿಯಿಂದ ಅಂತರ್ಜಲ ಅಥವಾ ಇಂಧನದಂತಹ ದ್ರವಗಳನ್ನು ಪಂಪ್ ಮಾಡುವುದರಿಂದ ಶಿಲೆಗಳು ಅದುರುತ್ತಿವೆ. ಇದರಿಂದಾಗಿ ಮಣ್ಣು ಸವೆಯುತ್ತಿದ್ದು ಭೂಮಿ ಬಿರುಕು ಬಿಡುತ್ತಿದೆ.
ಈಗಾಗಲೇ ಜಿಲ್ಲೆಯ 500ಕ್ಕೂ ಹೆಚ್ಚು ಮನೆಗಳು ಹಾನಿಯಾಗಿದ್ದು, ಇದು ಸುಮಾರು 3,000 ಜನರ ಮೇಲೆ ಪರಿಣಾಮ ಬೀರಿದೆ. ಜಿಲ್ಲೆಯ ನಿವಾಸಿಗಳಿಗೆ ಎಲ್ಲಾ ರೀತಿಯ ಅಗತ್ಯಗಳನ್ನು ಪೂರೈಸಲು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಕಸ ಗುಡಿಸುವ ಮೂಲಕ ಕ್ಲೀನ್ ಚಿಕ್ಕಬಳ್ಳಾಪುರ ಅಭಿಯಾನಕ್ಕೆ ಸುಧಾಕರ್ ಚಾಲನೆ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k